LOCK DOWN – ಅಧಿಕಾರಿಗಳಿಗೆ ಸಿಎಂ ತರಾಟೆ, ಖಡಕ್ ಎಚ್ಚರಿಕೆ
ಅಧಿಕಾರಿಗಳಿಗೆ ಸಿಎಂ ತರಾಟೆ, ಖಡಕ್ ಎಚ್ಚರಿಕೆ
ಬೆಂಗಳೂರಃ ಇದು ಕೊನೆಯ ಲಾಕ್ ಡೌನ್ ಮಾಡಲಾಗುವದು. ಪೊಲೀಸರು ಕಠಿಣ ಕ್ರಮಕೈಗೊಳ್ಳಬೇಕು ಎಚ್ಚರಿಕೆ ನೀಡಿದರೂ ಅನಗತ್ಯ ಹೊರ ಬರುವವರ ವಿರುದ್ಧ ಪ್ರಕರಣ ದಾಖಲು ಮಾಡಿ ಎಂದು ಸಿಎಂ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಲ್ಲದೆ ವಿರೋಧ ಪಕ್ಷದವರು ಕೋವಿಡ್ ಅನುದಾನ ಬಳಕೆಯಲ್ಲಿ ಅವ್ಯವಹಾರ ನಡೆದಿದೆ ಹಗರಣ ಕುರಿತು ಆರೋಪ ಮಾಡಿದ್ದಾರೆ ಹೀಗಾಗಿ ಪ್ರತಿ ಪೈಸೆ ಖರ್ಚು ಮಾಡಿರುವ ಬಗ್ಗೆ ಲೆಕ್ಕ ಬೇಕು ಅಕ್ರಮ ಕಂಡು ಬಂದಲ್ಲಿ ಯಾರೇ ಅಧಿಕಾರಿ ಇರಲಿ ಕ್ರಮಕೈಗೊಳ್ಳುವೆ ಎಂದು ಖಡಕ್ ವಾರ್ನಿಂಗ್ ನೀಡಿದರು.
ಮತ್ತು ಅಂಬ್ಯುಲೆನ್ಸ್ ಇಲ್ಲ, ಬೆಡ್ ಇಲ್ಲ, ಬಾಡಿಗೆ ತಂದಿದ್ದಾರೆ ಎಂಬ ಸಾಕಷ್ಟು ದೂರುಗಳು ಬರುತ್ತಿವೆ. ಈ ಕುರಿತು ಎಚ್ಷರಿಕೆವಹಿಸಿ ಸಮಸ್ಯೆ ಇರದಂತೆ ಕೆಲಸ ಮಾಡಿ ಎಂದು ಅವರು ಸೂಚಿಸಿದರು.
ಲಾಕ್ ಡೌನ್ ಮಾಡುವ ಕುರಿತು ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಜಿಲ್ಲವಾರು ಬಂದ್ ಕುರಿತು ಆಯಾ ಜಿಲ್ಲಾಧಿಕಾರಿಗಳು ನಿರ್ಧರಿಸಬೇಕಿದೆ. ಇದುವರೆಗೂ ಜಿಲ್ಲವಾರು ನಿರ್ಧಾರ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ನಾಳೆಯಿಂದ ಬೆಂಗಳೂರ ಮಾತ್ರ ಲಾಕ್ ಡೌನ್ ಕುರಿತು ಸರ್ಕಾರ ಘೋಷಿಸಿದೆ.