ಪ್ರಮುಖ ಸುದ್ದಿ
ಡಿಸಿಪಿ ವಿರುದ್ಧ ಕರಪತ್ರ ಹಂಚಿ ಪ್ರತಿಭಟಿಸುತ್ತಿದ್ದ ಕೃಷ್ಣಾರಡ್ಡಿ ಬಂಧನ
ಡಿಸಿಪಿ ವಿರುದ್ಧ ಪ್ರತಿಭಟಿಸುತ್ತಿದ್ದ ಕೃಷ್ಣಾರಡ್ಡಿ ಬಂಧನ
ಬೆಂಗಳೂರಃ ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ ಗುಳೇದ್ ವಿರುದ್ಧ ಕರಪತ್ರ ಹಂಚಿ ಪ್ರತಿಭಟನೆಗೆ ಮುಂದಾಗಿದ್ದ ಸಾಮಾಜಿಕ ಹೋರಾಟಗಾರ ರವಿ ಕೃಷ್ಣಾ ರಡ್ಡಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಹಿಂದೆ ಡಿಸಿಪಿಯಾಗಿದ್ದ ಭೀಮಾಶಂಕರ ಗುಳೇದ್ ವಿರುದ್ದ ಸೆಕ್ಸ್ ಸ್ಕ್ಯಾಂಡಲ್ ನಲ್ಲಿ ತೊಡಗಿಸಿಕೊಂಡ ಆರೋಪ ಕೇಳಿ ಬಂದಿತ್ತು. ಇದನ್ನು ಇಟ್ಟುಕೊಂಡು ಸಾಮಾಜಿಕ ಹೋರಾಟಗಾರ ರವಿಕೃಷ್ಣಾ ರಡ್ಡಿ ನೇತೃತ್ವದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪ್ರತಿಭಟನೆಗೆ ಮುಂದಾಗಿತ್ತು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಅಶೋಕ ನಗರ ಠಾಣೆ ಪೊಲೀಸರು ಅವರನ್ನು ಬಂಧಿಸಿದ್ದರು. ನಂತರ ಜಾಮೀನು ಪಡೆದು ರಡ್ಡಿ ಹೊರ ಬಂದಿದ್ದಾರೆ.