ಗಾಂಧಿ ಕುಟುಂಬದ ಟ್ರಸ್ಟ್ ಗಳ ವಿರುದ್ಧ ತನಿಖೆಗೆ ಸಮಿತಿ ರಚನೆ
ನವದೆಹಲಿಃ ಗಾಂಧಿ ಕುಟುಂಬದ ಜೊತೆ ಸಂಬಂಧ ಹೊಂದಿದ ಮೂರು ಟ್ರಸ್ಟ್ ಗಳು ನಡೆಸಿದ ಹಣಕಾಸು ವ್ಯವಹಾರದಲ್ಲಿ ಅಕ್ರಮ ಎಸಗಲಾಗಿದೆ ಎಂಬ ಆರೋಪ ಹಿನ್ನೆಲೆ ತನಿಖೆ ನಡೆಸಿ ಸಮರ್ಪಕ ಕ್ರಮಕೈಗೊಳ್ಳಲು ಸಮಿತಿಯೊಂದನ್ನು ಕೇಂದ್ರ ಸರ್ಕಾರ ರಚಿಸಿದೆ ಎನ್ನಲಾಗಿದೆ.
ರಾಜೀವ್ ಗಾಂಧಿ ಫೌಂಡೇಷನ್, ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಹಾಗೂ ಇಂದಿರಾ ಗಾಂಧಿ ಮೆಮೋರಿಯಲ್ ಟ್ರಸ್ಟ್ ಆದಾಯ ತೆರಿಗೆ ಮತ್ತು ವಿದೇಶಿ ದೇಣಿಗೆ ನಿಯಮಗಳ ಉಲ್ಲಂಘನೆಯ ಆರೋಪವಿದ್ದು, ಈ ಕುರಿತು ಸಮಿತಿ ಪರಿಶೀಲಿಸಿ ತನಿಖೆಕೈಗೊಳ್ಳಲು ಗೃಹ ಸಚಿವಾಲಯ ಅಂತರ ಸಚಿವಾಲಯ ಸಮಿತಿಯನ್ನು ರಚಿಸಿದೆ ಎಂದು ಸಚಿವಾಲಯದ ವಕ್ತಾರರೊಬ್ಬರು ಬೆಳಗ್ಗೆ ಟ್ವಿಟ್ ಮಾಡಿದ್ದಾರೆ.
ಜಾರಿ ನಿರ್ದೇಶನಾಲಯದ ವಿಶೇಷ ನಿರ್ದೇಶಕರು ಸಮಿತಿಯ ನೇತೃತ್ವವಹಿಸಲಿದ್ದು, ಗಾಂಧಿ ಕುಟುಂಬ ನಡೆಸುವ ಟ್ರಸ್ಟ್‍ಗಳಿಂದ ಹಣ ವರ್ಗಾವಣೆ ತಡೆ ಕಾಯ್ದೆ, ಆದಾಯ ತೆರಿಗೆ ಕಾಯ್ದೆ ಮತ್ತು ವಿದೇಶಿ ಕೊಡುಗೆ ಕಾಯ್ದೆಗಳಂತಹ ಕಾನೂನುಗಳ ಉಲ್ಲಂಘನೆಗಳ ಕುರಿತು ತನಿಖೆ ನಡೆಯಲಿದ್ದು, ಈ ಕಾಯ್ದೆಗಳ ಬಗ್ಗೆ ತನಿಕಾಕೇಂದ್ರಿಕರಿಸಿದೆ ಎಂದು ಟ್ವಿಟ್‍ನಲ್ಲಿ ತಿಳಿಸಲಾಗಿದೆ.
ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿತ್ತು ಬಂದಿದ್ದು, ಮನಮೋಹನ್ ಸಿಂಗ್ ಆಡಳಿತದ ಯುಪಿಎ ಸರ್ಕಾರ ವಿದ್ದಾಗ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಹಣವನ್ನು ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ನೀಡಿತ್ತು ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಆರೋಪಿಸಿದ್ದರು.