ಉತ್ತಮ ವ್ಯಕ್ತಿತ್ವಕ್ಕೆ ಸಮಾಜದಲ್ಲಿ ಮನ್ನಣೆ- ಅಪ್ಪಣ್ಣ
ಗೋಪೂಜೆ, ಬೆಲ್ಲ, ಕೊಬ್ರಿ, ಬಾಳೆಹಣ್ಣು ಸಮರ್ಪಣೆ
ಗೋಶಾಲೆ ಅಭಿವೃದ್ಧಿಗೆ ಧನಸಹಾಯ ನೀಡಿದ ನಗರಸಭೆ ಸದಸ್ಯ
ಶಹಾಪುರ; ಮನುಷ್ಯ ಸಮಾಜ ಜೀವಿ. ಪ್ರಕೃತಿಯನ್ನು ಪ್ರೀತಿಸಬೇಕು. ಪ್ರಕೃತಿ ಮೇಲೆ ದಬ್ಬಾಳಿಕೆ ನಡೆಸಿದಲ್ಲಿ ಅದು ನಮಗೆ ಸಂಕಟ ತರುವದಲ್ಲಿ ಯಾವುದೇ ಸಂದೇಹವಿಲ್ಲ. ಇದಕ್ಕೆ ಪ್ರಸ್ತುತ ಕೊರೊನಾ ಸಮಸ್ಯೆಯನ್ನೆ ನಾವು ಕಾಣಬಹುದು ಎಂದು ನಗರಸಭೆ ಸದಸ್ಯ ಅಪ್ಪಣ್ಣ ದಶವಂತ ತಿಳಿಸಿದರು.
ಅಪ್ಪಣ್ಣ ದಶವಂತ ಅವರ ಜನ್ಮ ದಿನಾನಾಚರಣೆ ಅಂಗವಾಗಿ ನಗರದ ನಂದಿ ಬೆಟ್ಟದ ವಿಶ್ವಮಾತಾ ಗೋಶಾಲೆಯಲ್ಲಿ ಎಂ.ಪಿ.ಸ್ನೇಹ ಬಳಗ ಆಯೋಜಿಸಿದ್ದ ಸರಳ ಗೋವು ಪೂಜೆ ನೆರವೇರಿಸಿ ಮತ್ತು ಹಸುಗಳಿಗೆ ಹುಲ್ಲು, ಬೆಲ್ಲ, ಕೊಬ್ಬರಿ ನೀಡಿ ಅವರು ಮಾತನಾಡಿದರು.
ಅಧಿಕಾರವಿರಲಿ ಬಿಡಲಿ ಮನುಷ್ಯ ಶ್ರೀಮಂತಿಕೆ ಇದ್ದಲ್ಲಿ ಮಾತ್ರ ದಾನ ಮಾಡಬೇಕೆಂಬುದೇನು ಇಲ್ಲ. ನಮ್ಮಲ್ಲಿ ಇದ್ದುದರಲ್ಲಿಯೇ ನೆರೆಹೊರೆಯವರ ಕಷ್ಟ ಸಂಕಷ್ಟದಲ್ಲಿ ಭಾಗಿಯಾಗಿ ಕೈಲಾದ ಸಹಾಯ ಸಹಕಾರ ನೀಡುವದೇ ಮನುಜ ಧರ್ಮ. ಉತ್ತಮ ವ್ಯಕ್ತಿತ್ವ ರೂಢಿಸಿಕೊಂಡಲ್ಲಿ ಸಮಾಜದಲ್ಲಿ ಬೆಲೆ ಇರಲಿದೆ ಎಂದರು.
ಇದೇ ಸಂದರ್ಭದಲ್ಲಿ ಗೋವು ಶಾಲಾ ಅಭಿವೃದ್ಧಿಗೆ 10 ಸಾವಿರ ರೂ. ಧನ ಸಹಾಯ ನೀಡಿದರು. ಗೋವುಗಳಿಗೆ 6 ಬಾಕ್ಸ್ ಬಾಳೆ ಹಣ್ಣು, 50 ಕಟ್ ಬಿಳಿ ಜೋಳ, ಮತ್ತು ಒಂದು ಕ್ವಿಂಟಾಲ್ ಅಕ್ಕಿಯನ್ನು ಸಹ ಸಲ್ಲಿಸಲಾಯಿತು.
ಕೊರೋನಾ ಪರಿಸ್ಥಿತಿಯಿಂದ ಕಂಗಾಲಾದ ತಮ್ಮ ವಾರ್ಡಿನ ಬಡ ಜನತೆಗೆ ಆಹಾರ ಧಾನ್ಯ ಕಿಟ್ ಸಹ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಗೋ ಶಾಲೆಯ ಮುಖ್ಯಸ್ಥ ಸಂಗಮೇಶ ಅವರು ದಶವಂತ ಅವರಿಗೆ ಶಾಲು ಹೊದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷ ದೇವು ಕೋನೇರ, ಮುಖಂಡರಾದ ಚಂದ್ರು ಯಾಳಗಿ, ಸುನೀಲ ಗಣಾಚಾರಿ, ಮಲ್ಲು ಪೂಜಾರಿ, ವಿರೇಶ್ ಅಡಕಿ, ದೇವು ಸುರಪುರಕರ್, ಗುರು ಬಾಣತಿಹಾಳ್, ರಾಜು ನಾಯ್ಕೋಡಿ, ಮಲ್ಲಿಕಾರ್ಜುನ ಪಾಟೀಲ್, ಮಲ್ಲು ಕೆಂಭಾವಿ, ಹಯ್ಯಾಳಪ್ಪ, ಸರ್ವೋತ್ತಮ ಬಾಗೇವಾಡಿ, ಅಜಯ್ ಶರ್ಮ ಸೇರಿದಂತೆ ಯುವಕರು ಇದ್ದರು.