ಪ್ರಮುಖ ಸುದ್ದಿ
ಇಂದು ರಾಜ್ಯದಲ್ಲಿ ಹೊಸದಾಗಿ ಒಂದೇ 1 ಕೊರೊನಾ ಪಾಸಿಟಿವ್ ಪತ್ತೆ.!
ನಿನ್ನೆಯಿಂದ ಇವರೆಗೂ ಒಂದೇ ಒಂದು ಕೊರೊನಾ ಪಾಸಿಟಿವ್ ಪತ್ತೆ.!
ವಿವಿಡೆಸ್ಕ್ಃ ಕರ್ನಾಟಕದಲ್ಲಿ ನಿನ್ನೆಯಿಂದ ಇವತ್ತಿನ 12 ಗಂಟೆವರೆಗೂ ಅಂದರೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಇಂದಿನ ಮೊದಲ ಆರೋಗ್ಯ ಬುಲೆಟಿನ್ ನಲ್ಲಿ ಕೇವಲ ಒಂದೇ ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಸಮಾಧಾನಕರ ತಂದಿದೆ ಎನ್ನಲಾಗಿದೆ.
ಆದರೆ ಸಂಜೆವರೆಗೂ ಕಾಯಬೇಕು. ಎಷ್ಟು ಪಾಸಿಟಿವ್ ಬರಬಹುದು ಎಂಬುದಕ್ಕೆ, ಮೊದಲ ಬುಕೆಟಿನ್ ನಲ್ಲಿ ಇಂದು ಒಂದೇ ಪಾಸಿಟಿವ್ ಪತ್ತೆಯಾಗಿದೆ ಅದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ.
ನಿತ್ಯ ಮೊದಲ ಆರೋಗ್ಯ ಇಲಾಖೆ ಪ್ರಕಟಿಸುವ ವರದಿಯಲ್ಲಿ ಕನಿಷ್ಠ 5-8 ಗರಿಷ್ಠ 10-15 ಪ್ರಕರಣಗಳು ಪತ್ತೆಯಾಗಿರುವದು ನಮ್ಮ ಕಣ್ಮುಂದೆ ಇದೆ.
ಆದರೆ ಇಂದು ಮಾತ್ರ ಮೊದಲ ವರದಿಯಲ್ಲಿ ಒಂದೇ ಒಂದು ಪ್ರಕರಣ ಪತ್ತೆಯಾಗಿದೆ.ಇದು ಆರೋಗ್ಯ ಇಲಾಖೆಯ ಸಿಬ್ಬಂದಿ ಒಂದಿಷ್ಟು ನಿಟ್ಟುಸಿರು ಬಿಡುವಂತಾಗಿದೆ ಎನ್ನಲಾಗಿದೆ. ಒಟ್ಟಾರೆ ಈವರೆಗೂ ಕರ್ನಾಟಕದಲ್ಲಿ ಪ್ರಕರಣಗಳ ಸಂಖ್ಯೆ 501 ಆಗಿದೆ.