ಪ್ರಮುಖ ಸುದ್ದಿ

ರಾಹುಲ್ ಗಾಂಧಿ‌ಯನ್ನ ಹಾಡಿ ಹೊಗಳಿದ ಶಿವಸೇನೆ

ಮುಂಬೈಃ ಇಡಿ ದೇಶವು ಕೊರೊನಾ ವೈರಸ್ ನಿಂದ ಬಿಕ್ಕಟ್ಟಿನಲ್ಲಿ ಸಿಲುಕಿದ ಸಮಯದಲ್ಲಿ ವಿರೋಧ ಪಕ್ಷದವರು‌ ಹೇಗಿರಬೇಕೆಂಬುದನ್ನು ರಾಹುಲ್ ಗಾಂಧಿಯವರು ತೋರಿಸಿ ಕೊಟ್ಟಿದ್ದಾರೆ ಎಂದು ಶಿವಸೇನೆಯ ಸಾಮ್ನಾ ಪತ್ರಿಕೆಯಲ್ಲಿ ಹೊಗಳಿದೆ.

ಅಲ್ಲದೆ ದೇಶದ ಹಿತಾಸಕ್ತಿಗಾಗಿ ರಾಹುಲ್ ಗಾಂಧಿ ಮತ್ತು ಪ್ರಧಾನಿ ಮೋದಿ ಕೊರೊನಾ ವೈರಸ್ ತಡೆಗೆ ಏನೇನ್ ಮಾಡಬೇಕು ಏನಿಲ್ಲ ಎಂಬ ವಿಚಾರಗಳನ್ನು ಪರಪಸ್ಪರ ಚರ್ಚಿಸಬೇಕು.

ರಾಹುಲ್ ಗಾಂಧಿ ಮತ್ತು ಪ್ರಧಾನಿ ಮೋದಿಯವರ ರಾಜಕೀಯ ಸಿದ್ಧಾಂತಗಳು ಬೇರೆ ಬೇರೆ ಇರಬಹುದು. ಇದು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷವೆಂದು ಜಗಳವಾಡುವ ಸಮಯವಲ್ಲ.

ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಿ ಕೊರೊನಾ ಸಮಸ್ಯೆ ವಿರುದ್ಧ ಹೋರಾಡಬೇಕಿದೆ. ಆ ನಿಟ್ಟಿನಲ್ಲಿ ಮೋದಿಯವರು ದಿಟ್ಟ ಹೆಜ್ಜೆ‌ ಇಡಬೇಕು ಒಗ್ಗಟ್ಟಾಗಿ ಹೋರಾಟ ನಡೆಸಬೇಕೆಂದು ಶಿವಸೇನೆ ತನ್ನ ಸಾಮ್ನಾ ಪತ್ರಿಕೆಯಲ್ಲಿ ಬರೆದುಕೊಂಡಿದೆ.

Related Articles

Leave a Reply

Your email address will not be published. Required fields are marked *

Back to top button