ಕಥೆ

ಬಾಳೆಹಣ್ಣು ಪ್ರಸಂಗ ಮತ್ತು ಬಾಲಕನ ರಾಷ್ಟ್ರಪ್ರೇಮ

ದಿನಕ್ಕೊಂದು ಕಥೆ

ಒಮ್ಮೆ ಸ್ವಾಮಿ ವಿವೇಕಾನಂದರು ಜಪಾನ್ ಪ್ರವಾಸಕ್ಕೆ ಹೋಗಿದ್ದರು.
ಅಲ್ಲಿ ಒಂದು ಕಾರ್ಯಕ್ರಮದಲ್ಲಿ ಭಾಷಣ ಮುಗಿಸಿ ತಾವಿದ್ದ ಹೋಟೆಲ್ ಕೊಠಡಿಗೆ ಮರಳಿದಾಗ ರಾತ್ರಿ 8 ಘಂಟೆ ದಾಟಿತ್ತು. ಆಗ ಜೊತೆಯಲ್ಲಿದ್ದ ಜಪಾನ್ ಅಧಿಕಾರಿಗಳು ಸ್ವಾಮೀಜಿಗೆ ಊಟ ಮಾಡಲು ಹೇಳಿದರು.

ಸ್ವಾಮೀಜಿಯು ಈ ದಿನ ನಾನು ಫಲಹಾರ ಬಿಟ್ಟರೆ ಬೇರೇನೂ ಸೇವಿಸುವುದಿಲ್ಲ ಎಂದರು.
ಜಪಾನ್ ಅಧಿಕಾರಿಗಳು ಆಗ ಅಲ್ಲಿಯೇ ಇದ್ದ 8 ವರ್ಷದ ಬಾಲಕನನ್ನು ಕರೆದು 2 ಬಾಳೆಹಣ್ಣು ತಂದು ಸ್ವಾಮೀಜಿಗೆ ಕೊಡಲು ತಿಳಿಸಿ ಹೊರಟು ಹೋದರು..

ಸ್ವಾಮೀಜಿ ಎಷ್ಟು ಹೊತ್ತು ಕಾದರೂ ಹುಡುಗ ಬಾಳೆಹಣ್ಣು ತರಲಿಲ್ಲ. ಕಡೆಗೆ ಮಧ್ಯರಾತ್ರಿ 12 ಘಂಟೆಗೆ
2 ಬಾಳೆಹಣ್ಣು ಕೈಯಲ್ಲಿ ಹಿಡಿದು ಮೈತುಂಬಾ ಬೆವರುತ್ತಾ ಬಂದನು. ಆಗ ಸ್ವಾಮೀಜಿ ಹುಡುಗನಿಗೆ…

ಸ್ವಾಮೀಜಿ : ಯಾಕಪ್ಪಾ ಇಷ್ಟು ತಡವಾಯ್ತು ?

ಹುಡುಗ : ಸ್ವಾಮೀಜಿ ! ನನಗೆ ಬಾಳೆಹಣ್ಣು ತರಲು ಹೇಳಿದಾಗ ರಾತ್ರಿ 9 ಘಂಟೆಯಾಗಿತ್ತು.
ಬಾಳೆಹಣ್ಣಿನ ಅಂಗಡಿ ಮುಚ್ಚಿತ್ತು. ನಮ್ಮ ದೇಶದಲ್ಲಿ ಅಂಗಡಿಗಳೆಲ್ಲಾ 8.30 ಕ್ಕೆ ಮುಚ್ಚಿಬಿಡುತ್ತಾರೆ. ನನಗೆ ಬರೀ ಬಾಳೆಹಣ್ಣು ತರಲು ಮಾತ್ರ ಹಣ ನೀಡಿದ್ದರು ಬೇರೇ ಹಣ ನನ್ನಲ್ಲಿರಲಿಲ್ಲ.

ಬಾಳೆಹಣ್ಣಿನ ಅಂಗಡಿಯವನ ಮನೆ ಅವನ ಅಂಗಡಿಯಿಂದ 5 ಕಿ.ಮಿ ದೂರವಿದೆ. ಅವನ ಮನೆಗೆ ಓಡಿಕೊಂಡು ಹೋಗಿ ಬಾಳೆಹಣ್ಣು ತರಲು ಇಷ್ಟು ತಡವಾಯ್ತು ಕ್ಷಮಿಸಿ……….ಎಂದ

ಆಗ ಸ್ವಾಮೀಜಿಗೆ ದುಃಖ ತಡೆಯಲಾಗದೆ ಕಣ್ಣಲ್ಲಿ ನೀರು ಬಂದಿತು…..ಆಗ..

ಸ್ವಾಮೀಜಿ : ಮಗು. ನನ್ನಿಂದ ನಿನಗೆಷ್ಟು ತೊಂದರೆಯಾಯ್ತು. ನಿನಗೇನು ಬೇಕೋ ಕೇಳು ಕೊಡುತ್ತೇನೆ. ನಾನು ಸನ್ಯಾಸಿಯೇ ಇರಬಹುದು. ಆದರೆ ನನ್ನ ರಾಷ್ಟ ರತ್ನಗರ್ಭಿತವಾದ ಭಾರತ ರಾಷ್ಟ. ಭಾರತ ನನ್ನ ದೇಶ.ನಿನಗೇನು ಬೇಕೋ ಕೇಳು ಅದನ್ನು ತರಿಸಿಕೊಟ್ಟು ನಾನು ಇಲ್ಲಿಂದ ಹೋಗುತ್ತೇನೆ.

ಹುಡುಗ : ಸ್ವಾಮೀಜಿ. ಏನು ಕೇಳಿದರೂ ಕೊಡುತ್ತೀರಾ ?
ಸ್ವಾಮೀಜಿ : ಹೂ..ಕೇಳು ಮಗು.
ಹುಡುಗ : ಸ್ವಾಮೀಜಿ ಹಾಗಾದ್ರೆ ನನಗೊಂದು ಭಾಷೆ ಕೊಡಿ.
ಸ್ವಾಮೀಜಿ : ಏನು ?
ಹುಡುಗ : ನೀವು ಇಲ್ಲಿಂದ ಭಾರತಕ್ಕೆ ಹೋದ ಮೇಲೆ ಜಪಾನ್ ದೇಶದಲ್ಲಿ ತಿನ್ನಲು 2 ಬಾಳೆಹಣ್ಣು
ಸಿಗಲಿಲ್ಲ ಅಂತ ಎಲ್ಲೋ ಹೇಳುವುದಿಲ್ಲ ಅಂತ ಭಾಷೆ ಕೊಡಿ ಸ್ವಾಮೀಜಿ……………….ಅಂದನು
…..ಹುಡುಗನ ರಾಷ್ಟ್ರಪ್ರೇಮ ಕಂಡು ಸ್ವಾಮೀಜಿ ಕಣ್ಣಲ್ಲಿ ನೀರು ಬಂದು
ಹಾಗೇ ಆಗಲಿ ಎಂದು ಹುಡುಗನಿಗೆ ಭಾಷೆ ಕೊಟ್ಟರು.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button