ಪ್ರಮುಖ ಸುದ್ದಿ
ಶಹಾಪುರಃ ವೇಶ್ಯಾವಾಟಿಕೆ ಮಹಿಳೆ ಸೇರಿ ಆರೋಪಿ ಬಂಧನ
ವೇಶ್ಯಾವಾಟಿಕೆ ಮಹಿಳೆ, ಓರ್ವ ಆರೋಪಿ ಬಂಧನ
ಶಹಾಪುರ: ನಗರದ ಹೊರವಲಯದ ಮನೆಯೊಂದರಲ್ಲಿ ವೇಶ್ಯಾವಟಿಕೆ ನಡೆಸುತ್ತಿದ್ದ ಮಹಿಳೆ ಹಾಗೂ ಓರ್ವ ಅರೋಪಿಯನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.
ಜೇವರ್ಗಿ ತಾಲ್ಲೂಕಿನ ಚಿಕ್ಕ ಬಿರಾಳ ಗ್ರಾಮದ ಹೇಮರಡ್ಡಿ ಶಿವರಡ್ಡಿ ಬಂಧಿತ ಆರೋಪಿಯಾಗಿದ್ದು, ಹೊರವಲಯದ ಮನೆಗೆ ಮಹಿಳೆಯನ್ನು ಕರೆ ತಂದು ವೇಶ್ಯಾವಟಿಕೆ ನಡೆಸುತ್ತಿದ್ದಾಗ ಆರೋಪಿಯನ್ನು ಬಂಧಿಸಿ 2,700 ರೂ.ವಶಪಡಿಸಿಕೊಳ್ಳಲಾಗಿದೆ ಎಂದು ಶಹಾಪುರ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಹನುಮರಡ್ಡೆಪ್ಪ ತಿಳಿಸಿದ್ದಾರೆ. ಈ ಕುರಿತು ಠಾಣೆಯಲ್ಲಿ ದೂರು ದಾಖಲಾಗಿದೆ.