ಕೊರೊನಾ ಸುಳಿಯಲ್ಲಿ ಮುಂಬಯಿ ವಿಲವಿಲ, ಶವಗಳು ಒಯ್ಯಲು ಕುಟುಂಬಸ್ಥರ ಹಿಂದೇಟು
ಕೊರೊನಾ ಸುಳಿಯಲ್ಲಿ ಮುಂಬಯಿ ವಿಲವಿಲ, ಶವಗಳು ಒಯ್ಯದ ಕುಟುಂಬಸ್ಥರು.!
ಮುಂಬಯಿಃ ಕೊರೊನಾ ಸುಳಿಗೆ ಸಿಲುಕಿದ ದೇಶದ ಆರ್ಥಿಕ ರಾಜಧಾನಿ ಮುಂಬಯೀಗ ಅಕ್ಷರಸಹಃ ವಿಚಲಿತಗೊಂಡಿದೆ.
ಕೊರೊನಾ ವೇಗವಾಗಿ ಹಬ್ಬುತ್ತಿರುವ ಮುಂಬಯಲ್ಲೀಗ ಅಸಹಾಯಕತೆ ಹರಾಜಕತೆ ಸೃಷ್ಟಿಯಾಗಿದೆ. ಕೊರೊನಾ ಎಂಬ ಮಹಾಮಾರಿ ಮುಂಬಯಿಯನ್ನು ತನ್ನ ಕಪಿ ಮುಷ್ಠಿಯಲ್ಲಿ ಬಿಗಿದಿಡಿದಿದೆ.
ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ. ಓರ್ವ ಕೊರೊನಾ ಸೋಂಕಿತನನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಬೇಕಾದರೆ ಕನಿಷ್ಠ 16 ತಾಸು ಬೇಕಂತೆ. ಕೊರೊನಾಗೆ ಬಲಿಯಾದವರ ಶವಗಳನ್ನು ಸಹ ಸಂಬಂಧಿಕರು ತೆಗೆದುಕೊಂಡು ಹೋಗಲು ನಿರಾಕರಿಸುತ್ತಿರುವ ಹಿನ್ನೆಲೆ ಶವಾಗಾರಗಳು ತುಂಬಿವೆ ಎನ್ನಲಾಗಿದೆ.
ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೆ ನೆಲದ ಮೇಲೆಯೇ ರೋಗಿಗಳು ಒದ್ದಾಡುತ್ತಿರುವ ದೃಶ್ಯ ಸಿನಿಮಾಗಳಲ್ಲಿ ವೀಕ್ಷಿಸಿದಂತ ಸ್ಥಿತಿ ನಿರ್ಮಾಣವಾಗಿದೆ.
ವೈದ್ಯರು-ದಾದಿಯರು ವಿಶ್ರಾಂತಿಗೆ ಸಮಯವಿಲ್ಲದಂತೆ ದುಡಿಯುತ್ತಿರುವುದು ಶ್ಲಾಘನೀಯವಾಗಿದೆ. ಇತರೆ ರೋಗಗಳಿಗೆ ಚಿಕಿತ್ಸೆ ನೀಡುವ ವಾರ್ಡ್ಗಳು ಸಹ ಕೊರೊನಾ ವಾರ್ಡ್ ಗಳಾಗಿ ಪರಿವರ್ತನೆ ಮಾಡಲಾಗಿದೆ.
ಆದಾಗ್ಯೂ ಸೋಂಕಿತರನ್ನು ನಿಯಂತ್ರಿಸಲಾಗುತ್ತಿಲ್ಲ ಎಂದು ಇಲ್ಲಿನ ಕಿಂಗ್ ಎಡ್ವರ್ಡ್ ಸಾರ್ವಜನಿಕ ಆಸ್ಪತ್ರೆಯ ದಾದಿ ಮಾಧುರಿ ರಾಮ್ದಾಸ್ ಹೇಳಿದ್ದಾರೆ