ಪ್ರಮುಖ ಸುದ್ದಿ

ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಗೆ 548 ಕೋಟಿ – ಜಾರಕಿಹೊಳಿ

YADGIRI,ಶಹಾಪುರಃ ಬೂದಿಹಾಳ ಮತ್ತು ಪೀರಾಪುರ ಏತ ನೀರಾವರಿ ಯೋಜನೆ ಕುರಿತು ಭೀಮರಾಯನ ಗುಡಿ ಕೃಷ್ಣಾ ಕಾಡಾ ಕಚೇರಿಯಲ್ಲಿ ಅಧಿಕಾರಿಗಳ ಸಭೆ ಬುಧವಾರ ಮದ್ಯಾಹ್ನ ಕರೆಯಲಾಗಿತ್ತು, ಕಾಡಾ ಕಚೇರಿಯ ಎಇಇ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆ ಹಠಾತ್ತನೆ ಸಭೆ ರದ್ದುಗೊಳಿಸಲಾಗಿದೆ. ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಗೆ 548 ಕೋಟಿ ರೂ. ಅನುದಾನ ಕುರಿತು ಈಗಾಗಲೇ ಬೋಡ್೵ ಮೀಟಿಂಗ್ ನಲ್ಲಿ ಪಾಸ್ ಮಾಡಲಾಗಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅಲ್ಲದೆ ಶಹಾಪುರ ಹಾಲಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ಈಚೆಗೆ ನೀಡಿದ ಹೇಳಿಕೆ ಪ್ರಕಾರ ರಾಜ್ಯ ಸರ್ಕಾರ ಶಹಾಪುರ ಮತಕ್ಷೇತ್ರಕ್ಕೆ ನೀಡಿದ ಅನುದಾನ ಹಣ ವಾಪಸ್ ಪಡೆದಿದೆ ಎಂದು ಆರೋಪಿಸಿರುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅನುಮೋದನೆ ನೀಡಿದ ಹಣ ವಾಪಸ್ ಪಡೆಯಲು ಬರುವದಿಲ್ಲ. ಶಾಸಕ ದರ್ಶನಾಪುರ ಅವರಿಗೆ ಅನುಭವ ಅಥವಾ ಮಾಹಿತಿ ಕೊರತೆ ಇರಬಹುದು. ಈ ಕುರಿತು ನನ್ನ ಗಮನಕ್ಕೆ ತಂದರೆ ಅದನ್ನು ಸರಿಪಡಿಸುತ್ತೇನೆ ಎಂದರು.
ಕೊರೊನಾದಿಂದ ಅಭಿವೃದ್ಧಿಯಲ್ಲಿ ಕುಂಠಿತಗೊಂಡಿದೆ. ಶೀಘ್ರದಲ್ಲಿ ಸಿಎಂ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದ್ದು, ವಿಶೇಷವಾಗಿ ಯಾದಗಿರಿ, ಕೊಪ್ಪಳ ಮತ್ತು ರಾಯಚೂರ ಜಿಲ್ಲೆಗಳ

ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಲಿದ್ದು, ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡುವೆ ಎಂದು ತಿಳಿಸಿದರು. ವಾರಬಂದಿ ಪದ್ಧತಿ ಕುರಿತು ತಾರತಮ್ಯ ಸರಿಪಡಿಸುವಂತೆ ಮಾಜಿ ಶಾಸಕರು ಮನವಿ ಸಲ್ಲಿಸಿದ್ದಾರೆ. ಶೀಘ್ರದಲ್ಲಿ ಬೆಂಗಳೂರಿನಲ್ಲಿ ಸಂಬಂದಿಸಿದ ಅಧಿಕಾರಿಗಳನ್ನು ಕರೆದು ಈ ಕುರಿತು ಮಾತನಾಡಿ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವೆ ಎಂದರು ವಿವರಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಗುರು ಪಾಟೀಲ್, ಸುರಪುರ ಶಾಸಕ ಮಾಜಿ ಮಂತ್ರಿ ರಾಜುಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಶರಣಭೂಪಾಲರಡ್ಡಿ, ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ ಉಪಸ್ಥಿತರಿದ್ದರು.

