ಚಿಂತಕ, ಸಾಹಿತಿ ಸತ್ಯಂಪೇಟೆ ಮೇಲೆ ದಾಖಲಿಸಿದ ಪ್ರಕರಣ ರದ್ದತಿಗೆ ಆಗ್ರಹ
ಚಿಂತಕ, ಸಾಹಿತಿ ಸತ್ಯಂಪೇಟೆ ಮೇಲೆ ದಾಖಲಿಸಿದ ಪ್ರಕರಣ ರದ್ದತಿಗೆ ಆಗ್ರಹ
ಶಹಾಪುರಃ ವೈಚಾರಿಕ ಚಿಂತನೆ, ಸಾಮಾಜಿಕ ಕಳಕಳಿ ಹೊಂದಿzದೀ ಭಾಗದ ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ ಅವರ ಮೇಲೆ ವೈಚಾರಿಕತೆ ವಿರೋಧಿಗಳು ದಾವಣಗೆರೆಯ ಹೊನ್ನಾಳಿಯಲ್ಲಿ ಪ್ರಕರಣ ದಾಖಲಿಸಿರುವದು ಕೂಡಲೇ ರದ್ದುಗೊಳಿಸಬೇಕೆಂದು ಆಗ್ರಹಿಸಿ ಇಲ್ಲಿನ ಎಸ್ಡಿಪಿಐ ಸಂಘಟನೆ ಕಾರ್ಯಕರ್ತರು ತಹಶೀಲ್ದಾರರ ಮೂಲಕ ಸಿಎಂ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದರು.
ಶರಣ ತತ್ವ ಪ್ರಸಾರಕ, ಬಸವ ಅನುಯಾಯಿ ವಿಶ್ವರಾಧ್ಯ ಸತ್ಯಂಪೇಟೆ ಅವರು ವೈಚಾರಿಕ ಹಿನ್ನೆಲೆಯಲ್ಲಿ ಮಾತನಾಡುವವರಾಗಿದ್ದು, ಅವರ ಬರಹಗಳು ಸಹ ಹರಿತವಾಗಿರಲಿವೆ. ಈ ಕಾರಣಕ್ಕೆ ಸನಾತನವಾದಿಗಳು ಇವರ ನಡೆಯನ್ನು ವಿರೋಧಿಸುತ್ತಿದ್ದು, ಇವರ ಮೇಲೆ ಸಲ್ಲದ ಆರೋಪ ಮಾಡಿ ಪ್ರಕರಣ ದಾಖಲಿಸಿರುವದು ಸರಿಯಲ್ಲ. ಕೂಡಲೇ ಹೊನ್ನಾಳಿಯಲ್ಲಿ ದಾಖಲಿಸಿದ ಪ್ರಕರಣ ಹಿಂಪಡೆಯಬೇಕು. ಸರ್ಕಾರ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಮನವಿ ಮಾಡಿದರು.
ಫೇಸ್ ಬುಕ್ನಲ್ಲಿ ಲಿಂಗೈಕ್ಯ ಹೊನ್ನಾಳಿ ಶ್ರೀಗಳ ಬಗ್ಗೆ ಅವಮಾನಕರ ಸಂಗತಿ ಬರೆದಿರುವದನ್ನು ಪ್ರಶ್ನಿಸಿ ಹೊನ್ನಾಳಿಯಲ್ಲಿ ಸನಾತನವಾದಗಳು ಪ್ರಕರಣ ದಾಖಲಿಸಿದ್ದಾರೆ. ಇಜಕ್ಕೂ ಅಂತಹ ವಾಕ್ಯಗಳು ಅಲ್ಲಿ ಕಂಡು ಬರುವದಿಲ್ಲ. ಎಲ್ಲವೂ ತಿಳುವಳಿಕೆಯ ವೈಚಾರಿಕತೆ ಹಿನ್ನೆಲೆ ದಾಖಲಿಸಿರುವುದು ಗೊತ್ತಾಗುತ್ತದೆ. ಆದರೆ ಉದ್ದೇಶಪೂರ್ವಕವಾಗಿ ಯಾರದೋ ಒತ್ತಡದಿಂದ ಅಲ್ಲಿನ ಕೆಲವರು ಸನಾತನವಾದಿಗಳು ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ಪರಿಶೀಲಿಸಿ ಕೂಡಲೇ ಪ್ರಕರಣ ರದ್ದುಗೊಳಿಸಬೇಕೆಂದು ಆಗ್ರಹಿಸಿದರು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ, ಧರಣಿ ನಡೆಸಲು ಹಿಂಜರಿಯುವದಿಲ್ಲ ಎಂದು ಸಂಘಟಕರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎಸ್ಡಿಪಿಐ ಅಧ್ಯಕ್ಷ ಸಯ್ಯದ್ ಖಾಲಿದ್ ಸೇರಿದಂತೆ ಕಾರ್ಯಕರ್ತರು ಇತರರಿದ್ದರು.