ಶಿವಣ್ಣ ಡ್ಯಾನ್ಸ್ ಮಾಡುವಾಗ ರೇಣುಕಾಚಾರ್ಯ ಸುಮ್ನೆ ನಿಂತಿದ್ರಾ.?
ಶಿವಣ್ಣ ಡ್ಯಾನ್ಸ್ ಮಾಡುವಾಗ ರೇಣುಕಾಚಾರ್ಯ ಸುಮ್ನೆ ನಿಂತಿದ್ರಾ.?
ಸೌಂಡ್, ತಮಟೆ ಶಬ್ಧ ಕೇಳಿದ್ರೆ ಹೆಜ್ಜೆ ಹಾಕೋ ರೇಣುಕಾಚಾರ್ಯರ ಸುಮ್ನೆ ನಿಂತಿದ್ರಾ.?
ದಾವಣಗೇರಾಃ ಜಿಲ್ಲೆಯ ಹೊನ್ನಾಳಿಯ ಹಿರೆಕಲ್ಮಠದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಕೃಷಿ ಮೇಳ ನಿನ್ನೆ ನಟ ಶಿವರಾಜಕುಮಾರ ಆಗಮಿಸಿದ್ದರು, ಈ ವೇಳೆ ಅಭಿಮಾನಿಗಳ ಮನವಿ ಮೇರೆಗೆ ಟಗರು ಹಾಡಿಗೆ ಹೆಜ್ಜೆ ಹಾಕುತ್ತಿದ್ದರೆ,
ಪಕ್ಕದಲ್ಲಿಯೇ ಡ್ಯಾನ್ಸ್ ರಾಜಾ ಶಾಸಕ ರೇಣುಕಾಚಾರ್ಯರು ಅವರ ಜೊತೆಗೆ ಸ್ಟೆಪ್ ಹಾಕ್ತಾರೆ ಅನ್ಕೊಂಡಿದ್ರೆ, ಯಾಕೋ ಸುಮ್ನೆ ನಿಂತಿರುವದು ಅಚ್ಚರಿ ಮೂಡಿಸಿದೆ ಅಂದ್ರೆ ತಪ್ಪಿಲ್ಲ.
ಸೌಂಡ್ ಮತ್ತು ಅದರಲ್ಲೂ ತಮಟೆ ಸೌಂಡ್ ಕೇಳಿದರೆ ಸಾಕು ಡ್ಯಾನ್ಸ್ ರಾಜಾ ಡ್ಯಾನ್ಸ್ ಅಂತ ನಮ್ಮಎಮ್ಮೆಲೆ ಸಾಹೇಬರು ನಾಲ್ಕು ಸ್ಟೆಪ್ ಹಾಕೇ ಬಿಡೋರು ಈ ಬಾರಿ ಅದು ತನ್ನದೇ ಕ್ಷೇತ್ರದಲ್ಲಿ ನಟ ಶಿವಣ್ಣ ಸ್ಟೆಪ್ ಹಾಕ್ತಿದ್ದರೆ, ಇವರು ಸುಮ್ನೆ ನಿಂತಿರೋದು ಉಂಟೆ.? ನಂಬಲು ಸಾಧ್ಯವೇ.?
ಅಚ್ಚರಿವಿಷಯವೆಂದರೆ ಈ ಬಾರಿ ರೇಣುಕಾಚಾರ್ಯರರು ನಿಜಕ್ಕು ಕುಣಿಯದೆ, ಮೊಬೈಲ್ ನಲ್ಲಿ ಮಾತನಾಡುತ್ತಾ ನಿಂತಿರುವದು ಎಲ್ಲರಲ್ಲಿ ಆಶ್ಚರ್ಯ ಮೂಡಿಸಿದೆ ಎನ್ನಲಾಗುತ್ತಿದೆ.