ಪ್ರಮುಖ ಸುದ್ದಿ
ಶಹಾಪುರಃ ಸಾಯಿ ಕುಬೇರಾ ಮುಂದೆ ಎಣ್ಣೆ ಪ್ರಿಯರ ಸಾಲು
ಶಹಾಪುರಃ ಸಾಯಿ ಕುಬೇರಾ ಮುಂದೆ ಎಣ್ಣೆ ಪ್ರಿಯರ ಸಾಲು
ಶಹಾಪುರಃ ಮದ್ಯದಂಗಡಿ ಆರಂಭಕ್ಕೆ ಸರ್ಕಾರ ಅನುಮತಿ ನೀಡುತ್ತಿದ್ದಂತೆ, ಲಾಕ್ ಡೌನ್ ನಿಂದ ಲಾಕ್ ಆಗಿದ್ದ ವೈನ್ ಶಾಪ್ ಗಳು ಇಂದು ಬೆಳಗ್ಗೆನೇ ಓಪನ್ ಆಗುತ್ತಿದ್ದಂತೆ ಎಣ್ಣೆ ಪ್ರಿಯರು ಬೆಳ್ಳಂ ಬೆಳಗ್ಗೆ ವೈನ್ ಶಾಪ್ ಮುಂದೆ ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿಸುವದು ಕಂಡು ಬಂದಿತು.
ನಗರದ ರಾಜ್ಯ ಹೆದ್ದಾರಿ ಪಕ್ಕದ ಸಾಯಿ ಕುಬೇರಾ ವೈನ್ಸ್ ಮುಂದೆ ಇಂದು ಬೆಳ್ಳಂ ಬೆಳಗ್ಗೇನೆ ಎಣ್ಣೆ ಪ್ರಿಯರು ಸರತಿ ಸಾಲಿನಲ್ಲಿ ನಿಂತು ಎಣ್ಣೆ ಖರೀದಿಸಿದರು.
ಲಾಕ್ ಡೌನ್ ನಿಂದಾಗಿ ಎಣ್ಣೆ ಅಂಗಡಿಗಳು ಬಂದ್ ಆಗಿದ್ದ ಪರಿಣಾಮ ಕೆಲ ಮದ್ಯ ಪ್ರಿಯರು ಕಂಗಾಲಾಗಿದ್ದರು. ಇಂದು ಎಣ್ಣೆ ದೊರೆತಿರುವದಕ್ಕೆ ಫುಲ್ ಖುಷಿಯಲ್ಲಿ ಖರೀದಿಸುತ್ತಿರುವದು ಕಂಡು ಬಂದಿತು.
ಬೆಳಗ್ಗೆ 9 ಗಂಟೆಯಿಂದ ಮದ್ಯಾಹ್ನ 3 ಗಂಟೆವರೆಗೆ ವೈನ್ಸ್ ಶಾಪ್, ಬಾರ್ ಗಳು ತೆರೆಯಲು ಅವಕಾಶ ಕಲ್ಪಿಸಿದ್ದು, ಪಾರ್ಸಲ್ ನೀಡಲು ಮಾತ್ರ ಸರ್ಕಾರ ಅನುಮತಿ ನೀಡಿದೆ ಎನ್ನಲಾಗಿದೆ.