ಅಂಕಣ

ಪೂಜ್ಯರ ವಾಣಿಯಂತೆ ಬಿ.ಡಿ.ಜತ್ತಿ ದೇಶದ ರಾಜನಾಗಿದ್ದ..ಡಾ.ಜತ್ತಿ ಅವರ 19 ನೇ ಪುಣ್ಯ ಸ್ಮರಣೆ ನಿಮಿತ್ತ ಲೇಖನ

ಭಾರತ ದೇಶದ ಮಾಜಿ ರಾಷ್ಟ್ರಪತಿಗಳು, ಮಾಜಿ ಉಪರಾಷ್ಟ್ರಪತಿ, ಮಾಜಿ ಮುಖ್ಯಮಂತ್ರಿಗಳಾದ ಹೆಮ್ಮೆಯ ಕನ್ನಡಿಗ, ಬಸವ ಸಮಿತಿಯ ಸ್ಥಾಪಕರು ಶರಣ ಶ್ರೀ ಡಾ.ಬಿ. ಡಿ. ಜತ್ತಿ ಅವರ 19 ನೇ ಪುಣ್ಯ ಸ್ಮರಣೆಯ ನಿಮಿತ್ತ ಲೇಖನ…

ಅಥಣಿ ಬೆಳ್ಳುಳ್ಳಿ ಬಜಾರ ಮುಗಿಸಿ ಮುರುಘಾ ಮಠಕ್ಕೆ ದಾನಪ್ಪನವರು ಮಗನಾದ ಬಸಪ್ಪನನ್ನು ಕರಕೊಂಡು ತಂದಿದ್ದ ಬುತ್ತಿ ಬಿಚ್ಚಿ ಇಬ್ಬರೂ ಊಟ ಮಾಡುವಾಗ ಒಳಗಿನ ಪೂಜಾ ಕೋಣೆಯಿಂದ ಪೂಜ್ಯ ಮುರುಘ ರಾಜೇಂದ್ರ ಸ್ವಾಮಿಗಳು ಹೊರಬಂದಾಗ ಈ ದಾನಪ್ಪ ಮಗ ಬಸಪ್ಪ ಇಬ್ಬರು ನಮಸ್ಕರಿಸುತ್ತಾರೆ.

ಆಗ ಸ್ವಾಮಿಗಳು ದಾನಪ್ಪನನ್ನು ಈತ ಯಾರು ಎಂದು ಕೇಳಿದರು ಅದಕ್ಕೆ ನನ್ನ ಮಗಾ ಬಸಪ್ಪರಿ ಬುದ್ಧಿ ಎಂದನು. ಆಗ ಸ್ವಾಮಿಗಳು ಆತನನ್ನೇ ದಿಟ್ಟಿಸಿ ನೋಡಿ ದಾನಪ್ಪ ನಿನ್ನ ಮಗ ಈ ದೇಶದ ರಾಜಾ ಆಗುತ್ತಾನೆ ಎಂದರು ದಾನಪ್ಪ ಏನ್ರೀ ಬುದ್ಧಿ ಬೆಳ್ಳುಳ್ಳಿ ಮಾರುವ ನನ್ನ ಮಗಾ ರಾಜಾ ಹ್ಯಾಂಗ ಆಗತಾನ ಅಂದಾಗ ಪೂಜ್ಯರು ಮುಂದೆ ನೋಡು ನಿನಗೆ ಎಲ್ಲಾ ಗೊತ್ತಾಗುತ್ತದೆ ಅಂತಾ ಅಂದರು.
ಅವರ ವಾಣಿಯಂತೆ…..
ಬೆಳಗಾವಿ ಕುರಿತು ಹಗುರವಾಗಿ ನಿರ್ಧಾರ ತೆಗೆದುಕೊಳ್ಳುವ ಚಿಕ್ಕ ವಿಷಯವಲ್ಲ ಅದು ನನ್ನ ಜನರ ಭಾವನೆಗೆ ಸಂಬಂಧಿಸಿದ್ದು. ಅದು ನನ್ನ ನಾಡಿನ ಅಸ್ಮಿತೆಯ ಪ್ರಶ್ನೆ. ನೀವೇನಾದರೂ ನನ್ನ ಮೇಲೆ ಈ ವಿಷಯದಲ್ಲಿ ಒತ್ತಡ ಹಾಕಿದ್ದೆ ಆದರೆ ನಾನು ಈ ಕ್ಷಣವೇ ನನ್ನ ಪದವಿಗೆ ರಾಜೀನಾಮೆ ನೀಡುತ್ತೇನೆ ಹೊರತಾಗಿ ಬೆಳಗಾವಿ ಇಬ್ಬಾಗ ಆಗುವುದನ್ನು ಅಥವಾ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟು ಕೊಡುವುದನ್ನು ಬೆಂಬಲಿಸುವುದಿಲ್ಲ.

