ಜನಮನಪ್ರಮುಖ ಸುದ್ದಿ

ಶಹಾಪುರಃ ಬೆಳಗ್ಗೆಯಿಂದ ಕರೆಂಟ್ ಇಲ್ಲ, ನಾಗರಿಕರ ಗೋಳಾಟ ಕೇಳೋರಿಲ್ಲ

ಶಹಾಪುರ ವಿದ್ಯುತ್ ಸಮಸ್ಯೆ ನಾಗರಿಕರ ಪರದಾಟ

ಯಾದಗಿರಿಃ ಜಿಲ್ಲೆಯ ಶಹಾಪುರ ನಗರದಲ್ಲಿ ಬೆಳಗ್ಗೆ 9 ಗಂಟೆಗೆ ವಿದ್ಯುತ್‌ ಸರಬರಾಜುವಿನಲ್ಲಿ ವ್ಯಥೆಯುಂಟಾಗಿ‌ ಸ್ಥಗಿತಗೊಂಡ ವಿದ್ಯುತ್ ಸರಬರಾಜು ಇದುವರೆಗೂ ಸಂಜೆ 6ಃ30 ಗಂಟೆಯಾದರೂ ಕರೆಂಟ್ ಬಾರದೆ ಪಟ್ಟಣದ ನಾಗರಿಕರು ಪರದಾಡುವಂತಾಗಿದೆ.

ವಿದ್ಯುತ್ ಇಲ್ಲದ ಕಾರಣ ಹಲವಾರು ಕೆಲಸ‌ ಕಾರ್ಯಗಳಿಗೆ ತೊಂದರೆಯಾಗಿದೆ. ಮೆಡಿಕಲ್ ನಲ್ಲಿ‌ ಕೆಲ ಔಷಧಿಗಳು ಮಂಜುಪೆಟ್ಟಿಗೆಯಲ್ಲಿ ಇಡುವ ಅನಿವಾರ್ಯತೆ ಇದೆ. ಕರೆಂಟ್ ಇಲ್ಲದ ಕಾರಣ ಮೆಡಿಸಿನ್ಗಾಗಿ‌ ಕೆಲವರು‌ ಪರದಾಡಿದರೆ, ಇನ್ನು ಕೆಲವರು‌ ಜೋಳ, ಗೋದಿ ಬೀಸಲು ಆಗದೆ ಗಿರಣಿಯಲ್ಲಿಯೇ ಧಾನ್ಯಗಳನ್ನು ಇಟ್ಟು ಕೊಂಡು ಕೈಕಟ್ಟಿ ಕುಳಿತಿದ್ದಾರೆ.

ಕೆಇಬಿ ಅಧಿಕಾರಿಗಳ ಮೊಬೈಲ್ ನಾಟ್ ರೀಚೇಬಲ್..

ಬೆಳಗ್ಗೆಯಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯಥೆ ಉಂಟಾಗಿದೆ ಇದುವರೆಗೂ ದುರಸ್ಥಿ ಕಾರ್ಯ ಆಗಿಲ್ಲ.‌ಮನೆಯಲ್ಲಿ ನೀರು ಖಾಲಿ, ಮುಖ ತೊಳೆಯಲಿ ನೀರಿಲ್ಲ ಎಂದು ಜೆಸ್ಕಾಂ ಅಧಿಕಾರಗಳನ್ನು ಸಂಪರ್ಕಿಸಿದರೆ ಕೆಲವರದು ಸ್ವಿಚ್ ಆಫ್ ಆದರೆ ಇನ್ನು ಕೆಲವರು‌ ನಾಟ್ ರೀಚೇಬಲ್‌ ಇಟ್ಟಿದ್ದಾರೆ.

ಹೀಗಾಗಿ ಜನ ಕರೆಂಟ್ ಹೀಗ್ ಬರಬಹುದು‌ ಹಾಗ್ ಬರಬಹುದೆಂದು ಸಂಜೆ ಆದರೂ ಕರೆಂಟ್ ಬಾರದೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಮರ್ಪಕ‌ ಉತ್ತರ ನೀಡದ ಜೆಸ್ಕಾಂ ಯಾವ ಕಾರಣಕ್ಕೆ ವಿದ್ಯುತ್‌ ಸರಬರಾಜು ನಿಲ್ಲಿಸಲಾಗಿದೆ ಎಂಬುದನ್ನು ತಿಳಿಯದೆ ಜನ ಸಂಕಟ ಪಡುವಂಥಾಗಿದೆ.

