ಪ್ರಮುಖ ಸುದ್ದಿ
ಆಲಿಕಲ್ಲು ಮಳೆ ಅಪಾರ ಪ್ರಮಾಣ ಬೆಳೆ ಹಾನಿ
ಆಲಿಕಲ್ಲು ಮಳೆ ಅಪಾರ ಪ್ರಮಾಣ ಬೆಳೆ ಹಾನಿ
ಯಾದಗಿರಿ: ಮಂಗಳವಾರ ರಾತ್ರಿ ಸುರಿದ ಆಲೆಕಲ್ಲು ಮಳೆಯ ಪರಿಣಾಮ ಜಿಲ್ಲೆಯ ವಡಗೇರಾ ತಾಲೂಕಿನ ಅನಕಸೂಗೂರು, ಕುರಾಳ, ಕೊಂಕಲ್, ತುಮಕೂರು, ಇತರ ಗ್ರಾಮಗಳ ಕೃಷ್ಣ ನದಿ ತೀರದ ರೈತರ ನೂರಾರು ಎಕರೆ ಭತ್ತದ ಬೆಳೆ ನಾಶವಾಗಿದೆ.
ಮೊದಲೇ ಕೊರೊನಾ ವೈರಸ್ ನಿಂದ ಲಾಕ್ ಡೌನ್ ಆಗಿದ್ದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆಲಿಕಲ್ಲು ಮಳೆಯಿಂದಾಗಿ ಅಪಾರ ಪ್ರಮಾಣದ ಭತ್ತದ ಪೈರು ನೆಲಕ್ಕುರುಳಿದೆ.
ಕೃಷಿ ಇಲಾಖೆ ಅಧಿಕಾರಿಗಳ ಇತ್ತ ಗಮನಹರಿಸಿ ಸೂಕ್ತ ಪರಿಹಾರ ಒದಗಿಸುವ ಕೆಲಸವಾಗಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.