ಪ್ರಮುಖ ಸುದ್ದಿ

ಪಂಚಮಸಾಲಿ‌ ಶಾಸಕರ ಸಭೆಃ ಸಿಎಂಗೆ ಟೆನ್ಷನ್.?

ವಿವಿ‌ಡೆಸ್ಕ್ಃ ಶೆಟ್ಡರ್ ಮನೆಯಲ್ಲಿ ಕಲ್ಯಾಣ‌ ಕರ್ನಾಟಕ ಭಾಗದ ಶಾಸಕರ ಸಭೆ ಸೇರಿ ಪಕ್ಷದ ಆಡಳಿತ ಕುರಿತು ಮತ್ತು ಸಚಿವ ಸ್ಥಾನ ಪಡೆಯುವ ಒತ್ತಡ ಹೇರುವ ಬಗ್ಗೆ ಚರ್ಚೆ ನಡೆಸಿದ್ದರು. ಇದು ಬಿಜೆಪಿಯಲ್ಲಿ ಭಿನ್ನಮತ ಸೃಷ್ಟಿಗೆ ಕಾರಣವಾಗಿದೆ ಎಂದು ಬಿಂಬಿಸಲಾಗಿತ್ತು.

ಇದೀಗ ಪಂಚಮಸಾಲಿಯ ಶಾಸಕರಿಬ್ಬರಿಗೆ ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ನೀಡಬೇಕೆಂದು ಸಿಎಂ ಮೇಲೆ ಒತ್ತಡ ಹೇರುವ ಹಿನ್ನೆಲೆ ಮಂಗಳವಾರ ರಾತ್ರ ಸಭೆ‌ ನಡೆದಿದೆ ಎನ್ನಲಾಗಿದೆ.

ಕೂಡಲಸಂಗಮ ಪಂಚಮಸಾಲಿ ಪೀಠದ ಜಯ ಮೃತ್ಯಂಜಯ ಸ್ವಾಮೀಜಿಯ ನೇತೃತ್ವದಲ್ಲಿ ಸಭೆ ನಡೆದಿರುವದು ಬಿಜೆಪಿಯಲ್ಲಿ ತಲ್ಲಣ ಮೂಡಿಸಿದೆ ಎನ್ನಲಾಗಿದೆ.

ಶಾಸಕ ಮಹೇಶ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ಮತ್ತು ಮೋಹನ ಲಿಂಬೆಕಾಯಿ ಅವರಿಗೆ ಎಂಎಲ್ಸಿ ಸ್ಥಾನ ಬೇಡಿಕೆ ಕುರಿತು ಪಂಚಮಸಾಲಿ ಶಾಸಕರು ಸ್ವಾಮೀಜಿ ಉಪಸ್ಥಿತಿ ಯಲ್ಲಿ ಚರ್ಚೆ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಎಂಎಲ್ಸಿ ಸ್ಥಾನ ಸೇರಿದಂತೆ ಇತರೆ ಪ್ರಮುಖ ಸ್ಥಾನಮಾನ ಪಡೆಯುವ ಹಿನ್ನೆಲೆಯಲ್ಲಿ ಸಭೆ ನಡೆದಿದೆ‌ ಎಂದು ತಿಳಿದು ಬಂದಿದೆ.

ಸಿಎಂ ಯಡಿಯೂರಪ್ಪ ಮೇಲೆ ಒತ್ತಡ ಏರುವ ಹಲವು ತಂತ್ರಗಾರಿಕೆಯನ್ನು ಕೆಲವರು ಪಕ್ಷದಲ್ಲಿ‌ರುವ ಪ್ರಮುಖರೇ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಆದರೆ ಪಕ್ಷದ ಕೆಲ ಸಚಿವರು ಇವೆಲ್ಲ ಉಹಾಪೋಹ ಇದಕ್ಯಾವ ಪುಷ್ಠಿ ನೀಡುವ ಅಗತ್ಯವಿಲ್ಲ ಎಂಬ ಉತ್ತರ ನೀಡುತ್ತಿದ್ದು, ಯಡಿಯೂರಪ್ಪನವರು ಮೂವರು ವರ್ಷ‌ ಯಾವುದೇ ತೊಂದರೆ ಇಲ್ಲದೆ ಸರ್ಕಾರ ನಡೆಸಲಿದ್ದಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button