ಪರೀಕ್ಷಾ ಕೇಂದ್ರಗಳಿಗೆ ಕೆಪಿಎಸ್ಸಿ ಸದಸ್ಯ ಡಾ.ರಂಗರಾಜ ಭೇಟಿ, ಪರಿಶೀಲನೆ
ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಸಹಾಯಕ ನಿಯಂತ್ರಕರು ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆ
ಪರೀಕ್ಷಾ ಕೇಂದ್ರಗಳಿಗೆ ಕೆಪಿಎಸ್ಸಿ ಸದಸ್ಯ ಡಾ.ರಂಗರಾಜ ವನದುರ್ಗ ಭೇಟಿ, ವೀಕ್ಷಣೆ..
ಕಲಬುರಗಿ: ಕರ್ನಾಟಕ ಲೋಕಸೇವಾ ಆಯೋಗದಿಂದ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಸಹಾಯಕ ನಿಯಂತ್ರಕರ ಹುದ್ದೆಗಳ ಭರ್ತಿಗೆ ಸೋಮವಾರ ಕಲಬುರಗಿಯಲ್ಲಿ ನಡೆದ ಪೂರ್ವಭಾವಿ ಪರೀಕ್ಷೆಯ ಕೇಂದ್ರಗಳಿಗೆ ಕೆಪಿಎಸ್ಸಿ ಸದಸ್ಯ ಡಾ.ರಂಗರಾಜ ವನದುರ್ಗ ಭೇಟಿ ನೀಡಿ ಪರಿಶೀಲಿಸಿದರು.
ನಗರದ ಜಿಲ್ಲಾ ಕೋಟ್೯ ರಸ್ತೆಯ ಪಕ್ಕದ ಶ್ರೀಮತಿ ಪಿಲ್ಲೂ ಹೋಮಿ ಇರಾಣಿ ಮಹಿಳಾ ಮಹಾವಿದ್ಯಾಲಯ, ಮಹರ್ಷಿ ವಿದ್ಯಾಮಂದಿರ ಶಾಲೆ ಸೇರಿ ನಾನಾ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಸುಸೂತ್ರವಾಗಿ, ನಿಯಮಾನುಸಾರ ಮತ್ತು ಪಾರದರ್ಶಕವಾಗಿ ಪರೀಕ್ಷೆಗಳು ನಡೆಯುತ್ತಿವೆಯೋ ಇಲ್ಲವೆಂಬ ಕುರಿತು ಪರಿಶೀಲನೆ ನಡೆಸಿದರು.
ಪರೀಕ್ಷಾ ಕೇಂದ್ರಗಳ ಬಹುತೇಕ ಕೋಣೆಗಳಿಗೆ ಭೇಟಿ ನೀಡಿ, ವೀಕ್ಷಿಸಿದರು. ಪರೀಕ್ಷಾ ವಿಧಾನ ಪ್ರಕ್ರೀಯೆ ಕುರಿತು ಮಾಹಿತಿ ಪಡೆದರು.
ಪರೀಕ್ಷೆಗೆ 2 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳುಃ ನಗರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಸಹಾಯಕ ನಿಯಂತ್ರಕರು ಹುದ್ದೆಗಳಿಗೆ 2052 ಪರೀಕ್ಷಾರ್ಥಿಗಳು ಪೂರ್ವ ಭಾವಿ ಪರೀಕ್ಷೆಯ ಪ್ರಥಮ ಪತ್ರಿಕೆ ಸಾಮಾನ್ಯ ಅಧ್ಯಯನ, ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣೆ ದ್ವಿತೀಯ ಪತ್ರಿಕೆ ಬರೆದರು.
…
ರಾಜ್ಯ ಸರಕಾರದ ಮಾರ್ಗಸೂಚಿಯ ಪ್ರಕಾರವೇ ಕೆಪಿಎಸ್ಸಿ ಈ ಪರೀಕ್ಷೆಗಳನ್ನು ನಡೆಸುತ್ತಿದೆ. ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳು ಯಾವುದೇ ಆತಂಕವಿಲ್ಲದೇ ಖುಷಿಯಿಂದ ಪರೀಕ್ಷೆ ಬರೆದಿದ್ದಾರೆ. ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲಿಸಲಾಯಿತು. ಆತ್ಮಸ್ಥೈರ್ಯದಿಂದ ಕ.ಕ.ಅಭ್ಯರ್ಥಿ ಸ್ಪರ್ಧೆಗೆ ತಮ್ಮನ್ನು ತಾವು ಒಡ್ಡಿಕೊಂಡಿದ್ದು, ಸಂತಸದ ಸಂಗತಿ.
-ಡಾ.ರಂಗರಾಜ ವನದುರ್ಗ, ಸದಸ್ಯರು, ಕರ್ನಾಟಕ ಲೋಕಸೇವಾ ಆಯೋಗ ಬೆಂಗಳೂರು.
****
ಸರಕಾರದ ಸೂಚನೆಗಳಂತೆ ಕೆಪಿಎಸ್ಸಿ ಅತ್ಯಂತ ಸುರಕ್ಷಿತವಾಗಿ ಪರೀಕ್ಷೆ ನಡೆಸಿದೆ. ಕೊರೊನಾದ ಆತಂಕವಿಲ್ಲದೇ ಧೈರ್ಯವಾಗಿ ಪರೀಕ್ಷೆ ಹಾಜರಾಗಿ ಬರೆದಿದ್ದೇನೆ.–ಹೆಸರೆಳಲ್ಚಿಸಿದ ಪರೀಕ್ಷಾರ್ಥಿ, ಕಲಬುರಗಿ ಪರೀಕ್ಷಾ ಕೇಂದ್ರ.