ಬೆಳಗಾವಿ ವಿಚಾರದಲ್ಲಿ ದೇಶದ ಪ್ರಥಮ ಪ್ರಧಾನಿ ನೆಹರು ಅವರಿಗೆ ಎಚ್ಚರಿಕೆ ಕೊಟ್ಟ ಮಹಾನ ನಾಯಕ ಬಸಪ್ಪ ದಾನಪ್ಪ ಜತ್ತಿ. ಬಸಪ್ಪ ದಾನಪ್ಪ ಜತ್ತಿ ಕರ್ನಾಟಕ ಕಂಡಂತಹ ಅಪ್ರತಿಮ ರಾಜಕೀಯ ನಾಯಕ ಭಾಷಾವಾರು ಪ್ರಾಂತ್ಯಗಳ ರಚನೆಯ ವೇಳೆ ಕರ್ನಾಟಕ ಮತ್ತು ಮಹಾರಾಷ್ಟ್ರಗಳ ನಡುವೆ ಬೆಳಗಾವಿ ಸಮಸ್ಯೆ ಉದ್ಭವಿಸಿತ್ತು.

ಆ ವೇಳೆ ಮಹಾರಾಷ್ಟ್ರದ ಮುಖ್ಯಮಂತ್ರಿ ಗೋವಿಂದ ವಲ್ಲಭ ಪಂತ್ ಇದ್ದರು. ಬೆಳಗಾವಿ ವಿಚಾರದಲ್ಲಿ ನೀವು ಒಂದು ನಿರ್ಧಾರ ತೆಗೆದುಕೊಳ್ಳಲೇ ಬೇಕು ಎಂದು ಒತ್ತಡ ಹೇರಿದಾಗ ಬಿ ಡಿ ಜತ್ತಿಯವರು ಪದವಿ ಬಿಡುತ್ತೇನೆ ಹೊರತಾಗಿ ಬೆಳಗಾವಿ ಬಿಡೋದಿಲ್ಲ ಎನ್ನುವ ಕಡಕ್ ಎಚ್ಚರಿಕೆ ಕೊಟ್ಟು ಅಲ್ಲಿಂದ ಎದ್ದು ಬಂದಿದ್ದರು.

ಅಂತ ಕೆಚ್ಚೆದೆಯ ರಾಜಕೀಯ ನಾಯಕನನ್ನು ಕನ್ನಡ ನಾಡು ಎಂದು ಮರೆಯಲು ಸಾಧ್ಯವಿಲ್ಲ. ಬಿ ಡಿ ಜತ್ತಿಯವರು ಉಪರಾಷ್ಟ್ರಪತಿಯಾಗಿ ಹಂಗಾಮಿ ರಾಷ್ಟ್ರಪತಿಯಾಗಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಬೃಹತ್ ಮರವಾಗಿ ಬೆಳೆದು ನಿಂತವರು.

ಭಾರತೀಯ ರಾಜಕಾರಣಕ್ಕೆ ಬಿಡಿ ಜತ್ತಿಯವರು ಓರ್ವ ಆಪತ್ಬಾಂಧವ ಯಾಕಂದ್ರೆ ಅವರು ಎಲ್ಲಾ ಸ್ಥಾನಗಳನ್ನ ನಿಭಾಯಿಸಿದ್ದು ನಿರ್ಣಾಯಕ ಸಂದರ್ಭದಲ್ಲಿ ಸಂದಿಗ್ಧ ಪರಿಸ್ಥಿತಿಯಲ್ಲಿ.

ಬಿಡಿ ಜತ್ತಿಯವರು ಕೇವಲ ಕರ್ನಾಟಕಕ್ಕೆ ಸೀಮಿತವಾದವರಲ್ಲ. ದೇಶ ಕಂಡ ಅಪರೂಪದ ರಾಜಕಾರಣಿ. ಮಹಾರಾಷ್ಟ್ರದ ಮುಂಬೈ ನಲ್ಲಿ ಇದ್ದರೂ ಕನ್ನಡ ಪ್ರೇಮವನ್ನು ಬಿಟ್ಟವರಲ್ಲ. ಅಲ್ಲಿಯೂ ಕೂಡ ತಮ್ಮ ಮಕ್ಕಳಿಗೆ ಕನ್ನಡದಲ್ಲಿಯೇ ಶಿಕ್ಷಣ ಕೊಡಿಸಿದರು.

