ಜಿಎಸ್‍ಟಿ… ಗೊತ್ತು…! ರಾಜ್ಯದಲ್ಲಿ ಕುಖ್ಯಾತಿ ಪಡೆದ ವಿಎಸ್‍ಟಿ ಗೊತ್ತೆ.?
GST+VST=KARNATAKA BJP..?
ವಿವಿ ಡೆಸ್ಕ್ – ಸಿಎಂ ಪುತ್ರನ ಸುಪರ್ ಸಿಎಂ ಅನುಕರಣೆ ಕುರಿತು ರಾಜ್ಯದ ಬಿಜೆಪಿ ಹಲವಾರು ನೊಂದ ಬಿಜೆಪಿ ಶಾಸಕರು ಮತ್ತೊಂದು ಅನಾಮಧೇಯ ಪತ್ರ ಬರೆದು ಬಿಜೆಪಿ ಹೈಕಮಾಂಡ್ ಮಧ್ಯ ಪ್ರವೇಶಿಸಿ ಸರಿ ಪಡಿಸುವಂತೆ ಮನವಿ ಮಾಡಿದೆ ಎಂದು ಅನಾಮಧೇಯ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಅನಾಮಧೇಯ ಪತ್ರದ ಮುಖ್ಯಾಂಶಗಳು ಇಂತಿವೆ. ಬಿಜೆಪಿಯ ನೊಂದ ಶಾಸಕರು ಎನ್ನಲಾಗುವ ಹಲವಾರು ಜನರು ಸಿಎಂ ಬಿಎಸ್‍ವೈ ಪುತ್ರ ಬಿ.ವೈವಿಜಯೇಂದ್ರರನ್ನು ಗುರಿಯಾಗಿಸಿಕೊಂಡು ಪತ್ರ ಬರೆಯಲಾಗಿದೆ ಎನ್ನಲಾಗಿದೆ. ಸೂಪರ್ ಸಿಎಂ ಆಗಿ ವಿಜಯೇಂದ್ರ ತನ್ನ ದರ್ಬಾರ್ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಜಿಎಸ್‍ಟಿ ರಾಷ್ಟ್ರ ವ್ಯಾಪ್ತಿ ಎಲ್ಲಾ ಜನತು ತಿಳಿದಿರುವ ವಿಷಯ ಇದು ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿದ ಜಿಎಸ್‍ಟಿ ಬಿಜೆಪಿ ಸೇರಿದಂತೆ ಎಲ್ಲರಿಗೂ ಅನ್ವಯಿಸಿ ಹಲವಾರು ಜನರು ಇದರ ವಿರುದ್ಧ ಧ್ವನಿ ಎತ್ತಿದರು. ದೇಶದ ಅಭಿವೃದ್ಧಿ ಹಿನ್ನೆಲೆ ಮೋದಿ ಸರ್ಕಾರ ಇದನ್ನು ಕಠಿಣವಾಗಿ ಕ್ರಮಕೈಗೊಂಡರು. ಜಿಎಸ್‍ಟಿ ಪರಿಣಾಮ ಎಲ್ಲರಿಗೂ ತಿಳಿದಿದೆ.
ಇನ್ನೂ ಇದರ ಜೊತೆಗೆ ವಿಎಸ್‍ಟಿ ಏನಿದು.? ಯೋಚಿಸುತಿರುವಿರಾ..? ರಾಜ್ಯ ವಿಎಸ್‍ಟಿ ಅಂದರೆ ಸಿಎಂ ಪುತ್ರ ವಿ ಅಂದ್ರೆ ವಿಜಯೇಂದ್ರ ಎಸ್ ಅಂದ್ರೆ ಸರ್ವೀಸ್ ಟಿ ಅಂದ್ರೆ ಟ್ಯಾಕ್ಸ್ ಆಗಿ ವಿಎಸ್‍ಟಿ ಎನ್ನಲಾಗುತ್ತಿದೆ. ವಿಎಸ್‍ಟಿ ಕಟ್ಟಬೇಕಾದ ಸ್ಥಿತಿಯಲ್ಲಿ ಬಿಜೆಪಿ ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.
ವಿಎಸ್‍ಟಿ ಟ್ಯಾಕ್ಸ್ ಸಂಗ್ರಹ ಅತಿಯಾಗಿದ್ದು ಭ್ರಷ್ಟಚಾರ ತೀವ್ರತೆ ಪಡೆದುಕೊಳ್ಳುತ್ತಿದೆ. ಹೀಗೆ ಮುಂದುವರೆದಲ್ಲಿ ಮುಂದೆ ಪರಿಣಾಮ ಎದುರಿಸಬೇಕಾಗುತ್ತದೆ. ಕಾರಣ ಪ್ರಮಾಣಿಕವಾಗಿ ಪಾರದರ್ಶಕವಾಗಿ ಆಡಳಿತ ನಡೆಸುವಂತೆ ರಾಜ್ಯ ಸಿಎಂ ಅವರಿಗೆ ಸೂಚಿಸಬೇಕೆಂದು ಈ ಅನಾಮಧೇಯ ಪತ್ರದ ಮುಖ್ಯ ಉದ್ದೇಶವಾಗಿದೆ ಎನ್ನಲಾಗಿದೆ.
ಯಡಿಯೂರಪ್ಪನವರ ಮುಪ್ಪಿನ ಲಾಭ ಪಡೆದುಕೊಂಡು ವಿಜಯೇಂದ್ರ ಮತ್ತು ಆತನ ತಂಡ ಹಾಗೂ ಕುಟಂಬ ಸದಸ್ಯರು ಜಿಎಸ್‍ಟಿ ವಸೂಲಿಯಲ್ಲಿ ಸಕ್ರಿಯವಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಅನಾಮಧೇಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಯಡಿಯೂರಪ್ಪನವರ ರಾಜಕೀಯ ಯುಗ ಅಂತ್ಯಗೊಳಿಸಲು ವಿಜಯೇಂದ್ರ ವಾಮ ಮಾರ್ಗ ಹಿಡಿದಿದ್ದಾರೆ ಎಂದು ಆರೋಪಿಸಿದ್ದು, ಬಿಜೆಪಿಯಲ್ಲೂ ಕುಟುಂಬ ರಾಜಕಾರಣ ಹಾಗೂ ವಂಶ ಪಾರಂಪರಿಕ ಆಡಳಿತ ಮೇಳೈಸುತ್ತಿದೆ. ಅನುವಂಶಿಕ ಆಡಳಿತಕ್ಕೆ ಸ್ವತಃ ಬಿಎಸ್‍ವೈ ಟೊಂಕ ಕಟ್ಟಿ ನಿಂತಂತಿದೆ ಎನ್ನಲಾಗಿದೆ.
ಉದಾಹರಣೆಗೆ ಮಗನ ಕಾರ್ಯ ವೈಖರಿ ಬಗ್ಗೆ ಸದಾ ಮೆಚ್ಚುಗೆ ವ್ಯಕ್ತ ಪಡಿಸುವ ಬಿಎಸ್‍ವೈ ಅವರ ಮಾತಿನಿಂದಲೇ ಅದು ಕಂಡುಕೊಳ್ಳಬಹುದು ಎಂದು ದೂರಲಾಗಿದೆ. ದೇವೆಗೌಡರ ಪುತ್ರ ವ್ಯಾಮೋಹವನ್ನು ಟೀಕಿಸುತ್ತಿದ್ದ ರಾಜಾಹುಲಿ ಇದೀಗ ತಾವು ಪುತ್ರ ವ್ಯಾಮೋಹಕ್ಕೆ ಅಂಟಿಕೊಂಡಿದ್ದಾರೆ ಎಂದು ಪ್ರಸ್ತಾಪಿಸಲಾಗಿದೆ. ತಮ್ಮ ಅಧಿಕಾರವನ್ನು ಪುತ್ರ ವಿಜಯೇಂದ್ರನಿಗೆ ದಯಪಾಲಿಸುವ ಮೂಲಕ ದೃತರಾಷ್ಟ್ರ ಪ್ರೇಮ ತೋರುತ್ತಿದ್ದಾರೆ ಎಂದು ಪತ್ರದಲ್ಲಿ ಟೀಕಿಸಿದ್ದಾರೆ ಎನ್ನಲಾಗಿದೆ.
