ವಂಶ, ಮುಂದಿನ ಪೀಳಿಗೆ ಸುಸ್ಥಿರವಾಗಿರಲು ಏನು ಮಾಡಬೇಕು.?
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ನಿಮ್ಮ ಸಮಸ್ಯೆಗಳಿಗೆ ಶಾಸ್ತ್ರಧಾರಿತ ಅಂತಿಮ ಪರಿಹಾರ.
ಇಂದೇ ಕರೆ ಮಾಡಿ.
9945098262
ದಾನದಲ್ಲಿ ಹಲವು ವಿಧಗಳು..
ತನ್ನ ಬಳಿಯಲ್ಲಿ ಅಪಾರವಾಗಿದ್ದು ತನಗೆ ತೋಚಿದಷ್ಟು ದಾನ ಮಾಡುವ ಮನಸ್ಥಿತಿ ಶ್ರೇಷ್ಠವಾದದ್ದು. ತಾನು ಮಾಡಿದ ದಾನ ಕೋಟಿ ಪುಣ್ಯ ಫಲವನ್ನು ಹೊತ್ತು ತರುತ್ತದೆ. ಇದು ತನ್ನ ಸಂಸಾರ ವಂಶ ಹಾಗೂ ಮುಂದಿನ ಪೀಳಿಗೆಯನ್ನು ಸುಸ್ಥಿರವಾಗಿಡಲು ಮತ್ತು ಪುಣ್ಯದ ಫಲ ವರ್ಗಾವಣೆ ಆಗುವಂತೆ ನೋಡಿಕೊಳ್ಳುತ್ತದೆ.
ದಾನ ಪಡೆಯುವ ವ್ಯಕ್ತಿಯು ತನಗೆ ನಿಜವಾಗಿಯೂ ಅವಶ್ಯಕತೆ ಇದ್ದರೆ ಮಾತ್ರ ಪಡೆಯುವುದು ಒಳಿತು. ಕೆಲವರು ಎಲ್ಲಾ ಇದ್ದರೂ ಸಹ ಅತಿಯಾದ ಆಸೆಯಿಂದ ದಾನ ಪಡೆದುಕೊಳ್ಳುವ ಗುಣ ಬಂದಿರುತ್ತದೆ.
ರಾಜಧಾನ, ದೋಷ ದಾನ, ಆಹಾರ ದಾನ, ವಿದ್ಯಾದಾನ ಈ ರೀತಿ ಅನೇಕ ವಿಧಗಳುಂಟು
ರಾಜಧಾನ ಕಾರ್ಯವು ಈಗಿನ ಸರ್ಕಾರಗಳಿಂದ ಬರುವ ಸಲಲತ್ತುಗಳಿಗೆ ಹೋಲಿಸಬಹುದು ಆದರೆ ಇಲ್ಲಿ ಉಚಿತ ಮತ್ತು ಸಬ್ಸಿಡಿ ಎಂದು ಕೇಳಿದೊಡನೆ ಉಳ್ಳವರು ಸಹ ನಿರ್ಗತಿಕ ರಂತೆ ನಿಲ್ಲುವರು. ಇಂತಹ ತಪ್ಪುಗಳನ್ನು ಯಾವತ್ತಿಗೂ ಮಾಡಬೇಡಿ ಫಲಾನುಭವಿಗಳಿಗೆ ನ್ಯಾಯಯುತವಾಗಿ ಸಿಗುವಂತೆ ಉಳ್ಳವರು ನೋಡಿಕೊಳ್ಳುವುದು ಒಳಿತು. ತನ್ನ ಬಳಿ ಇದ್ದು ಸಹ ಅತಿಯಾದ ಆಸೆ ಲಂಪಟತನ ತೋರಿದರೆ ಕ್ರಮೇಣ ಅವರ ಪರಿಸ್ಥಿತಿ ಹಾಗೆಯೇ ಆಗುವುದು.
ದೋಷ ದಾನ ಗ್ರಹಗತಿಗಳಿಗೆ ಸಂಬಂಧಪಟ್ಟದಾಗಿದ್ದು ಇದು ದೇಗುಲಗಳಿಗೆ ಅಥವಾ ಅವಶ್ಯಕತೆ ಇರುವವರಿಗೆ ಸ್ವಯಿಚ್ಛೆಯಿಂದ ದಾನ ನೀಡಲಾಗುವುದು ಇದರಿಂದ ದೋಷಗಳು ವಿಮುಕ್ತವಾಗಬಹುದು.
ಆಹಾರ ದಾನ: ಆಹಾರ ಮನುಷ್ಯನಿಗೆ ಅತಿ ಅವಶ್ಯಕ ತನ್ನ ಬಳಿ ಹೆಚ್ಚಾದಾಗ ದಾನ ಮಾಡಬಹುದು ಅಥವಾ ಹಸಿದು ಬಂದವರಿಗೆ ಊಟ ಹಾಕಿದರೆ ಕೋಟಿ ಪುಣ್ಯ ಫಲವನ್ನು ಸಂಪಾದಿಸಬಹುದು.
ವಿದ್ಯಾದಾನ: ಗುರು ತನ್ನ ಶಿಷ್ಯರಿಗೆ ತಾನು ಕಲಿತ ವಿದ್ಯೆಯನ್ನು ಧಾರೆ ಎರೆಯುತ್ತಾನೆ ಅದು ಪರಂಪರೆ. ಸಮಾಜದಲ್ಲಿ ಯಾರು ಶಿಕ್ಷಣದಿಂದ ವಂಚಿತರಾಗಿದ್ದಾರೆ ಹಾಗೂ ಅಶಕ್ತರಾಗಿದ್ದರೆ ಅಂತಹ ಒಬ್ಬರನ್ನು ಗುರುತಿಸಿ ನೀವು ಆ ವ್ಯಕ್ತಿಗೆ ಕನಿಷ್ಠ ವಿದ್ಯೆಯನ್ನು ನೀಡಿ ಇದರಿಂದ ನಿಮ್ಮ ವಂಶದಲ್ಲಿ ಅವಿದ್ಯಾವಂತರು ಇರುವುದಿಲ್ಲ ಹಾಗೂ ಇದರ ಫಲ ಪುಣ್ಯದಿಂದ ಕೂಡಿರುತ್ತದೆ.
ಕೊನೆಯದಾಗಿ ನನ್ನದೊಂದು ಮಾತು.
ದಾನ ಮಾಡಿ ಅಪಾತ್ರರಿಗೆ ಎಂದು ದಾನ ನೀಡಬೇಡಿ.
ಮಾಡಿದ ದಾನ ಪೂರ್ಣ ಪುಣ್ಯಫಲ ದೊರೆಯಬೇಕಿದ್ದರೆ ದಾನ ಮಾಡಿದ್ದನ್ನು ಗುಟ್ಟಾಗಿ ಇಡಿ. ಅಹಂಕಾರದಿಂದ ಇನ್ನೊಬ್ಬರನ್ನು ಮೆಚ್ಚಿಸಲು ಹಾಗೂ ಸ್ವಾರ್ಥದಿಂದ ಮಾಡುವ ದಾನ ಒಳಿತಲ್ಲ.
ಭಗವಂತನ ಹೆಸರಿನಲ್ಲಿ ದಾನಮಾಡಿ ಒಳಿತಾಗುವುದು.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ದ.
9945098262