ನೇಕಾರರನ್ನು ಮರೆತ ಬಿಜೆಪಿ ಸರ್ಕಾರ- ರಾಜೂ ಚಿಲ್ಲಾಳ
ನೇಕಾರರನ್ನು ಮರೆತ ಬಿಜೆಪಿ ಸರ್ಕಾರ- ರಾಜೂ ಚಿಲ್ಲಾಳ
ಶಹಾಪುರಃ ಲಾಕ್ ಡೌನ್ ನಿಂದ ನೇಕಾರರು ಸಾಕಷ್ಟು ನಷ್ಠ ಅನುಭವಿಸಿ ತೊಂದರೆಯಲ್ಲಿದ್ದಾರೆ ಸರ್ಕಾರ ನೇಕಾರ ಸಮುದಾಯಕ್ಕೂ ಕನಿಷ್ಠ 5 ಸಾವಿರ ವಿತರಿಸುವ ಕುರಿತು ಕೂಡಲೇ ಸರ್ಕಾರ ಘೋಷಣೆ ಮಾಡಬೇಕೆಂದು ತಾಲೂಕು ಸ್ವಕುಳ ಸಾಳಿ ಸಮಾಜದ ಅಧ್ಯಕ್ಷ ರಾಜಕುಮಾರ ಚಿಲ್ಲಾಳ ಆಗ್ರಹಿಸಿದ್ದಾರೆ.
ಬಟ್ಟೆ ನೇಯ್ಗೆ ಮೂಲಕ ಬದುಕು ಕಟ್ಟಿಕೊಳ್ಳುವದು ದುಸ್ಥರವಾಗಿದೆ. ಅಲ್ಲದೆ ಕೊರೊನಾ ಹರಡದಂತೆ ತಡೆಯಲು ಘೋಷಿಸಿದ ಲಾಕ್ ಡೌನ್ ನಿಂದ ತೀರ ಸಂಕಷ್ಟದಲ್ಲಿದ್ದು, ಒಪ್ಪತ್ತಿನ ಊಟಕ್ಕೂ ಅಲೆದಾಡುವಂತಾಗಿದೆ.
ಲಾಕ್ ಡೌನ್ ನಿಂದ ಕಾಯಕ ಜೀವಿಗಳು ಕಂಗಾಲಾಗಿದ್ದು, ಸರ್ಕಾರ ಇಂತಹ ಕಾಯಕ ವರ್ಗದವರಿಗೆ ತಲಾ 5 ಸಾವಿರ ರೂ.ನೀಡುವುದಾಗಿ ಘೋಷಣೆ ಮಾಡಿದೆ. ಇದರಲ್ಲಿ ಮಡಿವಾಳ, ಸವಿತಾ ಸಮಾಜ ಕಾಯಕ ಜೀವಿಗಳಿಗೆ 5 ಸಾವಿರ ಘೋಷಣೆ ಮಾಡಿರುವದು ಸ್ವಾಗತಾರ್ಹ ಆದರೆ ನೇಕಾರ ಸಮುದಾಯವನ್ನು ಕಡೆಗಣಿಸಿರುವದು ದುರಂತ.
ಕೂಡಲೇ ಸಿಎಂ ಅವರು ನೇಕಾರ ವರ್ಗದಲ್ಲಿ ನಿತ್ಯ ಕಾಯಕದಲ್ಲಿ ನಿರತ ಜನರನ್ನು ಗುರುತಿಸಿ ಅವರಿಗೂ ಅನುಕೂಲ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.