ಶಹಾಪುರಃ ನಗರಸಭೆ ಮತ್ತು ಅಗ್ನಿಶಾಮಕ ದಳ ಸೀಲ್ ಡೌನ್
ನಗರಸಭೆ ಮತ್ತು ಅಗ್ನಿಶಾಮಕ ದಳ ಸೀಲ್ ಡೌನ್
yadgiri,ಶಹಾಪುರಃ ಕೊರೊನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು, ಇಲ್ಲಿನ ನಗರಸಭೆ ಮತ್ತು ಅಗ್ನಿಶಾಮಕ ದಳ ಕಚೇರಿಗೂ ಕೊರೊನಾ ಒಕ್ಕರಿಸಿದ್ದು, ಎರಡು ಕಚೇರಿ ಸೀಲ್ ಡೌನ್ ಮಾಡಲಾಗಿದೆ.
ನಗರಸಭೆ ಸಿಬ್ಬಂದಿಯೋರ್ವರು ಸೇರಿದಂತೆ ಅಗ್ನಿಶಾಮಕ ದಳದ ನೌಕರರನೋರ್ವನಿಗೆ ಕೋರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಎರಡು ಕಚೇರಿಗಳನ್ನು ಸೀಒಲ್ ಡೌನ್ ಮಾಡಲಾಗಿದೆ. ಅಲ್ಲದೆ ಎರಡು ಕಚೇರಿ ಸಿಬ್ಬಂದಿಗಳನ್ನು ಕೊರೊನಾ ಟೆಸ್ಟಿಂಗ್ಗೆ ಒಳಪಡಿಸಿದ್ದು, ಪರೀಕ್ಷಾ ವರದಿ ಬರುವವರೆಗೂ ನಗರಸಭೆ ಸಿಬ್ಬಂದಿ ಸೇರಿದಂತೆ ಅಗ್ನಿಶಾಮಕ ದಳದ ನೌಕರರು ಹೋಂಕ್ವಾರಂಟೈನ್ ನಲ್ಲಿರಲು ಸೂಚಿಸಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ರಮೇಶ ಗುತ್ತೇದಾರ ತಿಳಿಸಿದ್ದಾರೆ.
ಪಾಸಿಟಿವ್ ಬಂದ ಇಬ್ಬರು ನೌಕರರನ್ನು ಭೀಮರಾಯನ ಗುಡಿಯ ಐಸೋಲೇಷನ್ ವಾರ್ಡ್ನಲ್ಲಿ ರಿಸಲಾಗಿದ್ದು, ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ನಗರಸಭೆ ಮತ್ತು ಅಗ್ನಿಶಾಮಕ ದಳ ಕಚೇರಿ ಎರಡು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದ್ದು, ಕಚೇರಿ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿದೆ. ಮುಖ್ಯಾಧಿಕಾರಿಗಳು ಕರೆ ಮೇರೆಗೆ ಹೊರಗಿನಿಂದಲೇ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.
ನಗರಸಭೆ ಹಾಗೂ ಅಗ್ನಿಶಾಮಕ ದಳ ಕಚೇರಿಗಳನ್ನು ಗುರುವಾರ ಮತ್ತು ಶುಕ್ರವಾರ ಕರ್ತವ್ಯ ನಿರ್ವಹಿಸುವದಿಲ್ಲ. ಅಲ್ಲದೆ ಶನಿವಾರ ಮತ್ತು ರವಿವಾರ ರಜೆ ಇರುವದರಿಂದ ಎರಡು ಕಚೇರಿಗಳನ್ನು ಸ್ಯಾನಿಟೈಸ್ ಮಾಡುವ ಮೂಲಕ ಸೋಮವಾರ ತೆರಯಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ವಿನಯವಾಣಿ ನಮ್ಮ ಅಚ್ಚು ಮೆಚ್ಚಿನ ಪತ್ರಿಕೆ ಯಾಗಿದ್ದು ತಾಜಾ ಸುದ್ದಿಯನ್ನು ಪ್ರಕಟಿಸುವ ಮೂಲಕ ಉತ್ತಮ ಗುಣಮಟ್ಟದ ವಿದ್ಯಮಾನಗಳ ಬಗ್ಗೆ ಮಾಹಿತಿ ಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಇದು ನಮ್ಮ ಕನ್ನಡಿಗರ ಹೆಮ್ಮೆಯ ವಿಷಯ ಹಾಗೂ ಸಂಪಾದಕರು ವರದಿಗಾರರು ತಂತ್ರಜ್ಞರಿಗೆ ಧನ್ಯವಾದಗಳು
Super vani