ಪ್ರಮುಖ ಸುದ್ದಿ

ಶಹಾಪುರಃ ವೈರಸ್ ನಾಶ ದ್ರವಣ ಸಿಂಪರಣೆ ಸುರಂಗ ಮಾರ್ಗ ಆರಂಭ

ವೈರಾಣು ನಾಶ ಔಷಧ ಸಿಂಪರಣೆ ಸುರಂಗ ಮಾರ್ಗ ಆರಂಭ

ಯಾದಗಿರಿಃ ಕೊರೊನಾ ವೈರಸ್ ಮರಣ‌ ಮೃದಂಗ ಬಾರಿಸುತ್ತಿದ್ದು, ಇಡಿ‌ ಜಗತ್ತು ತಲ್ಲಣಗೊಂಡಿದೆ. ಈ‌ ಮಧ್ಯೆ ನಗರದ ಬಸವೇಶ್ವರ ಸರ್ಕಲ್ ನಲ್ಲಿ ಸ್ಥಳೀಯ ಅಮ್ಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವೈರಸ್ ನಾಶ ಔಷಧ ದ್ರವಣ ಸಿಂಪರಣೆಯ ಸುರಂಗ‌ ಮಾರ್ಗವನ್ನು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ ಎಲ್ಲಡೆ ವ್ಯಾಪಿಸಿದ್ದು, ದಿನೇದಿನೇ ಕಬಂದ ಬಾಹು ಚಾಚುತ್ತಿದೆ. ವೈರಸ್ ತಡೆಗೆ ಸಾಮಾಜಿಕ ಅಂತರವೇ ಮದ್ದಾಗಿದ್ದು, ಎಲ್ಲರೂ ಪಾಲಿಸಬೇಕು.

ಯುವ ಉದ್ಯಮಿ ಗುರು ಮಣಿಕಂಠ ನೇತೃತ್ವದ ಅಮ್ಮ ಚಾರಿಟೇಬಲ್ ಟ್ರಸ್ಟ್ ವೈರಸ್ ನಾಶ ಔಷಧ ದ್ರವಣ ಸಿಂಪರಣೆಯ ಸುರಂಗ ಮಾರ್ಗ ನಿರ್ಮಿಸಿದ್ದು, ಪೊಲೀಸ್ ಸಿಬ್ಬಂದಿ, ಕಾರ್ಮಿಕರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಔಷಧಿ, ಅಗತ್ಯ ದಿನಸಿ ತರಲು ಅನಿವಾರ್ಯ ವಾಗಿ ಹೊರ ಬರುವ ಸಾರ್ವಜನಿಕರು ಇದನ್ನು ಬಳಸಬಹುದು.

ಸುರಂಗ ಮಾರ್ಗ ಆರಂಭವಾಗಿದೆ ಎಂದು ಮನೆ ಬಿಟ್ಟು ಯಾರೊಬ್ಬರು ಬರುವಂತಿಲ್ಲ. ಜೀವದ ಹಂಗು ತೊರೆದು ಹಗಲು ಇರಳು ಶ್ರಮಿಸುತ್ತಿರುವವರಿಗೆ ಇದು ಸಮರ್ಪಣೆ ಎಂದು ಟ್ರಸ್ಟ್ ಹೇಳಿದೆ. ಅಲ್ಲದೆ ಅವರಿಗೆ ಇದು ಸದ್ಭಳಿಕೆಯಾಗಲಿ ಎಂಬುದು ಎಲ್ಲರ ಆಶಯವಾಗಿದೆ ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ ಜಗನಾಥರಡ್ಡಿ, ನಗರಸಭೆ ಪೌರಾಯುಕ್ತ ಬಸವರಾಜ ಶಿವಪೂಜೆ, ತಾಲೂಕಾ ಆರೊಗ್ಯ ಅಧಿಕಾರಿ ಡಾ.ರಮೇಶ ಗುತ್ತೇದಾರ, ಸಿಪಿಐ‌ ಹನುಮರಡ್ಡೆಪ್ಪ,‌ ಶ್ರೀ ಮಣಿಕಂಠ ಅಮ್ಮ ಟ್ರಸ್ಟ್ ಅಧ್ಯಕ್ಷ ಗುರು ಮಣಿಕಂಠ, ಮುಖಂಡರಾದ ಸಿದ್ಧಲಿಂಗಪ್ಪ ಆನೇಗುಂದಿ, ಶರಣು ಬಿ. ಗದ್ದುಗೆ,‌ ಮಹೇಶ ಆನೇಗುಂದಿ, ರುದ್ರಣ್ಣ ಚಟ್ರಕಿ, ರತ್ನಕರ್ ಶಟ್ಟಿ, ಮಲ್ಲು ಬುಕ್ಕಿಷ್ಟಗಾರ, ಬಸವರಾಜ ಚೌದ್ರಿ, ಅರವಿಂದ ಉಪ್ಪಿನ,‌ ವಿಶ್ವನಾಥ ಪಾಲ್ಕಿ, ಶಿವಕುಮಾರ, ರಾಜು ಆನೇಗುಂದಿ, ಅವಿನಾಶ ಗುತ್ತೇದಾರ ಸೇರಿದಂತೆ‌ ಇತರರು ಇದ್ದರು.

ಮನೆ ಬಿಟ್ಟು ಯಾರೊಬ್ಬರು ಹೊರ ಬರುವಂತಿಲ್ಲ. ಕೊರೊನಾ ನಾಶಕ್ಕಾಗಿ ಪ್ರತಿಯೊಬ್ಬರು‌ ಮನೆಯಲ್ಲಿರುವ ಮೂಲಕ ಹೊರಾಟ ತೀವ್ರಗೊಳಿಸಬೇಕಿದೆ. ಈ ಸುರಂಗ ಮಾರ್ಗ ಕೊರೊನಾ ವಿರುದ್ಧ ನಿತ್ಯ ಹೋರಾಟ ನಡೆಸುತ್ತಿರುವವರಿಗೆ ಸಮರ್ಪಣೆ‌ ಮಾಡಿರುವೆ. ಸದ್ಭಳಿಕೆಯಾಗಲಿ ಶೀಘ್ರದಲ್ಲಿ ಕೊರೊನಾ ವೈರಸ್ ದೇಶ,‌ ವಿಶ್ವ ಬಿಟ್ಟು ತೊಲಗಲಿ.
– ಗುರು ಮಣಿಕಂಠ. ‌ಯುವ ಉದ್ಯಮಿ.

Related Articles

2 Comments

Leave a Reply

Your email address will not be published. Required fields are marked *

Back to top button