ಪ್ರಮುಖ ಸುದ್ದಿ
ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿಕ ನಿವಾಸ.? ಜಮೀನಿಗಾಗಿ ಸಿಎಂ ಪತ್ರ
ಅಯೋಧ್ಯೆಯಲ್ಲಿ 2 ಎಕರೆ ಭೂಮಿ ನೀಡುವಂತೆ ಯೋಗಿಗೆ BSY ಪತ್ರ
ಬೆಂಗಳೂರಃ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಕರ್ನಾಟಕಕ್ಕೆ ಎರಡು ಎಕರೆ ಜಮೀನು ನೀಡುವಂತೆ ಸಿಎಂ ಯಡಿಯೂರಪ್ಪ ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ್ ಗೆ ಪ್ರತ ಬರೆದು ಮನವಿ ಮಾಡಿದ್ದಾರೆ.
ಪತ್ರದಲ್ಲಿ ಆ.5 ರಂದು ಶ್ರೀರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮ ಕುರಿತು ಸಂತಸ ವ್ಯಕ್ತಪಡಿಸಿದ ಯಡಿಯೂರಪ್ಪ, ಅಯೋಧ್ಯೆಗೆ ಕರ್ನಾಟಕದಿಂದ ಶ್ರೀರಾಮನ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಬರಲಿದ್ದು, ಕರುನಾಡಿನ ಭಕ್ತರಿಗಾಗಿ ಯಾತ್ರಿಕ ನಿವಾಸ ಕಟ್ಟಡ ನಿರ್ಮಾಣ ಮಾಡಬೇಕಿದೆ. ಈ ಭಾಗದಿಂದ ಬರುವ ಭಕ್ತರಿಗೆ ಅಯೋಧ್ಯೆಯಲ್ಲಿ ಸಮರ್ಪಕ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಭೂಮಿ ಅಗತ್ಯವಿದೆ.
ಹೀಗಾಗಿ ಉತ್ತರಪ್ರದೇಶ ಸರ್ಕಾರ ಎರಡು ಎಕರೆ ಜಮೀನು ನೀಡಬೇಕು ಎಂದು ಸಿಎಂ ಯಡಿಯೂರಪ್ಪ ಪತ್ರ ಮುಖೇನೆ ಮನವಿ ಮಾಡಿದ್ದಾರೆ.