ಪ್ರಮುಖ ಸುದ್ದಿ
ಕಲಬುರ್ಗಿ ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರಿಕೆ – ಡಿಸಿ ಶರತ್ ಆದೇಶ
ಕಲಬುರ್ಗಿಃ ಕೊರೊನಾ ಹಾವಳಿ ಜಾಸ್ತಿಯಾದ ಪರಿಣಾಮ ಜಿಲ್ಲೆಯಲ್ಲಿ ಮತ್ತೆ ಒಂದು ವಾರ ಜುಲೈ 27 ರವರೆಗೆ ಲಾಕ್ ಡೌನ್ ಮುಂದುವರೆಸಿ ಜಿಲ್ಲಾಧಿಕಾರಿ ಬಿ.ಶರತ್ ಆದೇಶ ಹೊರಡಿಸಿದ್ದಾರೆ.
ಕೊರೊನಾ ಎಲ್ಲೆಡೆ ಕಬಂಧಬಾಹು ಚಾಚುತಿದ್ದು, ಜನಸಾಮಾನ್ಯರು ಆತಂಕಗೊಳಗಾಗದೆ ಕೊರೊನಾ ತಡೆ ನಿಯಮಾವಳಿ ಯನ್ನು ಚಾಚು ತಪ್ಪದೆ ಪಾಲಿಸುವ ಮೂಲಕ ಕೊರೊನಾ ಹರಡುವಿಕೆಗೆ ಬ್ರೇಕ್ ಹಾಕಬಹುದು ಎಂದು ತಿಳಿಸಿದ ಅವರು, ಮತ್ತೆ ಒಂದು ವಾರದವರೆಗೆ ಅಂದರೆ ಜುಲೈ 27 ರವರೆಗೆ ಲಾಕ್ ಡೌನ್ ಮುಂದುವರೆಸಿ ಆದೇಶಿಸಿರುವ ಕುರಿತು ಮಾಹಿತಿ ನೀಡಿದ್ದಾರೆ.