ಪ್ರಮುಖ ಸುದ್ದಿ
ತಳವಾರ, ಪರಿವಾರ, ಸಿದ್ಧಿ ಸಮುದಾಯ ಎಸ್ಟಿ ಗೆ ಮಸೂದೆ ಅಂಗೀಕಾರ- ಶ್ರೀರಾಮುಲು
ಬೆಂಗಳೂರಃ ತಳವಾರ, ಪರಿವಾರ ಮತ್ತು ಸಿದ್ದಿ ಸಮುದಾಯವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ (ಎಸ್ಟಿ) ಸೇರಿಸುವ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ.
ತಳವಾರ ಮತ್ತು ಪರಿವಾರ ಸಮುದಾಯದ ಹಲವು ವರ್ಷಗಳ ಕನಸನ್ನು ನನಸು ಮಾಡಿದ ಪ್ರಧಾನಿ ನರೇಂದ್ರ ಮೋದಿಜಿಯವರಿಗೆ ಟ್ವಿಟರ್ ಮೂಲಕ ಅಭಿನಂದನೆ ವ್ಯಕ್ತಪಡಿಸಿದ ಸಚಿವ ಶ್ರೀರಾಮುಲು, ಹಲವಾರು ವರ್ಷಗಳಿಂದ ಈ ಸಮುದಾಯಗಳು ಮೀಸಲಾತಿ ಕುರಿತು ಬೇಡಿಕೆ ಸಲ್ಲಿಸಿದ್ದವು, ಪ್ರಸಕ್ತ
ಬಿಜೆಪಿ ಈ ಸಮುದಾಯಗಳಿಗೆ ನ್ಯಾಯ ಒದಗಿಸಿಕೊಟ್ಟಿದೆ ಎಂದಿದ್ದಾರೆ. ಅಲ್ಲದೆ ಕೇಂದ್ರದ ಬಿಜೆಪಿ ಸಕಾರಕ್ಕೆ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.