ಶಹಾಪುರಃ ಪೌರಾಯುಕ್ತರಾಗಿ ಪಟ್ಟೇದಾರ ಅಧಿಕಾರ ಸ್ವೀಕಾರ
ಪೌರಾಯುಕ್ತರಾಗಿ ಪಟ್ಟೇದಾರ ಅಧಿಕಾರ ಸ್ವೀಕಾರ
ಶಹಾಪುರಃ ಈ ಹಿಂದೆ ನಗರಸಭೆ ಪೌರಾಯುಕ್ತರಾಗಿ ಸೇವೆ ಸಲ್ಲಿಸಿದ್ದ ರಮೇಶ ಪಟ್ಟೇದಾರ ಅವರು ಪ್ರಸ್ತುತ ನಗರಸಭೆ ಪೌರಾಯುಕ್ತರಾಗಿ ಶುಕ್ರವಾರ ಮತ್ತೇ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ನಿಕಟಪೂರ್ವ ಪೌರಾಯುಕ್ತ ಬಸವರಾಜ ಶಿವಪೂಜೆ ಅವರು ಬೇರಡೆ ವರ್ಗಾವಣೆಯಾಗಿದ್ದು ರಮೇಶ ಪಟ್ಟೇದಾರ ಶಹಾಪುರ ನಗರಸಭೆಗೆ ಪೌರಾಯುಕ್ತರಾಗಿ ಬಂದಿದ್ದಾರೆ. ಈ ಹಿಂದೆ ಸೇವೆ ಸಲ್ಲಿಸುವಾಗ ಪಟ್ಟೇದಾರ ಅವರು ಕಾರಣಾಂತರಗಳಿಂದ ವರ್ಗಾವಣೆಗೊಂಡಿದ್ದರು.
ಆಗ ಕೆಲ ಆಪಾದನೆಗಳು ಅವರ ಮೇಲೆ ಕೇಳಿ ಬಂದಿದ್ದವು. ಆದರೆ ಕೆಲವರು ಪಟ್ಟೇದಾರ ಅವರ ಕಾರ್ಯ ವೈಖರಿಗೆ ಮೆಚ್ಚಿದ್ದು, ಖಡಕ್ ಆಫೀಸರ್ ಎಂದು ಸಹ ಹೆಸರುವಾಸಿಯಾಗಿದ್ದರು. ಉತ್ತಮ ಆಡಳಿತಗಾರರಾಗಿದ್ದು, ನಗರಸಭೆ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲಿ ಎಂಬುದೇ ನಾಗರಿಕರ ಆಶಯವಾಗಿದೆ. ನಾಗರಿಕರಿಗೆ ಉತ್ತಮ ಸೇವೆ ನೀಡಲಿ, ನಗರಸಭೆಯಲ್ಲಿ ನಡೆಯುವ ಕೆಲವರ ಭ್ರಷ್ಟಾಚಾರ ನಡೆಗೆ ತಡೆಯುಂಟು ಮಾಡುವರೇ ಕಾದು ನೋಡಬೇಕಿದೆ. ಒಟ್ಟಾರೆ ಜನಹಿತ ಆಡಳಿತ ನೀಡಿದರೆ ಸಾಕು ಎನ್ನುತ್ತಾರೆ ಕನ್ನಡ ಸೇನೆಯ ಉಕ ಸಂಚಾಲಕ ದೇವು ಭೀ.ಗುಡಿ. ಪಟ್ಟೇದಾರ ಅಧಿಕಾರ ಸ್ವೀಕಾರ ಮಾಡುವಾಗ ಅಧಿಕಾರಿಗಳು, ನಗರಸಭೆ ಸಿಬ್ಬಂದಿ ಇತರರಿದ್ದರು.