ಪ್ರಮುಖ ಸುದ್ದಿ
ಚೀನಾ ಕೊರೊನಾ ಭೀತಿಃ ಬಿಲ್ಡಿಂಗ್ ಮೇಲೆಂದ ಪ್ರಾಣಿಗಳನ್ನ ರಸ್ತೆಗೆ ಎಸೆಯುತ್ತಿರುವ ಜನ.?
ಚೀನಾ ಕೊರೊನಾ ಭೀತಿಗೆ ಸಾಕು ಪ್ರಾಣಿಗಳ ಬಲಿ
ಚೀನಾಃ ಚೀನಾದ ಬೀಜಿಂಗ್ ನಲ್ಲಿ ಕೆರೊನಾ ರೋಗ ಪ್ರಾಣಿಗಳಿಂದ ಹರಡಿದೆ ಎಂಬ ಸುಳ್ಳು ಸುದ್ದಿಯನ್ನು ನಂಬಿದ್ದು, ಅಲ್ಲಿನ ಜನ ಇದೀಗ ಸಾಕು ಪ್ರಾಣಿಗಳನ್ನೆ ಬಿಲ್ಡಿಂಗ್ ಮೇಲೆಂದ ಎಸೆಯುತ್ತಿರುವದು ಹೃದಯವಿದ್ರಾವಕಘಟನೆಗಳು ನಡೆಯುತ್ತಿವೆ.
ಸಾಕು ಪ್ರಾಣಿಗಳನ್ನು ಜನರು ಕೆರೋನಾ ವೈರಸ್ ಭೀತಿಯಿಂದ ತಾವೇ ಸಾಕಿ ಸಲುಹಿದ ಪ್ರಾಣಿಗಳನ್ನು ತಮ್ಮ ಕೈಯಾರವೇ ಕೊಲ್ಲುತ್ತಿರುವದರಿಂದ ಸಾಕು ಪ್ರಾಣಿಗಳು ಹೀಗೆ ರಸ್ತೆಯಲ್ಲಿ ಪ್ರಾಣಬಿಡುವಂತಾಗಿದೆ.
ಕೊರೊನಾ ವೈರಸ್ ಪ್ರಾಣಿಗಳಿಂದ ಹರಡುತ್ತಿದೆ ಎಂಬ ಸುಳ್ಳು ಸುದ್ದಿ ಹಬ್ಬಿರುವದೇ ಇದಕ್ಕೆ ಕಾರಣ ಎನ್ನಲಾಗಿದೆ. ಹೀಗಾಗಿ ಬೆಕ್ಕು, ನಾಯಿ ಇತರೆ ಪ್ರಾಣಿಗಳು ಜೀವ ಕಳೆದುಕೊಳ್ಳುವ ದುಸ್ಥಿತಿ ಉಂಟಾಗಿದೆ. ಪ್ರಾಣಿಗಳು ರಕ್ತಸಿಕ್ತದಮಡುವಿನಲ್ಲಿ ರಸ್ತೆ ಮೇಲೆ ಬಿದ್ದಿರುವ ದೃಶ್ಯನಕಲುಕುವಂತಿದೆ ಎಂದು ಹೇಳಲಾಗುತ್ತಿದೆ.