ಶಹಾಪುರಃ ವಿವಿಧ ಬೇಡಿಕೆ ಈಡೇರಿಕೆಗಾಗಿ ಕದಸಂಸ ಒತ್ತಾಯ
ಭೂಸುಧಾರಣೆ ತಿದ್ದುಪಡಿ ಕಾಯ್ದೆ ಜಾರಿ ತಡೆಗೆ ಆಗ್ರಹ
yadgiri, ಶಹಾಪುರಃ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಹಸೀಲ್ ಕಚೇರಿ ಎದುರು ಪರತಿಭಟನೆ ನಡೆಸಿ ತಹಶೀಲ್ದಾರ ಜಗನ್ನಾಥರಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿತು.
ಮುಖಂಡ ನಾಗಣ್ಣ ಬಡಿಗೇರ ಮಾತನಾಡಿ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯಿಂದ ರೈತರಿಗೆ ಅನಾನುಕೂಲವಿದ್ದು, ಕೂಡಲೇ ತಿದ್ದುಪಡಿ ಭೂ ಸುಧಾರಣಾ ಕಾಯ್ದೆ ಜಾರಿಗೊಳಿಸಬಾರದು ಎಂದು ಒತ್ತಾಯಿಸಿದರು.
ಅಲ್ಲದೆ ಸಮಾನ ಭೂಮಿಯನ್ನು ಹಂಚಿಕೆ ಮಾಡಬೇಕು, ಆಸ್ತಿ ಹಕ್ಕು ರದ್ದುಗೊಳಸಬೇಕು, ಕೃಷಿ ಭೂಮಿಯನ್ನಾಗಿ ಪರಿವರ್ತನೆ ಮಾಡಬೇಕು, ರಾಜ್ಯದಲ್ಲಿ ಭೂ ಹೀನರಿಗೆ ಭೂಮಿಯನ್ನು ಮಂಜೂರಿಗೊಳಸಬೇಕು, ಹೆಚ್ಚುವರಿ ಭೂಮಿ ಹೊಂದಿದ ಹಿಡುವಳಿದಾರರಿಂದ ಭೂಮಿಯನ್ನು ಸ್ವಾಧೀನಪÀಸಿಕೊಳ್ಳಬೇಕು ಎಂಬುದು ಸೇರಿದಂತೆ ಹಲವಾರು ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಈಶ್ವರ ರೋಜಾ, ಭೀಮಣ್ಣ ಹಾಲಬಾವಿ, ಪರಶರಾಮ, ಸೋಮರಾಯ, ಶರಣಪ್ಪ ಸಾದು, ಭೀಮಣ್ಣ ಹಾಲಬಾವಿ, ಬಸವಲಿಂಗಪ್ಪ ಹಾಲಬಾವಿ, ಸುರೇಶ ಪೂಜಾರಿ ಸೇರಿದಂತೆ ಇತರರಿದ್ದರು.