ಪ್ರಮುಖ ಸುದ್ದಿ

ಯಾದಗಿರಿ: ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್: 69 ಪಾಸಿಟಿವ್, 537 ನೆಗೆಟಿವ್

ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್: 69 ಪಾಸಿಟಿವ್, 537 ನೆಗೆಟಿವ್

ಯಾದಗಿರಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕೊರೊನಾ ವೈರಸ್‍ಗೆ ಸಂಬಂಧಪಟ್ಟಂತೆ ಯಾದಗಿರಿ, ಗುರುಮಠಕಲ್, ಶಹಾಪೂರ, ಸುರಪುರ ಹಾಗೂ ಹುಣಸಗಿ ತಾಲ್ಲೂಕುಗಳಲ್ಲಿ ಭಾನುವಾರ ಒಟ್ಟು 606 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ (ಕೋವಿಡ್-19) ಗಳನ್ನು ನಡೆಸಿದ್ದು, ಈ ಪೈಕಿ 69 ಪಾಸಿಟಿವ್ ಮತ್ತು 537 ನೆಗೆಟಿವ್ ವರದಿ ಬಂದಿವೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾದಗಿರಿ ನಗರದ ಲಕ್ಷ್ಮೀನಗರದಲ್ಲಿ ನಡೆಸಿದ 67 ಟೆಸ್ಟ್‍ಗಳ ಪೈಕಿ 6 ಪಾಸಿಟಿವ್, 61 ನೆಗೆಟಿವ್ ಬಂದಿವೆ. ಅಜೀಜ್ ಕಾಲೊನಿಯಲ್ಲಿ 45 ಟೆಸ್ಟ್‍ಗಳ ಪೈಕಿ 7 ಪಾಸಿಟಿವ್, 38 ನೆಗೆಟಿವ್ ಬಂದಿವೆ. ಕೋಲಿವಾಡದಲ್ಲಿ ನಡೆಸಿದ 88 ಟೆಸ್ಟ್‍ಗಳ ಪೈಕಿ 9 ಪಾಸಿಟಿವ್, 79 ನೆಗೆಟಿವ್ ಬಂದಿವೆ. ಗುರುಮಠಕಲ್‍ನ ಪಂಚಾಯತ್ ಮೊಹಲ್ಲಾದಲ್ಲಿ ನಡೆಸಿದ ಎಲ್ಲಾ 52 ಟೆಸ್ಟ್‍ಗಳು ನೆಗೆಟಿವ್ ಬಂದಿವೆ.

ಶಹಾಪುರದ ಆನೆಗುಂದಿ ಓಣಿಯಲ್ಲಿ ನಡೆಸಿದ ಎಲ್ಲಾ 31 ಟೆಸ್ಟ್‍ಗಳು ನೆಗೆಟಿವ್ ಬಂದಿವೆ. ವಿದ್ಯಾನಗರದಲ್ಲಿ 65 ಟೆಸ್ಟ್‍ಗಳ ಪೈಕಿ 9 ಪಾಸಿಟಿವ್, 56 ನೆಗೆಟಿವ್ ಬಂದಿವೆ. ಆಶ್ರಯ ಕಾಲೊನಿಯ 37 ಟೆಸ್ಟ್‍ಗಳ ಪೈಕಿ 2 ಪಾಸಿಟಿವ್, 35 ನೆಗೆಟಿವ್ ಬಂದಿವೆ. ಸುರಪುರದ ರಂಗಂಪೇಟನಲ್ಲಿ ನಡೆಸಿದ 89 ಟೆಸ್ಟ್‍ಗಳ ಪೈಕಿ 16 ಪಾಸಿಟಿವ್, 73 ನೆಗೆಟಿವ್ ಬಂದಿವೆ. ದಿವಳಗುಡ್ಡದಲ್ಲಿ 10 ಟೆಸ್ಟ್‍ಗಳ ಪೈಕಿ 1 ಪಾಸಿಟಿವ್, 9 ನೆಗೆಟಿವ್ ಬಂದಿವೆ. ಗೋಗಿಕೇರಾದಲ್ಲಿ 30 ಟೆಸ್ಟ್‍ಗಳ ಪೈಕಿ 12 ಪಾಸಿಟಿವ್, 18 ನೆಗೆಟಿವ್ ಬಂದಿವೆ.
ಹುಣಸಗಿ ತಾಲ್ಲೂಕಿನ ಕೊಡೇಕಲ್‍ನಲ್ಲಿ 92 ಟೆಸ್ಟ್‍ಗಳ ಪೈಕಿ 7 ಪಾಸಿಟಿವ್, 85 ನೆಗೆಟಿವ್ ಬಂದಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button