ಕೊರೊನಾ ವೈರಸ್ ಗುಣಪಡಿಸಲು ಸಿಕ್ತಂತೆ ಮದ್ದು.! ಮದ್ದು ಕಂಡು ಹಿಡಿದವರಾರು ಗೊತ್ತೆ.?
ಕೊರೊನಾ ವೈರಸ್ ಗುಣಪಡಿಸಲು ಸಿಕ್ತಂತೆ ಮದ್ದು.!
ತಿರುವನಂತಪುರಂಃ ಕೊರೊನಾ ವೈರಸ್ ಸೋಂಕು ತಗುಲಿದವರಿಗೆ ಚಿಕಿತ್ಸೆ ನೀಡಿ ಮೂರೇ ದಿನದಲ್ಲಿ ನೆಗೆಟಿವ್ ರಿಪೋರ್ಟ್ ಬಂದಿದ್ದು ಅಚ್ಚರಿಯಾದರೂ ನಿಜವೆಂದು ಹೇಳಲಾಗುತ್ತಿದೆ.
ಕೇರಳದ ಎರ್ನಾಕುಲಂ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ.ಥಾಮಸ್ ಮ್ಯಾಥ್ಯೂ ನೇತೃತ್ವದಲ್ಲಿ ಕೊರೊನಾ ಪಾಸಿಟಿವ್ ಓರ್ವನಿಗೆ ಆತನ ಅನುಮತಿ ಪಡೆದು ಎಚ್ಐವಿ ನಿಯಂತ್ರಣಕ್ಕೆ ಬಳಸುವ ಔಷಧಿ ನೀಡುವ ಮೂಲಕ ಕೊರೊನಾ ಸೋಂಕಿತನನ್ನು ಗುಣಮುಖ ಪಡಿಸಿದ ಘಟನೆ ನಡೆದಿದೆ ಎನ್ನಲಾಗಿದೆ.
ಅದೃಷ್ಠವಶಾತ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಥಾಮಸ್ ಕೇರಳ ಆರೋಗ್ಯ ಮಂಡಳಿ ಒಪ್ಪಿಗೆ ಮೇರೆಗೆ ಉಪಯೋಗಿಸಿದ ಫಾರ್ಮುಲಾ ಯಶಸ್ವಿಯಾಗಿದೆ ಎನ್ನಲಾಗಿದೆ.
ಮಾರ್ಚ್ 20 ರಂದು ಇಂಗ್ಲೆಂಡ್ ಮೂಲದ ಕೊರೊನಾ ಸೋಂಕು ತಗುಲಿದ ವ್ಯಕ್ತಿಯೋರ್ವನಿಗೆ ಆತನ ಅನುಮತಿ ಪಡೆದು ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ನೀಡಿದ ಮೂರು ದಿನಗಳ ನಂತರ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಲಾಗಿ ಆತ ಗುಣಮುಖ ಹೊಂದಿದ್ದು ಅಲ್ಲದೆ ಕೊರೊನಾ ನೆಗೆಟಿವ್ ವರದಿ ಬಂದಿದೆ ಎನ್ನಲಾಗಿದೆ.
ಎಚ್ಐವಿ ನಿಯಂತ್ರಣ ಕ್ಕೆ ನೀಡುವ ಲೊಪಿನವವಿರ್ ಮತ್ತು ರಿಟೋನವಿರ್ ಸಂಯೋಜನೆಯ ಔಷಧಿ ನೀಡಿ ಕೊರೊನಾ ಸೋಂಕಿತನನ್ನು ಗುಣಮುಖರನ್ನಾಗಿ ಮಾಡಲಾಗಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಇದೊಂದು ಮೈಲಿಗಲ್ಲು ಎನ್ನಲಾಗಿದೆಯಂತೆ.