ಶಹಾಪುರಃ ನಗರಠಾಣೆ ಕಾನ್ಸಟೇಬಲ್‍ಗೆ ಕೋವಿಡ್-19 ಸೋಂಕು ದೃಢ – ಠಾಣೆಗೆ ಸ್ಯಾನಿಟೈಸ್,
ನಗರಠಾಣೆಗೆ ಸ್ಯಾನಿಟೈಸ್, ಎಲ್ಲಾ ಸಿಬ್ಬಂದಿಗೆ ಪರೀಕ್ಷೆ, ಎಸ್‍ಪಿ ಭೇಟಿ
ಶಹಾಪುರಃ ನಗರ ಠಾಣೆ ಕಾನ್ಸಟೇಬಲ್ (ಪಿ-ಸಂಖ್ಯೆ 4446) ಓರ್ವನಿಗೆ ಕೊರೊನಾ ಪಾಸಿಟಿವ್ ದೃಢವಾಗಿರುವ ಹಿನ್ನೆಲೆ ನಗರ ಠಾಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ ಭಗವಾನ ಸೊನಾವಣೆ ಭೇಟಿ ನೀಡಿದರು.
ಈ ವೇಳೆ ಠಾಣೆಗೆ ಸ್ಯಾನಿಟೈಸ್ ಮಾಡಿಸಲಾಯಿತು. ಅಲ್ಲದೆ ಠಾಣೆಯ ಎಲ್ಲಾ ಪೊಲೀಸ್ ಸಿಬ್ಬಂದಿಯನ್ನು ಭೀಮರಾಯನ ಗುಡಿ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪೊಲೀಸ್ ಸಿಬ್ಬಂದಿಯ ಗಂಟಲು ದ್ರವ ಮತ್ತು ರಕ್ತ ಮಾದರಿ ತೆಗೆದುಕೊಳ್ಳಲಾಗಿದೆ. ಕೂಡಲೇ ಪರೀಕ್ಷಾ ವರದಿ ನೀಡುವಂತೆ ಎಸ್‍ಪಿ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಕೋವಿಡ್ ಸೋಂಕಿತ ಕಾನ್ಸಟೇಬಲ್ ಸಂಪರ್ಕ ಕಾರ್ಯಪತ್ತೆ ನಡೆದಿದ್ದು, ಈತನ ಪ್ರಾಥಮಿಕ ಸಂಪರ್ಕದಲ್ಲಿರುವವರ ಪಟ್ಟಿ ಮಾಡಲಾಗುತ್ತಿದೆ. ಈಗಾಗಲೇ ಸೋಂಕಿತ ಕಾನ್ಸಟೇಬಲ್ ಹೋಂಮ್ ಕ್ವಾರಂಟೈನ್ ನಲ್ಲಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ನಿತ್ಯ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ.
ಕಾನ್ಸಟೇಬಲ್ ಠಾಣೆಯಲ್ಲಿ ರೈಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ, ಅಲ್ಲದೆ ಈಚೆಗೆ ಆತನನ್ನು ತಾಲೂಕಿನ ಕೊಳ್ಳೂರ(ಎಂ) ಗ್ರಾಮದ ಹತ್ತಿರದ check post ನಲ್ಲಿ ಕರ್ತವ್ಯ ನಿರತನಾಗಿದ್ದ ಎನ್ನಲಾಗಿದೆ. ಒಟ್ಟಾರೆ ಸೋಂಕಿತ ಪೇಷಂಟ್ ಸಂಖ್ಯೆ 4446 ಆಗಿದ್ದು, ಈತನ ಸಂಪರ್ಕ ಕಾರ್ಯ ಪತ್ತೆ ಹಚ್ಚಲಾಗುತ್ತಿದೆ.
——————