ಧಾರಾಕಾರ ಮಳೆಗೆ ಕೆರೆಯಂತಾದ ಬಸವೇಶ್ವರ ಸರ್ಕಲ್
ಧಾರಕಾರ ಮಳೆ ಬಸವೇಶ್ವರ ಸರ್ಕಲ್ ಕೆರೆ
ಯಾದಗಿರಿಃ ಜಿಲ್ಲೆಯ ಶಹಾಪುರನಲ್ಲಿ ಸತತ ಒಂದು ಗಂಟೆ ಧಾರಕಾರ ಮಳೆ ಸುರಿದ ಪರಿಣಾಮ ನಗರದ ಬಸವೇಶ್ವರ ಸರ್ಕಲ್ ಪ್ರದೇಶ ಸಂಪೂರ್ಣ ನೀರು ಆವರಿಸಿ ಕೆರೆಯಂತೆ ಕಂಗೊಳಿಸುತ್ತಿರುವದು ಒಂದಡೆಯಾದರೆ ಸಂಚಾರಕ್ಕೆ ಜನ, ಸಣ್ಣಪುಟ್ಟ ವ್ಯಾಪಾರಸ್ಥರು ತೊಂದರೆ ಅನುಭವಿಸಿದರು.
ಪ್ರತಿಬಾರಿ ಮಳೆ ಬಂದಾಗ ಬಸವೇಶ್ವರ ಸರ್ಕಲ್ ಮಾರುತಿ ರಸ್ತೆ ನೀರೊಳು ತುಂಬಿ ಸರ್ಕಲ್ ಪೂರ್ಣ ನೀರಲ್ಲಿ ಮುಳುಗುವದು ಸಾಮಾನ್ಯವಾಗಿ ಬಿಟ್ಟಿದೆ.
ಇದಕ್ಕೆ ಮುಖ್ಯ ಕಾರಣ ಅವೈಜ್ಞಾನಿಕ ಚರಂಡಿ ನಿರ್ಮಾಣ ಎನ್ನಲಾಗಿದೆ. ಮತ್ತೆ ಕೆಲವರು ಚರಂಡಿಯನ್ನೆ ಆಕ್ರಮಿಸಿಕೊಂಡು ಅಂಗಡಿ, ಟೇರಕೇಸ್ (ಮೆಟ್ಟಿಲು) ಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಇದರಿಂದಾಗಿ ಕಡಿಮೆ ಮಳೆ ಬಂದರೂ ಸಾಕು ಬಿಸರ್ಕಲ್ ನೀರಿನಿಂದ ನಿರ್ಬಂಧ ಗೊಳಿಸಿರುತ್ತದೆ.
ಹೀಗಾಗಿ ಜನಪ್ರತಿನಿಧಿಗಳು ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಸಮರ್ಪಕ ಚರಂಡಿ ಕಾರ್ಯಕೈಗೊಳ್ಳಬೇಕಿದೆ. ಆಕ್ರಮಿತ ಚರಂಡಿ ಜಾಗವನ್ನು ತೆರವುಗೊಳಿಸಿ ವೈಜ್ಞಾನಿಕವಾಗಿ ಚರಂಡಿ ದುರಸ್ತಿ ಕಾರ್ಯ ನೆರವೇರಿಸಬೇಕೆಂದು ಕಲ್ಯಾಣ ಕರ್ನಾಟಕ ಕನ್ನಡ ಸೇನೆ ತಾಲೂಕು ಅಧ್ಯಕ್ಷ ಭೀಮಾಶಂಕರ ಕಟ್ಟಿಮನಿ ಆಗ್ರಹಿಸಿದ್ದಾರೆ.