ಸಿಎಂ ಬಿಎಸ್‍ವೈ ಕೇವಲ ಉತ್ಸವ ಮೂರ್ತಿಃ ವಿಜಯೇಂದ್ರ ತನ್ನದೆ ಆದ ಕೂಟ ರಚಿಸಿಕೊಂಡು ಸೂಪರ್ ಸಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಧ್ಯವರ್ತಿಗಳು ಹಾಗೂ ನೇರವಾಗಿ ಹಣ ಕೊಟ್ಟು ತಮ್ಮ ಕೆಲಸಗಳನ್ನು ಗಿಡ್ಡಿಸಿಕೊಳ್ಳುತ್ತಿದ್ದಾರೆ. ವಿರೋಧ ಪಕ್ಷದವರ ಕೆಲಸಗಳು ದುಡ್ಡು ಕೊಟ್ಟು ಮಾಡಿಕೊಳ್ಳುತಿದ್ದಾರೆ. ಇಲ್ಲಿ ನಿಷ್ಠಾವಂತ ಕಾರ್ಯಕರ್ತರು ಮತ್ತು ಶಾಸಕರ ಕೆಲಸ ಕಾರ್ಯಗಳು ಆಗುತ್ತಿಲ್ಲ. ಬಿಜೆಪಿಯವರು ಸಹ ಇಲ್ಲಿ ಶೇ.ವಾರು ಹಣ ನೀಡಿ ಕೆಲಸ ಮಾಡಿಕೊಳ್ಳುವ ದುಸ್ಥಿತಿ ಬಂದಿದೆ ಎಂದು ಅನಾಮಧೇಯ ಪತ್ರ ದೂರಿದ್ದಾರೆ. ವಿಜಯೇಂದ್ರಣ ಅಪ್ಪಣೆ ಇಲ್ಲದೆ ಸರ್ಕಾರದಲ್ಲಿ ಯಾವೊಂದು ಕೆಲಸ ಆಗುವದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ. ವಿಪಕ್ಷದ ಶಾಸಕರ ಕ್ಷೇತ್ರಕ್ಕೆ ಅನುದಾನ ಜಾಸ್ತಿ ಬಿಡುಗಡೆಯಾಗುತ್ತಿದೆ. ಇಲ್ಲಿ ವ್ಯಾಪಕರ ಕಮಿಷನ್ ದಂದೆ ನಡೆಯುತ್ತಿದೆ ಎಂದ ಅನಾಮಧೇಯ ಪತ್ರದಲ್ಲಿ ಆರೋಪಿಸಿದ್ದಾರೆ. ಪಕ್ಷದ ಪ್ರಾಮಾಣಿಕ ಕಾರ್ಯಕರ್ತರು ಹಾಗೂ ಶಾಸಕರು ಸಿಎಂ ಬಿಎಸ್‍ವೈ ಅವರ ಆದೇಶವಿದ್ದರೂ ಕೆಲಸಗಳು ಆಗುತ್ತಿಲ್ಲ. ವಿಜಯೇಂದ್ರನ ಆದೇಶವಿದ್ದಲ್ಲಿ ಮಾತ್ರ ಫೈಲ್ ಮುಂದೆ ಹೋಗುತ್ತದೆ ಇಲ್ಲವಾದಲ್ಲಿ ಇಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ತಂದೆ ಮಕ್ಕಳ ವರ್ತನೆಗೆ ಬಿಜೆಪಿ ಶಾಸಕರು ಬೇಸತ್ತಿದ್ದಾರೆ ಎನ್ನಲಾಗಿದೆ. ಈ ಕುರಿತು ಹೈಕಮಾಂಡ ಗಮನ ಸೆಳೆಯಲು ಅನಾಮಧೇಯ ಪತ್ರವೊಂದು ಬರೆಯಲಾಗಿದೆ. ಅನಾಮಧೇಯ ಪತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದೆ.
-MALLIKARJUN MUDANOOR.