ಪ್ರಮುಖ ಸುದ್ದಿವಿನಯ ವಿಶೇಷ

ಶಹಾಪುರಃ ಮಳೆಗಾಲದಲ್ಲಿ ಕಂಗೊಳಿಸುವ ಸಗರಾದ್ರಿ ಜಲಪಾತ

ಹಸಿರು ಹೊದಿಕೆ ಹೊತ್ತ ಸಗರಾದ್ರಿ ಜನಾಕರ್ಷಣೆ ತಾಣ

ಮಲ್ಲಿಕಾರ್ಜುನ ಮುದ್ನೂರ
yadgiri-ಶಹಾಪುರಃ ನಗರದ  ದಕ್ಷಿಣ ಭಾಗದಲ್ಲಿ ಸಾಲು ಸಾಲಾಗಿ ಕಂಡು ಬರುವ ಬೆಟ್ಟಗುಡ್ಡುಗಳಿಗೆ ಸಗರಾದ್ರಿ ಬೆಟ್ಟವೆಂದು ಕರೆಯಲಾಗುತ್ತದೆ. ಸಗರನಾಡಿನ ಬೆಟ್ಟಗಳನ್ನೆ ಸಗರಾದ್ರಿ ಬೆಟ್ಟ ಎನ್ನಲಾಗುತ್ತಿದೆ. ಇಲ್ಲಿನ ವಿಶ್ವ ಪ್ರಸಿದ್ಧ ಬುದ್ಧ ಮಲಗಿದ ದೃಶ್ಯದ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಷಯ. ನಾಳ್ಕೈದು ಗುಡ್ಡ ಹೊಂದಿಕೊಂಡು ದೂರದಿಂದ ಬುದ್ಧ ಮಲಗಿರುವಂತೆ ಸ್ಪಷ್ಟವಾಗಿ ಕಾಣುತ್ತದೆ.

ಈ ಭಾಗದಲ್ಲಿಯೇ ಗವಿ ಬಸಪ್ಪ ನಾಗ ಬಸಪ್ಪ ಬೆಟ್ಟದ ಪಕ್ಕದಿಂದ ಹರಿದು ಬರುವ ನೀರು ಜಲಪಾತ ಮಳೆಗಾಲದಲ್ಲಿ ನೋಡಲು ಎರಡು ಕಣ್ಣು ಸಾಲದು. ಇಂತಹ ಬಿಸಿಲನಾಡಿನಲ್ಲಿ ಇಂತಹದೊಂದು ಅದ್ಭುತ ಜಲಪಾತ ಮಳೆಗಾದಲ್ಲಿ ಮೈದುಂಬಿಕೊಂಡು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕಳೆದ ಹದಿನೈದು ದಿನದಿಂದ ಸತತ ಮಳೆಯಾಗುತ್ತಿರುವದರಿಂದ ಇದೀಗ ಸಗರಾದ್ರಿ ಜಲಪಾತ ಕಂಗೊಳಿಸುತ್ತಿದೆ.

ಸುತ್ತಲೂ ಹಸಿರು ಸಿರಿ, ಸಗರಾದ್ರಿ ಹಸಿರು ಸೀರೆಯನ್ನುಟ್ಟುಬೀರುತ್ತಿರುವ ಹಾಲಿನ ನೊರೆಯಂಥ ನಗುವಿನ ಚಲುವಿಗೆ ಜನ ಮನಸೋತಿದೆ. ಹೀಗಾಗಿ ಮಳೆ ಬಂದಾಗೊಮ್ಮೆ ಜಲಪಾತ ಹುಡುಕಿಕೊಂಡು ಜನರು ಬರುತ್ತಿದ್ದಾರೆ.  ಪ್ರವಾಸಿ ಪ್ರಿಯರು ನಿತ್ಯ ನೂರಾರು ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಿ ಜಲಪಾತ ಕಂಡು ಕುಣಿದಾಡಿ ಕುಷಿ ಪಡುತ್ತಿದ್ದಾರೆ. ಕೊರೊನಾದಿಂದ ಬೇಸತ್ತ ಜನತೆ  ನಗರ ಇದೀಗ ಈ ಬೆಟ್ಟದಡೆಗೆ ತೆರಳಿ  ಸೌಂದರ್ಯವನ್ನು ಸವಿಯುತ್ತಿದ್ದು, ಕೆಳಗಡೆ ಇರುವ ಚಕ್ ಡ್ಯಾಂನಲ್ಲಿ ಈಜಾಡಿ ಹಸಿರ ಸಿರಿಯ ಸೌಂದರ್ಯ ಕಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ನಾಗಿರಕರು ಫ್ಯಾಮಿಲಿ ಜೊತೆ, ಮಕ್ಕಳನ್ನು ಕರೆದುಕೊಂಡು ಬುತ್ತಿ ಮಾಡಿಕೊಂಡು ಇಲ್ಲಿಗೆ ಆಗಮಿಸಿ ಜಲಪಾತದ ಸುಂದರ ನೋಟ ಕಂಡು ಮೈಮರೆತು ಕೊರೊನಾ ಆತಂಕ ಮರೆಯುತ್ತಿದ್ದಾರೆ ಎಂದರೆ ತಪ್ಪಿಲ್ಲ.

