ಪ್ರಮುಖ ಸುದ್ದಿ
SSLC ಪರೀಕ್ಷೆ ಮುಂದೂಡುವ ಸಾಧ್ಯತೆ.?
SSLC ಪರೀಕ್ಷೆ ಮುಂದೂಡುವ ಸಾಧ್ಯತೆ.?
ಬೆಂಗಳೂರಃ ಕೊರೊನಾ ವೈರಸ್ ಭೀತಿ ದಿನೆ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆ 2020 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡಿಕೆ ಕುರಿತು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.
ಮಾರ್ಚ್ 23 ರ ನಂತರ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡಬೇಕಾ ನಡೆಸಬೇಕಾ.? ಎಂಬ ತೀರ್ಮಾನ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ. ಮಾ.23 ರವರೆಗೆ ಪಿಯುಸಿ ಪರೀಕ್ಷೆ ಮುಗಿಯಲಿದ್ದು ತದನಂತರವೇ ನಿರ್ಧಾರಕೈಗೊಳ್ಳುವ ಸಾಧ್ಯತೆ ಇದೆ.
ಅಲ್ಲದೆ ಈಗಾಗಲೇ ಸಿಬಿಎಸ್ ಇ ಮತ್ತು ಐಪಿಎಸ್ ಇ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಹೀಗಾಗಿ ಪಾಲಕರು ಮತ್ತು ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿದೆ ಎನ್ನಲಾಗಿದೆ. ಎಲ್ಲದಕ್ಕೂ ಮಾ.23 ರತನಕ ಕಾಯಲೇಬೇಕು.