ಮಳೆಯಿಂದಾಗಿ ಕೆರೆಯಾದ ನಾಗಮಂಗಲ ಬಸ್ ನಿಲ್ದಾಣ
ಮಳೆ ನೀರಿನಿಂದಾಗಿ ಕೆರೆಯಂತಾದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ
ನಾಗಮಂಗಲ: ತಾಲೂಕಿನಲ್ಲಿ ಎರಡು-ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನಾಗಮಂಗಲ ಪಟ್ಟಣದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ನೀರು ತುಂಬಿದ್ದು ಪ್ರಯಾಣಿಕರು ನಡೆದಾಡಲು ಪರದಾಡುವಂತಾಗಿದೆ.
ಪಟ್ಟಣದ ಬಿ.ಎಂ ರಸ್ತೆಯಲ್ಲಿರುವ ಕೆಎಸ್ಆರ್ ಟಿಸಿ ಬಸ್ ಡಿಪೋ ಹಾಗೂ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಮಳೆ ನೀರಿನಿಂದ ತುಂಬಿದ್ದು. ಪ್ರಯಾಣಿಕರು ನೀರಿನಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್ ನಿಲ್ದಾಣದಲ್ಲಿರುವ ಶೌಚಾಲ ಗೃಹಕ್ಕೆ ಹೋಗಲು ಸಾಧ್ಯವಾಗದಂತೆ ನೀರು ತುಂಬಿಕೊಂಡಿದ್ದು.
ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಶೌಚಾಲಯ ಗೃಹಕ್ಕೆ ಹೋಗಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್ ನಿಲ್ದಾಣದಲ್ಲಿರುವ ಶೌಚಾಲಯ ಗೃಹಕ್ಕೆ ಹೋಗಲು ಸಾಧ್ಯವಾಗದಂತೆ ನೀರು ತುಂಬಿಕೊಂಡಿದ್ದು.
ಬಸ್ ನಿಲ್ದಾಣದಲ್ಲಿ ಮಳೆನೀರು ಹೋಗಲಿರುವ ಚರಂಡಿ ಸಂಪೂರ್ಣವಾಗಿ ಕಸ ತುಂಬಿಕೊಂಡಿರುವುದರಿಂದ ಬಸ್ ನಿಲ್ದಾಣದ ನೀರು ಹೊರ ಹೋಗದ ಶೌಚಾಲಯ ಗೃಹದ ಮುಂದೆ ಕೆರೆಯಂತೆ ನೀರು ನಿಂತಿದ್ದು.
ನೀರನ್ನು ಹೊರ ಹಾಕಿಸುವಂತೆ ಅಧಿಕಾರಿಗಳ ಗಮನಕ್ಕೆ ಪ್ರಯಾಣಿಕರು ತಂದರೂ ಸಹ ಕೆಎಸ್ಆರ್ ಟಿಸಿ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಳ್ಳದೆ ಸುಮ್ಮನಾಗಿದ್ದಾರೆ.
ವರದಿ: ದೇ.ರಾ .ಜಗದೀಶ.