ಬಸವಣ್ಣನವರ ಹಾಗೂ ಗಾಂಧೀಜಿಯವರ ತತ್ವ ಅನುಯಾಯಿಯಾದ ಬಿಡಿ ಜತ್ತಿ ಅವರು ಕಿಲ್ಲೆ ಕಲ್ಯಾಣವನ್ನು ಬಸವಕಲ್ಯಾಣ ಎಂದು ಮರುನಾಮಕರಣ ಮಾಡಿದರು.

ಬಿ ಡಿ ಜತ್ತಿಯವರು ಮುರಾರ್ಜಿ ದೇಸಾಯಿ ಅವರನ್ನು ತನ್ನ ಗುರು ಎಂದೇ ಕರೆಯುತ್ತಿದ್ದರು. ಆದರೆ ಮುರಾರ್ಜಿದೇಸಾಯಿ ಅವರು ಪ್ರಧಾನಿಯಾಗುವ ಆಗ ಪ್ರತಿಜ್ಞಾವಿಧಿ ಬೋಧಿಸಿದ್ದು ಅದೇ ಶಿಷ್ಯ ಬಿಡಿ ಜತ್ತಿಯವರು ಅನ್ನುವುದು ವಿಶೇಷ.

ಯಾಕಂದ್ರೆ ಆಗ ಜತ್ತಿಯವರು ಭಾರತದ ಹಂಗಾಮಿ ರಾಷ್ಟ್ರಪತಿಯಾಗಿದ್ದರು. 1912 ಸೆಪ್ಟೆಂಬರ್ 10 ರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿಯಲ್ಲಿ ಜನಿಸಿದ ಜತ್ತಿಯವರು ವಕೀಲರಾಗಬೇಕು ಅನ್ನುವ ಗುರಿಯನ್ನು ಹೊಂದಿದ್ದರು.

ಕೊಲ್ಲಾಪುರ ರಾಜಾರಾಮ ಕಾಲೇಜಿನಲ್ಲಿ ಆರ್ಟ್ಸ್ ಪದವಿ ಮತ್ತು ಸೈಕ್ಸ್‌ ಕಾನೂನು ಕಾಲೇಜಿನಲ್ಲಿ ಎಲ್.ಎಲ್.ಬಿ. ಪದವಿಯನ್ನು ಮುಗಿಸುತ್ತಾರೆ. ಅದೇ ವೇಳೆ ಅವರ ತಂದೆಯವರು ಲಿಂಗೈಕ್ಯ ರಾಗುತ್ತಾರೆ. ಇದರಿಂದ ಕುಟುಂಬದ ನಿರ್ವಹಣೆ ಇವರ ಹೆಗಲ ಮೇಲೆ ಬೀಳುತ್ತದೆ ಆದ್ದರಿಂದ ಅವರಿಗೆ ವಕೀಲ ವೃತ್ತಿ ಸಾಧ್ಯವಾಗಲಿಲ್ಲ.

ಆಗ ಜತ್ತಿಯವರು ಸ್ವಗ್ರಾಮಕ್ಕೆ ಆಗಮಿಸಿ ಬಹುಬೇಗನೆ ಜನರಿಗೆ ಹತ್ತಿರವಾಗುತ್ತಾರೆ. ತಮ್ಮಲ್ಲಿದ್ದ ನಾಯಕತ್ವ ಗುಣದಿಂದ ಗ್ರಾಮ ಪಂಚಾಯಿತಿಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಮೊದಲ ಬಾರಿಗೆ ರಾಜಕೀಯಕ್ಕೆ ಪ್ರವೇಶ ಮಾಡುತ್ತಾರೆ. ಇದೇ ಹೊತ್ತಿಗೆ ಭಾರತದಲ್ಲಿ ಪ್ರಥಮ ಸಾರ್ವತ್ರಿಕ ಚುನಾವಣೆ ಎದುರಾಗಿತ್ತು.

ಈ ವೇಳೆ ಜತ್ತಿಯವರು ಮುಂಬೈ ರಾಜ ಶಾಸನಸಭೆಗೆ ನಾಮನಿರ್ದೇಶನಗೊಂಡು ಜತ್ತಿ ಅವರು ಸಂಸದೀಯ ಕಾರ್ಯದರ್ಶಿಯಾಗುತ್ತಾರೆ. 19 151 ರಲ್ಲಿ ಮುಂಬೈ ಸರ್ಕಾರದ ಆರೋಗ್ಯ ಮತ್ತು ಕಾರ್ಮಿಕ ಮಂತ್ರಿಯಾಗುತ್ತಾರೆ.

