ಕಕಯುಸೇನೆ ಜಿಲ್ಲಾಧ್ಯಕ್ಷರಾಗಿ ಬಾಲಪ್ಪ ನೇಮಕ
ನೂತನ ಜಿಲ್ಲಾಧ್ಯಕ್ಷರಿಗೆ ಶಹಾಪುರದಲ್ಲಿ ಸನ್ಮಾನ
ಶಹಾಪುರಃ ಕಲ್ಯಾಣ ಕರ್ನಾಟಕ ಯುವ ಸೇನೆ ಯಾದಗಿರಿ ಜಿಲ್ಲಾಧ್ಯಕ್ಷರಾಗಿ ಯುವ ಮುಖಂಡ ಬಾಲಪ್ಪ ಬೋವಿ (ಕಕ್ಕೇರಿ) ಅವರನ್ನು ಸೇನೆಯ ರಾಜ್ಯಧ್ಯಕ್ಷ ಅಮರೀಶ ಬಿಲ್ಲವ್ ಅವರು ನೇಮಿಸಿ ಆದೇಶ ಹೊರಡಿಸಿದ್ದಾರೆ.
ನೂತನ ಜಿಲ್ಲಾಧ್ಯಕ್ಷ ಬಾಲಪ್ಪ ಬೋವಿ ಅವರನ್ನು ಶಹಾಪುರ ತಾಲೂಕು ಕಕಯುಸೇನೆ ವತಿಯಿಂದ ನಗರದ ಪ್ರವಾದಿ ಮಂದಿರದಲ್ಲಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ, ಸೇನೆಯ ತಾಲೂಕು ಅಧ್ಯಕ್ಷ ಭೀಮಾಶಂಕರ ಕಟ್ಟಿಮನಿ, ನೂತನ ಜಿಲ್ಲಾಧ್ಯಕ್ಷರಿಗೆ ತಾಲೂಕಿನ ಎಲ್ಲಾ ಕಾರ್ಯಕರ್ತರು ಶಕ್ತಿ ತುಂಬಬೇಕಿದೆ. ಜಿಲ್ಲಾದ್ಯಂತ ನಾಗರಿಕರ ಸಮಸ್ಯೆಗಳು ಸೇರಿದಂತೆ ಕನ್ನಡ ನಾಡು ನುಡಿಗಾಗಿ ಅವಿರತ ಶ್ರಮ ಅಗತ್ಯವಿದೆ. ಆ ನಿಟ್ಟಿನಲ್ಲಿ ಸಂಘಟನಾತಮ್ಕ ಶಕ್ತಿ ಅಗತ್ಯವಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಜಿಲ್ಲಾಧ್ಯಕ್ಷ ಬಾಲಪ್ಪ ಬೋವಿ, ಕನ್ನಡ ನಾಡು ನುಡಿಗೆ ಸಮಸ್ಯೆ ಉಂಟಾದಲ್ಲಿ ಕಾರ್ಯಕರ್ತರು ಹೋರಾಟಕ್ಕೆ ಸದಾ ಸಿದ್ಧರಿರಬೇಕು. ಅಲ್ಲದೆ ಸರ್ಕಾರಿ ಯೋಜನೆಗಳನ್ನು ದುರ್ಬಳಕೆ ಮಾಡಿಕೊಂಡು ದೀನ ದಲಿತರು, ಬಡವರಿಗೆ ದೊರೆಯಬೇಕಾದ ಯೋಜನೆಗಳನ್ನು ಸಮರ್ಪಕವಾಗಿ ದೊರಕಿಸಿ ಕೊಡುವ ಕಾರ್ಯವಾಗಬೇಕಿದೆ. ಆ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ರವಿ ಯಕ್ಷಿಂತಿ, ಅಂಬಣ್ಣ ಲೀಡರ್, ಮಲ್ಲಪ್ಪ ಅಳ್ಳಳ್ಳಿ, ಚಿನ್ನು ಪಾಟೀಲ್, ಅವಿನಾಶ ಗುತ್ತೇದಾರ, ಬೈಲಪ್ಪ ಶಿರವಾಳ, ಶಿವಕುಮಾರ ದೊಡ್ಮನಿ, ಹೊನ್ನಪ್ಪ ನಾಟೇಕಾರ ಮತ್ತು ಅನೀಲ್ ದೋರನಹಳ್ಳಿ, ಖಂಡಪ್ಪ ನಾಟೇಕಾರ ಇದ್ದರು.
ಸೇನೆಯ ಜಿಲ್ಲಾಧ್ಯಕ್ಷರು ಸಂಘಟನಾ ಚತುರರು ಆಗಿದ್ದು, ಉತ್ತಮ ಕ್ರೀಡಾಪಟು ಆಗಿದ್ದರು. ವಿದ್ಯಾರ್ಥಿ ಸಿದೆಯಲ್ಲಿ ರಾಜ್ಯಮಟ್ಟದಲ್ಲಿ ಖೋಖೋ ಪಟುವಾಗಿ ಆಟವಾಡಿದ್ದಾರೆ. ಜನಸೇವೆಯಲ್ಲಿ ಮುಂದಾಗಿದ್ದು, ಸೇನೆಗೆ ಜಿಲ್ಲಾಮಟ್ಟದಲ್ಲಿ ಓರ್ವ ಸಾರಥಿ ದೊರೆತಂತಾಗಿದೆ. ಅವರೊಂದಿಗೆ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಸಂಪರ್ಕಗೊಂಡು ಮುಂದಿನ ಸೇನೆ ಬೆಳವಣಿಗೆಗೆ ಕೂಜೋಡಿಸಬೇಕು.
-ಭೀಮಾಶಂಕರ ಕಟ್ಟಿಮನಿ. ಕಕಯುಸೇನೆ ಅಧ್ಯಕ್ಷ. ಶಹಾಪುರ.