ದೇಶದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ.! ಎಣ್ಣೆಪ್ರಿಯರು ದಿಲ್ ಖುಷ್
ರಾಜ್ಯದಾದ್ಯಂತ ಮದ್ಯ ಮಾರಾಟಕ್ಕೆ ಅವಕಾಶ.!
ವಿವಿಡೆಸ್ಕ್ಃ ಲಾಕ್ ಡೌನ್ ಮೇ.17 ರವರೆಗೂ ವಿಸ್ತರಣೆ ಮಾಡಿದ ಕೇಂದ್ರ ಸರ್ಕಾರ, ರಾಜ್ಯ ವ್ಯಾಪ್ತಿ ಮೇ. 4 ನೇ ತಾರೀಖಿನಿಂದ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಆದರೆ ಕುಳಿತು ಕುಡಿಯುವಂತಿಲ್ಲ ಕೇವಲ ಪಾರ್ಸಲ್ ಕೊಂಡೊಯ್ಯಲು ಅನುಮತಿ ಕಲ್ಪಿಸಲಾಗಿದೆ.
ಬಾರ್ ಮುಂದೆ ಅಂತರ ಕಾಯ್ದುಕೊಳ್ಳಬೇಕು. 5 ಜನಕ್ಕಿಂತ ಹೆಚ್ವು ಜನನಿಲ್ಲಕೂಡದು. ಸಾಮಾಜಿಕ ಅಂತರ ಅಗತ್ಯ ಆಯಾ ಜಿಲ್ಲಾಧಿಕಾರಿಗಳು ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.
ಕನಿಷ್ಠ 6 ಅಡಿ ಅಂತರ ಕಾಯ್ದುಕೊಂಡು ಮದ್ಯ ಖರೀದಿಸಬೇಕು ಬಾರ್ ನಲ್ಲಿ ಮದ್ಯ ಸೇವನೆ ಮಾಡುವಂತಿಲ್ಲ. ಓನ್ಲಿ ಪಾರ್ಸಲ್ ಗೆ ಮಾತ್ರ ಅವಕಾಶ ನೀಡಲಾಗಿದೆ. ಮದ್ಯ ಪ್ರಿಯರಿಗೆ ಎಣ್ಣೆ ದೊರೆಯುತ್ತಿರುವದು ಫುಲ್ ಖುಷ್ ಆಗಿದೆ ಎನ್ನಬಹುದು
ಆದರೆ ಇದು ಮುಂದೆ ಅವಘಡ ಸಂಭವಿಸುವ ಲಕ್ಷಣವಂತು ಕಂಡು ಬರುತ್ತಿದೆ.
ಮದ್ಯ ಪ್ರಿಯರು ಎಣ್ಣೆ ಹೊಡೆಯುವ ಖುಷಿಯಲ್ಲಿ ಮನೆಗೆ ಕೊರೊನಾ ತೆಗೆದುಕೊಂಡು ಹೋಗುವ ಸಾಧ್ಯತೆಗಳು ಜಾಸ್ತಿ ಇವೆ. ಮದ್ಯ ಮಾರಾಟದಿಂದ ಪೊಲೀಸರಿಗೆ ಹೆಚ್ಚಿನ ಕೆಲಸ ನೀಡಿದಂತಾಗಿದೆ.ಕುಡುಕರ ಹಾವಳಿ ಬೇರೆ ಶುರುವಾಗುತ್ತದೆ ಅಂದ್ರೆ ತಪ್ಪಿಲ್ಲ.