ಮೇಕೆಗಳಿಗೂ ಕೊರೊನಾ, ಕುರಿಗಾಯಿ ಸೇರಿ 43 ಮೇಕೆಗಳು ಕ್ವಾರಂಟೈನ್.!
ಕುರಿಗಾಯಿ ಸೇರಿ 43 ಮೇಕೆಗಳು ಕ್ವಾರಂಟೈನ್
ತುಮಕೂರಃ ತಾಲೂಕಿನ ಚಿಕ್ಕನಾಯಕನ ಹಳ್ಳಿಯಲ್ಲಿ ಕುರಿಗಾಯಿ ಸ್ನೇಹಿತನೋರ್ವನಿಗೆ ಕೊರೊನಾ ಪಾಸಿಟಿವ್ ವರದಿ ಬಂದ ಹಿನ್ನೆಲೆ ಆತನ ಸಂಪರ್ಕ ಹೊಂದಿದ್ದ ಕುರಿಗಾಯಿ ಸೇರಿದಂತೆ ಸುಮಾರು 43 ಕುರಿಗಳಿಗೂ ಕ್ವಾರಂಟೈನ್ ಮಾಡಿದ ಘಟನೆ ನಡೆದಿದೆ.
ಮನುಷ್ಯರಿಗೆ ಮಾತ್ರ ಕೊರೊನಾ ಅಂದುಕೊಂಡಿದ್ದ ಜನತೆಗೆ ಇದೀಗ ದಿಗ್ಭ್ರಮೆಯಾಗಿದೆ. ಕುರಿಗಾಯಿಗನಿಗೆ ಕೊರೊನಾ ಲಕ್ಷಣಗಳು ಕಂಡು ಬಂದಿದ್ದು, ಆತ ಕಾಯುತ್ತಿದ್ದ ಮೇಕೆಗಳಿಗೂ ಕ್ವಾರಂಟೈನ್ ಮಾಡಿದ್ದು, ಅವುಗಳಿಗೂ ಕೊರೊನಾ ಪರೀಕ್ಷೆ ಮಾಡಲಾಗುತ್ತದೆ ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ.
ಹಿನ್ನೆಲೆ ಃಃ ಕುರಿಗಾಯಿ ಮನೆಯಲ್ಕಿ ಏಕಾಏಕಿ ಕುರಿಗಳು ಸಾವನ್ನಪ್ಪಿದ್ದು ಆತಂಕಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕುರಿಗಾಯಿ ಪರೀಕ್ಷೆ ನಡೆಸಲಾಗಿ, ಕೆಮ್ಮು, ಜ್ವರ ಉಸಿರಾಟ ತೊಂದರೆಯಿಂದ ಬಳಲುತ್ತಿರುವದು ಕಂಡು ಬಂದಿದೆ ಎನ್ನಲಾಗಿದೆ. ಹೀಗಾಗಿ ಮೇಕೆಗಳಿಗೂ ಸಹ ಕ್ವಾರಂಟೈನ್ ಮಾಡಲಾಗಿದೆ. ತಜ್ಞರನ್ನು ಸಂಪರ್ಕಿಸಿ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳಿ ಮಾಧ್ಯಮಕ್ಕೆ ತಿಳಿಸಿದ್ದಾರೆ.