ಪ್ರಮುಖ ಸುದ್ದಿ
ಮಾಸ್ಕ್ ಡೇಃ ಪರಸ್ಪರರ ರಕ್ಷಣೆಗೆ ಮಾಸ್ಕ್ ಅಗತ್ಯ- ಸಿಎಂ ಯಡಿಯೂರಪ್ಪ
ಬೆಂಗಳೂರಃ ಮಾಸ್ಕ್ ಧರಿಸುವದರಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಜೊತೆಗೆ ಎದುರಿನವರ ರಕ್ಷಣೆಗೂ ಸಗಕಾರಿಯಾಗಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ವಿಧಾನಸೌಧ ಸಭಾಂಗಣವೊಂದರಲ್ಲಿ ವ್ಯವಸ್ಥಿತವಾಗಿ ಮಾಸ್ಕ್ ಡೇ ಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಸಮರ್ಪಕ ಕಾರ್ಯಕೈಗೊಂಡಿದ್ದು, ಎಲ್ಲರೂ ಮಾಸ್ಕ್ ಧರಿಸುವದು, ಅಂತರ ಕಾಯ್ದುಕೊಳ್ಳುವದು ಅನುಸರಿಸಬೇಕು. ಕೊರೊನಾ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕಿದೆ. ಆ ಹಿನ್ನೆಲೆ ಮಾಸ್ಕ್ ಡೇ ಆಚರಣೆ ಮಾಡಲಾಗುತ್ತಿದೆ
ರಾಜ್ಯ ಸರ್ಕಾರ ಕೊವಿಡ್ ನಿಯಂತ್ರಣಕ್ಕೆ ಕೈಗೊಂಡ ಕಾರ್ಯಗಳ ಬಗ್ಗೆ ಪ್ರಧಾನಿಯವರು ಶ್ಲಾಘಿಸಿದ್ದಾರೆ ಎಂದ ಅವರು, ಇದೇ ವೇಳೆ ಕೊರೊನಾ ತಡೆಗೆ ಹಗಲಿರುಳು ಶ್ರಮಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಯಾವ ಅಕ್ಷರಗಳಿಂದ ಅಭಿನಂದನೆ ಸಲ್ಲಿಸಬೇಕೆಂದು ತಿಳಿಯುತ್ತಿಲ್ಲ. ಕೊರೊನಾ ವಾರಿಯರ್ಸ್ಗಳ ಕಾರ್ಯಮೆಚ್ಚವಂತಹದ್ದು ಎಂದು.