ಕರೆಂಟ್ ಇಲ್ಲದ ಕಾರಣ ಮನೆಯಲ್ಲಿನ‌ ಫಿಲ್ಟರ್  ಹನಿ ನೀರು ಸೋಸದೆ ಒದ್ದಾಡಿದ್ದಾರೆ. ಕೊರೊನಾ ಹಾವಳಿ‌ ಪರಿಣಾಮ ಮನೆಯೊಳಗಡೆ ಹೋಗಲು‌ ಸ್ವಚ್ಛ ಮೈಕೈ ತೊಳೆದುಕೊಳ್ಳಲು  ನೀರಿಲ್ಲದೆ ಮೈಪರಚಿಕೊಂಡ ಜೆಸ್ಕಾಂಗೆ ಇಡಿ ಶಾಪ ಹಾಕುತ್ತಿದ್ದಾರೆ. ಇಷ್ಟಾದರೂ ಜೆಸ್ಕಾಂ ಅಧಕಾರಿಗಳು ಯಾವೊಂದು ಕಾಲ್ ರೀಸೀವ್‌ ಮಾಡದೆ ಸಮರ್ಪಕ ಉತ್ತರ ನೀಡದೆ ಸ್ವಿಚ್ ಆಫ್ ಆಗಿದ್ದಾರೆ.

ಆದರೆ ಮೂಲಗಳ ಪ್ರಕಾರ ಜೆಸ್ಕಾಂ ವಿದ್ಯುತ್ ಪ್ರಸರಣ ಕೇಂದ್ರದಲ್ಲಿ ಚಿಟುಗುಟ್ಟುವ ಹಲ್ಲಿಯೊಂದು ‌ವಿದ್ಯುತ್ ವೈರ್ ನಡಿ ಸಿಲುಕಿ ಶಾರ್ಟ್ ಸರ್ಕ್ಯೂಟ್ ಆಗಿ ವಿದ್ಯುತ್ ಸರಬರಾಜು ಯಂತ್ರೋಪ ಕರಣಗಳಿಗೆ ಬೆಂಕಿಹೊತ್ತಿ ಉರಿದ ಪರಿಣಾಮ ವಿದ್ಯುತ್ ಸರಬರಾಜಿನಲ್ಲಿ ತೊಂದರೆಯಾಗಿದೆ ಎಂದು ಹೇಳಲಾಗುತ್ತಿದೆ.

ಹೀಗಾಗಿ ದುರಸ್ತಿ ಕಾರ್ಯ ಬೆಳಗ್ಗೆ ಯಿಂದಲೇ ನಡೆದಿದ್ದು,‌ ಸಮರ್ಪಕವಾಗಿ ಫಾಲ್ಟ್ ದೊರೆಯುತ್ತಿಲ್ಲ. ಆದಾಗ್ಯೂ ನಿರ್ವಹಣೆ‌ ಸರಿಯಿಲ್ಲದೆ ಕಾರಣ ಸಮಸ್ಯೆಗಳು ಹೆಚ್ಚಾಗಿದ್ದು ಇದೀಗ ಅಡಿಕೆಯಷ್ಟು ಸಮಸ್ಯೆ‌ ಆನೆಯಷ್ಟಾಗಿದೆ ಎಂದರೆ ತಪ್ಪಿಲ್ಲ.

ಯಾವುದಕ್ಕು ಅಧಿಕಾರಿಗಳು ಜೆಸ್ಕಾಂ ಸಿಬ್ಬಂದಿ ಕೂಡಲೇ ದುರಸ್ತಿ ಕಾರ್ಯ‌ ಮುಗಿಸಿ ವಿದ್ಯುತ್ ಸರಬರಾಜು ಮಾಡುವ ಮೂಲಕ ಅನುಕೂಲ ಕಲ್ಪಿಸಲಿ. ಅದು ಬಿಟ್ಟು ಮೊಬೈಲ್ ಸ್ವಿಚ್ ಆಫ್, ನಾಟರೀಚೇಬಲ್ ಇಟ್ಟರೆ ಸಮಸ್ಯೆ ಪರಿಹಾರ ಕಾಣದು ಎಂಬ ಅರಿವಿರಲಿ‌ ಎಂಬುದೇ ನಾಗರಿಕರ ಸಲಹೆಯಾಗಿದೆ.

Related Articles

Leave a Reply

Your email address will not be published. Required fields are marked *

Back to top button