ಭಾಷಾವಾರು ಪ್ರಾಂತ್ಯ ವಿಂಗಡನೆಯ ಸಮಯದಲ್ಲಿ ಮೈಸೂರಿನ ಶಾಸನಸಭೆ ಮತ್ತು ಭೂ ಸುಧಾರಣಾ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಳ್ಳುತ್ತಾರೆ. ಆ ಎಲ್ಲ ಅನುಭವಗಳಿಂದ ಬಿಡಿ ಜತ್ತಿಯವರು 1958 ರಿಂದ 1962 ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಾರೆ.

ಬಿ ಡಿ ಜತ್ತಿಯವರು ತಮ್ಮ ರಾಜಕೀಯ ಆಡಳಿತದ ಅವಧಿಯಲ್ಲಿ ತೋರಿದ ಸೇವೆಯಿಂದ 1962 ರಲ್ಲಿ ಜಮಖಂಡಿ ಕ್ಷೇತ್ರದಿಂದ ಗೆದ್ದು ಬರುತ್ತಾರೆ. ಎಸ್ ನಿಜಲಿಂಗಪ್ಪ ಅವರ ಸಂಪುಟದಲ್ಲಿ ಹಣಕಾಸು ಮತ್ತು ಆಹಾರ ನಾಗರಿಕ ಸರಬರಾಜು ಸಚಿವರಾಗಿ ಸೇವೆ ಸಲ್ಲಿಸುತ್ತಾರೆ.

ಮುಂದಿನ ದಿನದಲ್ಲಿ ಅವರು ರಾಜ್ಯ ರಾಜಕಾರಣವನ್ನು ಬಿಟ್ಟು ರಾಷ್ಟ್ರರಾಜಕಾರಣದತ್ತ ಮುಖ ಮಾಡುತ್ತಾರೆ. 1968 ರಲ್ಲಿ ಪಾಂಡಿಚೇರಿ ರಾಜ್ಯಪಾಲರಾಗಿ 1973 ರಲ್ಲಿ ಒರಿಸ್ಸಾದ ರಾಜ್ಯಪಾಲರಾಗಿ 1974 ರಲ್ಲಿ ಭಾರತದ ಐದನೆಯ ಉಪರಾಷ್ಟ್ರಪತಿಯಾಗಿ ನೇಮಕವಾಗುತ್ತಾರೆ. 1977 ರಲ್ಲಿ ಭಾರತದ ಹಂಗಾಮಿ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸುತ್ತಾರೆ.

ಈ ಮೂಲಕ ಕರ್ನಾಟಕದ ಘನತೆಯನ್ನು ದೇಶದ ಉದ್ದಗಲಕ್ಕೂ ಕೊಂಡೊಯ್ಯುವ ಕೆಲಸವನ್ನು ಬಿಜೆಪಿಯವರು ಮಾಡುತ್ತಾರೆ. ಬಿಡಿ ಜತ್ತಿ ಅವರನ್ನು ಇವತ್ತಿಗೂ ಕರ್ನಾಟಕದ ಜನ ನೆನಪಿಸಿಕೊಳ್ಳುವುದೇ ಅವರಲ್ಲಿದ್ದ ಕನ್ನಡ ಪ್ರೇಮದಿಂದ ಹಾಗೂ ಕರ್ನಾಟಕದ ಬಗ್ಗೆ ಅವರಲ್ಲಿದ್ದ ಕಾಳಜಿಯಿಂದ.

ಬಿಜೆಪಿಯವರು ಕೇವಲ ರಾಜಕಾರಣಿ ಆಗಿರಲಿಲ್ಲ ಅದಕ್ಕೂ ಮಿಗಿಲಾದ ವಿಶೇಷ ವ್ಯಕ್ತಿತ್ವವನ್ನು ಹೊಂದಿದ್ದರು. ಬಾಗಲಕೋಟೆ ಜಿಲ್ಲೆಯ ಸಾವಳಗಿ ಎಂಬ ಪುಟ್ಟ ಗ್ರಾಮದಿಂದ ಬಂದಿದ್ದ ಅವರು ದೇಶದ ಉನ್ನತ ಸ್ಥಾನಗಳನ್ನು ತಲುಪಿದ್ದು ನಿಜಕ್ಕೂ ಕನ್ನಡಿಗರು ಒಂದು ಹೆಮ್ಮೆ…….

-ಬಸವರಾಜ ಶಂ ಚಿನಗುಡಿ
ರಾಷ್ಟ್ರೀಯ ಬಸವ ಸೇನೆ
ಚನ್ನಮ್ಮನ ಕಿತ್ತೂರು
9008869423

Related Articles

Leave a Reply

Your email address will not be published. Required fields are marked *

Back to top button