ಗ್ರಾಮಸ್ಥರಲ್ಲಿ RSS ಕಾರ್ಯಕರ್ತರಿಂದ ಕೊರೊನಾ ಜಾಗೃತಿ
RSS ವತಿಯಿಂದ ಕೊರೊನಾ ಜನ ಜಾಗೃತಿ
ಶಹಾಪುರ : ಈ ಕರೋನಾ ವೈರಸ್ ನಿಂದ ನಾವೆಲ್ಲ ತಪ್ಪಿಸಿಕೊಳ್ಳುವ ಮೂಲಕ ಮಾನವ ಜನಾಂಗ ಉಳಿವಿಗೆ ಬುದ್ಧಿಜೀವಿಗಳಾದ ನಾವೆಲ್ಲರೂ ಇಂತಹ ಸಂದರ್ಭದಲ್ಲಿ ಹೊರಗೆ ಬರದಂತೆ ನಮಗೆ ನಾವೆ ಕಾಳಜಿವಹಿಸುವುದು ಮುಖ್ಯವಾದ ವಿಷಯವಾಗಿದೆ ಎಂದು ಆರೆಸ್ಸೆಸ್ ಪ್ರಮುಖ ಸುಧೀರ ಚಿಂಚೋಳಿ ಹೇಳಿದರು.
ಶಹಾಪುರ ತಾಲ್ಲೂಕಿನ ಗೋಗಿ, ದೋರನಹಳ್ಳಿ, ಹುರಸುಗುಂಡಿಗಿ, ಶಿರವಾಳ, ಖಾನಾಪುರ, ಶಖಾಪುರ ಮುಂತಾದ ಹಳ್ಳಿಗಳಿಗೆ ಹೋಗಿ ಪ್ರತಿನಿತ್ಯ ಜನರಿಗೆ ಈ ಕೊರೊನಾ ವೈರಸ್ ಕುರಿತು ಜನಜಾಗೃತಿ ಮೂಡಿಸಲು ವಿಶೇಷವಾಗಿ ಆರೆಸ್ಸೆಸ್ ಎಲ್ಲಾ ಕಾರ್ಯಕರ್ತರು ಮುಂದಾಗಿದ್ದಾರೆ .
ದೇಶವೇ ಆತಂಕದಿಂದ ತಲ್ಲಣಗೊಂಡಿದ್ದು, ಈ ಕೊರೊನಾ ವೈರಸ್ ನಾಶವಾಗಲು ನಾವೆಲ್ಲರೂ ಯುಕ್ತಿಯಿಂದ ಪಾರಾಗಬೇಕಿದೆ. ಮಹಾಮಾರಿ ರೋಗದಿಂದ ತಪ್ಪಿಸಿಕೊಳ್ಳಲು ಮನೆಯಲ್ಲಿ ಇರೋಣ ಎಂದು ಹಳ್ಳಿಯ ಜನತೆಗೆ ಮನಮುಟ್ಟುವಂತೆ ಜಾಗೃತಿಯನ್ನು ಮೂಡಿಸಿದರು.
ನಮ್ಮ ಜೀವನದ ರಕ್ಷಣೆಗಾಗಿ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿ ಇಡೋಣ ಸ್ವಚ್ಛತೆಯಿಂದ ನಾವೆಲ್ಲರೂ ಬದುಕೋಣ ಸ್ವಚ್ಛತೆಗೆ ನಮ್ಮ ಉಸಿರು ಎಂಬ ಘೋಷ ವಾಕ್ಯಗಳ ಹಾಕುವುದರ ಮೂಲಕ ಜನರಿಗೆ ತಿಳುವಳಿಕೆ ಮೂಡಿಸಿದರು.
ಈ ಜಾಗೃತಿಯ ಸಂಚಲನದಲ್ಲಿ ವಿನೋದ್ ಶಿಂಧೆ ದೋರನಹಳ್ಳಿ, ಸಂಗಮೇಶ್ ಮುತ್ತಿನ, ಶ್ರೀನಿವಾಸ ಶೆಟ್ಟಿ ದೋರನಹಳ್ಳಿ, ಬಸವರಾಜ ಮುಂತಾದವರು ಇದ್ದರು .
ವರದಿ- ಮಹೇಶ ಪತ್ತಾರ.