ಪ್ರಮುಖ ಸುದ್ದಿ
ಅಗ್ನಿಶಾಮಕ ಇಲಾಖೆಃ 1567 ಹುದ್ದೆಗಳಿಗೆ ಶೀಘ್ರ ನೇಮಕ- ಬೊಮ್ಮಾಯಿ
ಅಗ್ನಿಶಾಮಕ ಇಲಾಖೆಃ ಖಾಲಿ ಇರುವ 1567 ಹುದ್ದೆಗಳಿಗೆ ಶೀಘ್ರ ನೇಮಕ- ಬೊಮ್ಮಾಯಿ
ಬೆಂಗಳೂರಃ ರಾಜ್ಯ ಸರ್ಕಾರ ಉದ್ಯೋಗ ಆಕಾಂಕ್ಷಿಗಳಿಗೆ ಆಶಾದಾಯಕ ಸುದ್ದಿ ನೀಡಿದ್ದು, ಅಗ್ನಿ ಶಾಮಕ ಇಲಾಖೆಯಲ್ಲಿ ಖಾಲಿ ಇರುವ 1567 ಹುದ್ದೆಗಳನ್ನು 100 ದಿನಗಳಲ್ಲಿ ಭರ್ತಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಇಲಾಖೆಯ ಅಧಿಕಾರಿಗಳಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ನಗರದಲ್ಲಿ ಗುರುವಾರ ಅಗ್ನಿಶಾಮಕ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಇಲಾಖೆಯಲ್ಲಿ ಖಾಲಿ ಇರುವ 1222 ಅಗ್ನಿಶಾಮಕ, 227 ಅಗ್ನಿಶಾಮಕ ಚಾಲಕ, 82. ತಂತ್ರಜ್ಞ ಹಾಗೂ 36 ಠಾಣಾಧಿಕಾರಿ ಹುದ್ದೆ ಭರ್ತಿ ಮಾಡುವಂತೆ ಅಗ್ನಿಶಾಮಕ ಇಲಾಖೆ ಡಿಜಿಪಿ ಅವರಿಗೆ ತಿಳಿಸಿದರು.
ಈ ಕುರಿತು ಶೀಘ್ರದಲ್ಲಿ ಪ್ರಕ್ರಿಯೆ ಆರಂಭಿಸುವಂತೆ ಅವರು ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.