ಶಹಾಪುರಃ ಶವ ಸಂಸ್ಕಾರಕ್ಕೆ ಭೂಮಿ ಒದಗಿಸಲು ಮನವಿ
ಶವ ಸಂಸ್ಕಾರಕ್ಕೆ ಭೂಮಿ ಒದಗಿಸಲು ಮನವಿ
ಶಹಾಪುರಃ ತಾಲೂಕಿನ ತಿಪ್ಪನಟಗಿ ಗ್ರಾಮದ ಮಾದಿಗ ಸಮುದಾಯಕ್ಕೆ ಸ್ಮಶಾನ ಭೂಮಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಇಲ್ಲಿನ ತಾಲೂಕು ಕರ್ನಾಟಕ ಮಾದಿಗರ ಸಂಘ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿತು.
ತಿಪ್ಪನಟಗಿ ಗ್ರಾಮದಲ್ಲಿ ಕಳೆದ ವಾರ ಮಾದಿಗ ಸಮುದಾಯದ ಮಹಿಳೆಯೋರ್ವಳು ಮೃತಪಟ್ಟಾಗ ಗ್ರಾಮದ ಸ್ಮಶಾನದಲ್ಲಿ ಸಂಸ್ಕಾರ ಮಾಡಲಿ ತಡೆಯೊಡ್ಡಲಾಯಿತು. ಈ ಮೊದಲಿನಿಂದಲೂ ಇದೇ ಜಾಗದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುತ್ತಿದೆ. ಹೀಗೇಕೆ ನಿರಾಕರಿಸುವಿರಿ ಎಂದು ಕೇಳಿದ್ದಕ್ಕೆ ಸ್ಮಶಾನದ ಜಮೀನು ಅವರ ಸ್ವಂತದ್ದು ಇರುವ ಕಾರಣ ಇನ್ಮುಂದೆ ಈ ಜಾಗದಲ್ಲಿ ಯಾರೊಬ್ಬರು ಅಂತ್ಯ ಸಂಸ್ಕಾರ ನೆರವೇರಿಸುವಾಗಿಲ್ಲ ಎಂದು ತಿಳಿಸಿದ್ದಾರೆ.
ಹೀಗಾಗಿ ಮಾದಿಗ ಸಮುದಾಯದ ಜನಕ್ಕೆ ಸ್ಮಶಾನ ಭೂಮಿ ಇಲ್ಲದೆ ಪರದಾಡುವ ಸ್ಥಿತಿ ಬಂದಿದೆ. ಕೂಡಲೇ ತಾಲೂಕು ಆಡಳಿತ ಮಾದಿಗ ಸಮಾಜಕ್ಕೆ ಸ್ಮಶಾನ ಭೂಮಿ ಮಂಜೂರಿ ಮಾಡಬೇಕೆಂದು ಆಗ್ರಹಿಸಿತು. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಸ್ಮಶಾನ ಭೂಮಿ ಮಂಜೂರಿ ಮಾಡಬೇಕು ಇಲ್ಲವಾದಲ್ಲಿ ಸಮುದಾಯದ ಯಾರಾದರೂ ಮೃತಪಟ್ಟಲ್ಲಿ ಶವದೊಂದಿಗೆ ತಾಲೂಕೂ ಆಡಳಿತ ಕಚೇರಿಗೆ ಆಗಮಿಸಬೇಕಾದ ಅನಿವಾರ್ಯತೆ ಉಂಟಾಗಲಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶಿವಕುಮಾರ ದೊಡ್ಮನಿ, ಅವಿನಾಶ ಗುತ್ತೇದಾರ, ಹೊನ್ನಪ್ಪ ನಾಟೇಕಾರ, ಸೋಪಣ್ಣ ಸಗರ, ಅನಿಲಕುಮಾರ ದೋರನಹಳ್ಳಿ ಸೇರಿದಂತೆ ಗ್ರಾಮಸ್ಥರಾದ ಮರೆಪ್ಪ ರತ್ತಾಳ, ಭೀಮರಾಯ ರತ್ತಾಳ, ನಿಂಗಣ್ಣ, ಮರೆಪ್ಪ ಉಮರದೊಡ್ಡಿ, ಭೀಮರಾಯ, ಹುಲಗಪ್ಪ, ರಾಯಪ್ಪ ಸೂಗೂರ ಇತರರಿದ್ದರು.