ಮರೆತೇನೆಂದರೂ ಮರೆಯಲಿ ಹ್ಯಾಂಗ ಟಿಕ್ ಟಾಕ್ ಔಲುಡೌಲು
ಟಿಕ್ ಟಾಕ್ ಹೆಸರಲ್ಲಿ ಟೀ ಪಾಯಿಂಟ್
ಟೀ ಕುಡಿದು ಟಿಕ್ ಟಾಕ್ ದಾಹ ತೀರಿಸಿಕೊಳ್ಳಿ, ಇದೇನಪ್ಪ ಟೀ ಕುಡಿದ್ರೆ ಟಿಕ್‍ಟಾಕ್ ದಾಹ ತೀರತ್ತಾ. ಹೌದು ಇದು ಕಲಬುರಗಿ ನಗರದಲ್ಲಿ ಟೀ ಪಾಯಿಂಟ್ ಹೆಸರು ಟಿಕ್ ಟಾಕ್ ಟೀ ಪಾಯಿಂಟ್ ಎಂದು ಹೆಸರು ಇಟ್ಟಿದ್ದಾರೆ. ಎsto ಯುವ ಜನ ಟಿಕ್ ಟಾಕ್ ಮನೋರಂಜನೆ ಮಾಡಿಕೊಂಡಿದ್ರೆ ಇಲೋಬ್ರು ಉದ್ಯೋಗ ಸೃಷ್ಟಿ ಮಾಡಿಕೊಂಡಿದ್ದಾರೆ.
ಭಾರತ ಸರ್ಕಾರದ ಆದೇಶದಂತೆ ಟಿಕ್ ಟಾಕ್ ಸೇರಿದಂತೆ 59 ಆ್ಯಪ್‍ಗಳನ್ನು ನಿsheಧ ಮಾಡಿದ್ದಾರೆ. ಈ ಟಿಕ್ ಟಾಕ್ ಆ್ಯಪ್ ಯುವ ಜನಾಂಗಕ್ಕೆ ತಮ್ಮ ಪ್ರತಿಭೆ ತೊರಿಸಲು ಅನಕೂಲವಾಗಿತ್ತು. ಈ ಆ್ಯಪ್ ಬಳಕೆದಾರರು ಭಾರತದಲ್ಲಿ 1 ಕೋಟಿ ಇದ್ದಾರೆ ಎಂದು ಅಂದಾಜು ಮಾಡಲಾಗಿದೆ. ಹಳ್ಳಿಯಿಂದ ಹಿಡಿದು ನಗರಕ್ಕೆ ಇದರ ಬಳಕೆ ವ್ಯಾಪಕವಾಗಿ ಬೆಳೆದಿತ್ತು.
ಟಿಕ್ ಟಾಕ್ ನಿsheಧ ಮಾಡಿದ ದಿನ ಮಿಸ್ ಯೂ ಎಂದು ತಮ್ಮ ಆತ್ಮೀಯರನ್ನ ಕಳೆದುಕೊಂಡಿರುವ ರೀತಿಯಲ್ಲಿ ಸಾಮಾಜಿಕ ಜಾಲಗಳಲ್ಲಿ ಹಾಕುತ್ತಿದ್ದರೆ. ಕೆಲವರಂತು ಈ ಟಿಕ್ ಟಾಕ್ ಇಮೇಜ್‍ಗೆ ‘ಮರಳಿ ಬಾರದೂರಿಗೆ ನಿನ್ನ ಪಯಣ’ ಎಂದು ಹಾಡು ಟ್ರೋಲ್ ಮಾಡುವುದರ ಮೂಲಕ ತಮ್ಮ ದುಃಖ ಹೊರಹಾಕಿದ್ದಾರೆ. ಇನ್ನೂ ಕೆಲವರಂತೂ ಟಿಕ್ ಟಾಕ್ ಆ್ಯಪ್‍ಗೆ ಕೊರೊನಾ ಬಂದಿತ್ತು ಮತ್ತು ಅದರ ಸಂಪರ್ಕದಲ್ಲಿ 59 ಕೆಲವು ಆ್ಯಪ್‍ಗಳಿಗೂ ಸೋಂಕು ತಗಲಿತ್ತು ಎಂದು ಟ್ರೋಲ ಮಾಡಿದ್ದಾರೆ.
ಚಲನಚಿತ್ರ ನಟ ನಟಿಯರು ಸಹಿತ ಇದರ ಮೋಹಕ್ಕೆ ಒಳಗಾಗಿದ್ದರು. ಈಗ ಅದು ಬರಿ ನೆನಪು ಎಂದು ಅವರು ಸಹಿತ ತಮ್ಮ ಭಾವನೆ ವ್ಯಕ್ತ ಪಡಿಸಿದ್ದಾರೆ. ಕೆಲವರಂತೂ ತಮ್ಮ ಅಭಿಮಾನಿಗಳು ಕಳೆದುಕೊಂಡೆವು ಎಂದು ತಮ್ಮ ಮನಸ್ಸಿನ ವೇದನೆ ವ್ಯಕ್ತ ಪಡಿಸಿದ್ದಾರೆ. ಸರ್ಕಾರ 59 ಆ್ಯಪ್‍ಗಳನ್ನು ನಿಷೇಧಿಸಿದ್ದು ದೇಶದ ಹಿತ ದೃಷ್ಟಿಯಿಂದ ಒಂದು ಒಳ್ಳೆಯ ನಿರ್ಧಾರವೇ ಸರಿ ಟಿಕ್ ಟಾಕ್ ಕೆಲವರು ದುರಪಯೋಗ ಪಡಿಸಿಕೊಂಡಿದ್ದುಂಟು. ಹೀಗಾಗಿ ಟಿಕ್‍ಟಾಕ್‍ಗೆ ಗುಡ್ ಬೈ ಹೇಳಿದ್ದು ಒಳ್ಳೆಯ ನಿರ್ಧಾರ.
ಈ ಟಿಕ್‍ಟಾಕ್ ನಲ್ಲಿ ತಮ್ಮ ಮನಸ್ಸಿನ ಸ್ಥಿತಿ, ಜೀವನದ ಟಿಪ್ಸ್ ಗಳು, ಡೈಲಾಗ ಟ್ರೋಲ್ ಗಳು, ಎಲ್ಲವನ್ನೂ ಹೇಳುವ ಮುಕ್ತ ವೇದಿಕೆಯಾಗಿತ್ತು. ಈಗ ಅದು ಬರಿ ನೆನಪು ಮಾತ್ರ. ಈ ಟಿಕ್ ಟಾಕ್ ನೆನಪು ಬಂದ್ರೆ ತೊಗರಿ ಖಣಜ ಎಂದು ಖ್ಯಾತಿ ಪಡೆದ ಕಲಬುರಗಿಯಲ್ಲಿನ ಟಿಕ್ ಟಾಕ್ ಟೀ ಪಾಯಿಂಟ್ ಗೆ ಬಂದು ಟೀ ಕುಡಿದು ಟಿಕ್‍ಟಾಕ್ ದಾಹ ತೀರಿಸಿಕೊಳ್ಳಿ.
–ಶಿವಾಜಿ ನಿಂ. ಕಡ್ಡೆಪ್ಪನವರ.
ವಾರ್ತಾ ಮತ್ತು ಸಾರ್ವಜನಿಕ
ಸಂಪರ್ಕ ಇಲಾಖೆ ಯಾದಗಿರಿ.