ಪ್ರಮುಖ ಸುದ್ದಿ
ಯಾದಗಿರಿಃ ಮತ್ತೆ 5 ಪಾಸಿಟಿವ್, ಕೊರೊನಾ ಸೋಂಕಿತರ ಸಂಖ್ಯೆ 10 ಕ್ಕೆ ಏರಿಕೆ
ಯಾದಗಿರಿಃ ಮತ್ತೆ 5 ಪಾಸಿಟಿವ್, ಕೊರೊನಾ ಸೋಂಕಿತರ ಸಂಖ್ಯೆ 10 ಕ್ಕೆ ಏರಿಕೆ
ಯಾದಗಿರಿಃ ಇಂದು ಯಾದಗಿರಿ ಜಿಲ್ಲೆಯಲ್ಲಿ ಮತ್ತೆ 5 ಕೊರೊನಾ ಪಾಸಿಟಿವ್ ದೃಢಪಟ್ಟಿವೆ. 5 ಜನ ಸೋಂಕಿತರು ಮಹಾರಾಷ್ಟರದಿಂದ ಬಂದವರಾಗಿದ್ದು, ನಗರದ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ನಿನ್ನೆ ಶಹಾಪುರ ತಾಲೂಕಿನ ವಿವಿಧ ಕ್ವಾರಂಟೈನ್ ಕೇಂದ್ರದಲ್ಲಿರುವ 3 ಜನ ಕಾರ್ಮಿಕರಲ್ಲಿ ಕೊರೊನಾ ಸೋಂಕು ತಗುಲಿರುವದು ದೃಢಪಟ್ಟಿತ್ತು. ಈ ಮೊದಲು ಸುರಪುರನಲ್ಲಿ ಎರಡು ಕೊರೊನಾ ಸೋಂಕಿತರು ಪತ್ತೆಯಾಗಿದ್ದರು. ಇದೀಗ ಯಾದಗಿರಿಯ ವಡಿಗೇರಿ ಭಾಗದ ಮುರಾರ್ಜಿ ಕ್ವಾರಂಟೈನ್ ಕೇಂದ್ರ ದಲ್ಲಿ ಇರುವ ಐವರಿಗೆ ಕೊರೊನಾ ತಗಲಾಕೊಂಡಿದೆ ಎನ್ನಲಾಗಿದೆ.
ಜಿಲ್ಲಾಡಳಿ ಮಾಹಿತಿ ಪ್ರಕಾರ ಪಿ.1188, 1189, 1190, 1191 ಮತ್ತು 1192 ಸಂಖ್ಯೆ ಮೂಲಕ ಸೋಂಕಿತರನ್ನು ಗುರುತಿಸಲಾಗಿದೆ. ಗ್ರೀನ್ ಝೋನ್ ಇದ್ದ ಯಾದಗಿರಿ ಜಿಲ್ಲೆಗೆ ಕೊರೊನಾ ಅಬ್ಬರ ನಿನ್ನೆಯಿಂದ ಮುಂದುವರೆಯುತ್ತಿದೆ. ಗೀಗಾಗಿ ಆರಾಮವಾಗಿದ್ದ ಜಿಲ್ಲೆಯ ಜನರಲ್ಲಿ ಈಗ ದುಗುಡ ಆತಂಕ ಹೆಚ್ವಾಗಿದೆ.