ಪ್ರಮುಖ ಸುದ್ದಿ
ಶಹಾಪುರಃ ಬಸ್ – ಲಾರಿ ನಡುವೆ ಭಾರಿ ಅಪಘಾತ ಹಲವರಿಗೆ ಗಾಯ
ಬಸ್ – ಲಾರಿ ಡಿಕ್ಕಿ ಹಲವರಿಗೆ ಗಾಯ
ಶಹಾಪುರಃ ಬಸ್ ಚಾಲಕನ ನಿರ್ಲಕ್ಷದಿಂದಾಗಿ ಎದುರು ಬದಿ ಬರುತ್ತಿರುವ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಬಸ್ ನ ಒಂದು ಬದಿ ಪೂರ್ಣ ಪ್ರಮಾಣ ನುಜ್ಜುಗುಜ್ಜಾಗಿದ್ದು, ಅದೃಷ್ಟ ವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಹಲವರು ಗಂಭೀರಗಾಯಗೊಂಡ ಘಟನರ ತಾಲೂಕಿನ ಹುಲಕಲ್ ಸಮೀಪ ಶಹಾಪುರ – ಕಲಬುರ್ಗಿ ಮಾರ್ಗದ ಹೆದ್ದಾರಿ ಮೇಲೆ ನಡೆದಿದೆ.
ಬಸ್ ನಲ್ಲಿದ್ದ ಹಲವರು ಗಾಯಗೊಂಡಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಪ್ರಯಾಣಿಕರು ಬಸ್ ಚಾಲಕನ ನಿರ್ಲಕ್ಷವೇ ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭೀಮರಾಯನ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.