ಮಳೆ ಬಂದಿತೆಂದರೆ ದಾಸನಕೊಳ್ಳ, ಸಗರಾದ್ರಿ ಜಲಪಾತ, ಈ ಭಾಗವೆಲ್ಲ ಹಸಿರು ಮೈದುಂಬಿಕೊಂಡು ಜನರನ್ನು ಆಕರ್ಷಿಸುತ್ತದೆ. ಪ್ರತಿ ಮಳೆಗಾಲದಲ್ಲಿ ಈ ಪ್ರದೇಶ ಮಲೆನಾಡನ್ನು ನೆನಪಿಸುತ್ತದೆ. ಇದೊಂದು ಸುಂದರ ತಾಣವೆನ್ನುತ್ತಾರೆ ಉದ್ಯಮಿ ಜಗಧೀಶ ಹೊನ್ಕಲ್.

ಮಲೆನಾಡಿನ ಅನುಭವ ಈ ಸಗರಾದ್ರಿ ಜಲಪಾತದಲ್ಲಿ ಕಾಣಬಹುದು. ಇಂತಹ ಪ್ರದೇಶ ನಮ್ಮ ಶಹಾಪುರನಲ್ಲಿ ಇದೆ ಎಂಬುದು ತಿಳಿದಿರಲಿಲ್ಲ. ಉದಯವಾಣಿಯಲ್ಲಿ ಕಳದೆ 8 ವರ್ಷದ ಹಿಂದೆ ಈ ಕುರಿತು ಸ್ಟೋರಿ ಮಾಡಲಾಗಿತ್ತು. ಅಂದಿನಿಂದ ನಾವು ಪ್ರತಿ ಮಳೆ ಬಂದಾಗ ಇಲ್ಲಿಗೆ ಬಂದು ಸಂಭ್ರಮಿಸುತ್ತೇವೆ.

-ರಮೇಶ ನಗನೂರ. ಡಿಸಿಸಿ ಬ್ಯಾಂಕ್ ಕ್ಯಾಷಿಯರ್.

—————
ಇದು ಕಾದಿಟ್ಟ ಅರಣ್ಯ ಪ್ರದೇಶವಿದೆ. ಈ ಭಾಗದಲ್ಲಿ ಯಾವುದೇ ಗಿಡಮರಗಳನ್ನು ಕಡಿಯುವದಿಲ್ಲ. ಮಳೆಗಾಲದಲ್ಲಿ ಹಚ್ಚ ಹಸಿರು ತೊಟ್ಟ ಗಿರಿಧಾಮ. ಮಧ್ಯ ಸುಂದರ ಜಲಪಾತ. ಸುಮಾರು ನೂರಡಿ ಎತ್ತರದಿಂದ ಹರಿದು ಬರುವ ನೀರು. ಅತ್ಯಾಕರ್ಷಕವಿದೆ. ಇದೊಂದು ಪ್ರವಾಸಿ ತಾಣವಾಗಿ ನಿರ್ಮಿಸಬಹುದು. ಡಿಗ್ರಿ ಕಾಲೇಜು ಹಿಂಬದಿಯಿಂದ ದಾಸನ ಕೊಳ್ಳ ಹಿಡಿದೆ ಕಾಲ್ನಡಿಗೆಯಲ್ಲಿ ಅರ್ಧ ಕಿ.ಮೀ ಬಂದರೆ ಸಾಕು ಜಲಪಾತ ಸಿಗುತ್ತದೆ. ಇಲ್ಲಿ ನಾಲ್ಕೈದು ಸಣ್ಣ ಪುಟ್ಟ ಜಲಪಾತಗಳು ಕಾಣಬಹುದು. ಇವೆಲ್ಲ ಮಳೆಗಾಲದಲ್ಲಿ ಮಾತ್ರ ಸೌಂದರ್ಯ ಸವಿಯಲು ಸಾಧ್ಯವಿದೆ.

-ರಾಜಕುಮಾರ ಚಿಲ್ಲಾಳ. ಶಹಾಪುರ ನಿವಾಸಿ.

Related Articles

Leave a Reply

Your email address will not be published. Required fields are marked *

Back to top button