ಪ್ರಮುಖ ಸುದ್ದಿಬಸವಭಕ್ತಿ
ಶಾಸಕ ದರ್ಶನಾಪುರ ಜನ್ಮದಿನಃ ಅಭಿಮಾನಿಗಳಿಂದ ಹನುಮನಿಗೆ ಅಭಿಷೇಕ, ಪೂಜೆ
ಶಾಸಕ ದರ್ಶನಾಪುರ ಜನ್ಮದಿನಃ ಅಭಿಮಾನಿಗಳಿಂದ ಹನುಮನಿಗೆ ಅಭಿಷೇಕ
ಯಾದಗಿರಿಃ ಜಿಲ್ಲೆಯ ಶಹಾಪುರ ಮತಕ್ಷೇತ್ರದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರ 59 ನೇ ಜನ್ಮದಿನ ಅಂಗವಾಗಿ ಇಂದು ನಗರದ ಮಾರುತಿ ಮಂದಿರದಲ್ಲಿ ಅವರ ಅಭಿಮಾನಿಗಳು ಬೆಳಗ್ಗೆ ಶ್ರೀದೇವರಿಗೆ ಅಭಿಷೇಕ ವಿಶೇಷ ಪೂಜೆ ಸಲ್ಲಿಸುವ ಮೂಲಕ ದರ್ಶನಾಪುರ ಅವರಿಗೆ ಆಯುರರಾಗ್ಯ, ರಾಜಕೀಯದಲ್ಲಿ ಉನ್ನತ ಸ್ಥಾನಮಾನ ಸೇರಿದಂತೆ ಜನ ಸೇವೆ ಸಲ್ಲಿಸಲು ಇನ್ನಷ್ಟು ಶಕ್ತಿ ನೀಡುವಂತೆ ಪ್ರಾರ್ಥನೆ ಸಲ್ಲಿಸಿದರು.
ಅಲ್ಲದೆ ಇಲ್ಲಿನ ನಂದಿ ಬೆಟ್ಟದ ಗೋಶಾಲೆಗೆ ತೆರಳಿ ಗೋವುಗಳಿಗೆ ಹಸಿ ಹುಲ್ಲನ್ನು ವಿತರಿಸುವ ಮೂಲಕ ದರ್ಶನಾಪುರ ಅವರ ಜನ್ಮದಿನವನ್ನು ಸರಳ ಮತ್ತು ಅರ್ಥಪೂರ್ಣ ವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ಗುತ್ತಿಗೆದಾರ ಚಿನ್ನುಗೌಡ, ಮೌನೇಶ ನಾಟೇಕಾರ, ಸದಾಶಿವ ಮುದೋಳ, ರಾಮು ತಹಸೀಲ್ ಸೇರಿದಂತೆ ಇತರರು ಭಾಗವಹಿಸಿದ್ದರು.