 ತಾರತಮ್ಯ ಮಾಡಲು ಬರಲ್ಲ- ರಾಜೂಗೌಡ

ಯಾವುದೇ ಅನುದಾನ ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆತ ಮೇಲೆ ಅದನ್ನು ಅಲ್ಲಗಳೆಯಲು ಬರಲ್ಲ. ಅಲ್ಲದೆ ರೈತರಿಗೆ ಸಂಬಂಧಿಸಿದಂತ ಅನುದಾನ ಕೆಲಸ ಕಾರ್ಯಗಳು ಯಾವುದಕ್ಕೆ ತಡೆವೊಡ್ಡಲ್ಲಾಗಲ್ಲ. ಶಹಾಪುರ ಇರಲಿ ಸುರಪುರ ಇರಲಿ ಇಡಿ ಜಿಲ್ಲೆಯನ್ನು ನಾವು ನೋಡಬೇಕಾಗುತ್ತದೆ ಎಂದು ಮಾಜಿ ಮಂತ್ರಿ, ಹಾಲಿ ಶಾಸಕ ರಾಜೂಗೌಡ ಪತ್ರಕರ್ತರಿಗೆ ಉತ್ತರಿಸಿದರು.

ಅಲ್ಲದೆ ಮೊನ್ನೆ ಪತ್ರಿಕೆಯಲ್ಲಿ ಶಾಸಕರು ಆರೋಪಿಸಿರುವದನ್ನು ನೋಡಿದ್ದೇನೆ. ಹಾಗಾದರೆ ಪೀರಾಪುರ ಏತ ನೀರಾವರಿ ಯೋಜನೆಯಡಿ ಬರಿ ಸುರಪುರ ಕ್ಷೇತ್ರಕ್ಕೆ ಸಂಬಂದಿಸಿದ ಗ್ರಾಮಗಳಿಗೆ ಮಾತ್ರ ನೀರಾವರಿ ಅಥವಾ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬಹುತಿಲ್ಲ ಹಾಗಾಗಲ್ಲ ಶಹಾಪುರ ಕ್ಷೇತ್ರದ ಗ್ರಾಮಗಳನ್ನು ತೆಗೆದುಕೊಂಡಿದೆ. ಸುಮಾರು 48 ಸಾವಿರ ಹೆಕ್ಟರ್ ಪ್ರದೇಶ ನೀರಾವರಿ ಸೌಲಭ್ಯ ಹೊಂದಲಿದೆ.

ಅಂದಾಜು 548 ಕೋಟಿ ಅನುದಾನ ಮೀಸಲಿಡಲಿದ್ದು, ಈಗಾಗಲೇ ಬೋರ್ಡ್ ಮೀಟಿಂಗ್‍ನಲ್ಲಿ ಪಾಸ್ ಮಾಡಲಾಗಿದೆ. ಸಿಎಂ ಅವರ ಮುಂದೆ ಇಡಲಿದ್ದೇವ. ಅವರಿಂದ ಅನುಮೋದನೆ ಪಡೆದು ಶೀಘ್ರದಲ್ಲಿ ಎರಡು ತಿಂಗಳೊಳಗಾಗಿಯೇ ಏತನೀರಾವರಿ ಕಾರ್ಯಯೋಜನೆ ಕಾರ್ಯಾರಂಭವಾಗಲಿದೆ. ಶಹಾಪುರ ಮತ್ತು ಸುರಪುರ ಕ್ಷೇತ್ರದ ಹಲವು ಗ್ರಾಮಗಳಿಗೆ ಅನುಕೂಲವಾಗಲಿದೆ ಎಂದರು.

Related Articles

Leave a Reply

Your email address will not be published. Required fields are marked *

Back to top button