ಶಹಾಪುರಃ ಶಂಕಿತ ಕೊರೊನಾಗೆ ಮಗು ಹಂಸಲೇಖ ಬಲಿ.!
ಶಂಕಿತ ಕೊರೊನಾಗೆ ಮಗು ಹಂಸಲೇಖ ಬಲಿ
ಯಾದಗಿರಿ, ಶಹಾಪುರಃ ಕೊರೊನಾ ವೈರಸ್ ಶಂಕಿತ ಕ್ವಾರಂಟೈನ್ ನಲ್ಲಿದ್ದ ಮಗುವೊಂದ ಕೆಮ್ಮು, ಜ್ವರದಿಂದ ಬಳಲಿ ಅಸುನೀಗದ ಘಟನೆ ಜಿಲ್ಲೆಯ ಶಹಾಾಪುರ ತಾಲೂಕಿನ ಕೊಂಗಂಡಿ ಗ್ರಾಮದಲ್ಲಿ ನಡೆದಿದೆ.
ಹಂಸಲೇಖ ತಂದೆ ರಾಮಪ್ಪ ಹೊಸಮನಿ (4) ಎಂಬ ಮಗುವೇ ಶಂಕಿತ ಕೊರೊನಾದಿಂದ ಮೃತಪಟ್ಟಿದೆ ಎನ್ನಲಾಗಿದೆ.
ಮಗುವಿನ ಪಾಲಕರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಕೊರೊನಾ ಹಾವಳಿಗೆ ಇಡಿ ದೇಶ ಲಾಕ್ ಡೌನ್ ಆದ ಹಿನ್ನೆಲೆ ಅವರು ಏಪ್ರೀಲ್ 1 ರಂದು ತಮ್ಮ ಮಗು ಸಮೇತ ಸ್ವಗ್ರಾಮಕ್ಕೆ ಆಗಮಿಸಿದ್ದರು.
ಸ್ವಗ್ರಾಮ ಆಗಮನ ವೇಳೆ ಪ್ರಾಥಮಿಕ ಆರೊಗ್ಯ ಕೇಂದ್ರದಲ್ಲಿ ತಪಾಸಣೆಗೆ ಒಳಪಟ್ಟು, 14 ದಿನಗಳ ಕಾಲ ಕ್ವಾರಂಟೈನ್ ಮನೆಯಲ್ಲಿಯೇ ಇರಲು ವೈದ್ಯರು ಸೂಚಿಸಿದ್ದರು ಎನ್ನಲಾಗಿದೆ.
ಮಗುವಿಗೆ ಕೆಮ್ಮು, ದಮ್ಮು ಆವರಿಸಿದ್ದು ಇಂದು ಮದ್ಯಾಹ್ನ ಮೃತಪಟ್ಟಿದೆ ಎನ್ನಲಾಗಿದೆ.
ಮಗುವಿನ ಗಂಟಲು ದ್ರವ ಹಾಗೂ ರಕ್ತ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ರಮೇಶ ಗುತ್ತೇದಾರ ಸ್ಪಷ್ಟ ಪಡಿಸಿದ್ದು, ಪರೀಕ್ಷಾ ವರದಿ ಬಂದ ಬಳಿಕವೇ ಕೊರೊನಾ ಸೋಂಕು ಕುರಿತು ತಿಳಿಯಲಿದೆ ಎಂದಿದ್ದಾರೆ.