ಪ್ರಮುಖ ಸುದ್ದಿ
ಶಹಾಪುರಃ KSRTC ಘಟಕದಲ್ಲಿ ಕೊರೊನಾತಂಕ, 9 ಸಿಬ್ಬಂದಿಗೆ ಕೊರೊನಾ ದೃಢ.?
ಶಹಾಪುರಃ KSRTC ಘಟಕದಲ್ಲಿ ಕೊರೊನಾತಂಕ, 9 ಸಿಬ್ಬಂದಿಗೆ ಕೊರೊನಾ ದೃಢ.?
ಯಾದಗಿರಿಃ ಜಿಲ್ಲೆಯ ಶಹಾಪುರ KSRTC ಘಟಕ ( ಬಸ್ ಡಿಪೋ) ಚಾಲಕ, ನಿರ್ವಾಹಕ ಹಾಗೂ ಸಿಬಬಂದಿ ಒಟ್ಟು 102 ಜನರು ಕಳೆದ ವಾರ ಗಂಟಲು ದ್ರವ ಮತ್ತು ರಕ್ತ ಮಾದರಿ ಪರೀಕ್ಷೆಗೆ ಒಳಪಟ್ಟಿದ್ದರು.
ಇದೀಗ ಪರೀಕ್ಷಾ ವರದಿ ಬಂದಿದ್ದು ಅಂದಾಜು 9 ಜನರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ ಎನ್ನಲಾಗಿದೆ.
ಇಂದು ರಾತ್ರಿ ಅಥವಾ ನಾಳೆ ಆರೋಗ್ಯ ಇಲಾಖೆ ಈ ಕುರಿತು ಮಾಧ್ಯಮಕ್ಕೆ ಅಧಿಕೃತ ವರದಿ ನೀಡಲಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಬಸ್ ಡಿಪೋ ಘಟಕದಲ್ಲಿ ಆತಂಕ ಹೆಚ್ಚಾಗಿದೆ. ಘಟಕದ ಸಿಬ್ಬಂಂದಿಗೆ ಕೊರೊನಾ ಸೋಂಕು ತಗುಲಿರುವ ಕಾರಣ ಬಸ್ ಘಟಕ ಸೀಲ್ ಡೌನ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.