ಯಾವುದು ದೊಡ್ಡತನ.? ಡಾ.ಈಶ್ವರಾನಂದ ಶ್ರೀಗಳ ಬರಹ ಓದಿ
ದಿನಕ್ಕೊಂದು ಕಥೆ
ದೊಡ್ಡತನ
ಒಂದು ದಿನ 9 ಇದೆಯೆಲ್ಲ ಅದು 8 ನ್ನು ಹೊಡೆಯಿತು, ಅದಕ್ಕೆ ಪ್ರತ್ಯುತ್ತರವಾಗಿ 8 ನನಗೆ ಯಾಕೆ ಹೊಡೆದೆ ನೀನು ಎಂದು 9 ನ್ನು ಕೇಳಿತು, ಅದಕ್ಕೆ 9 ಹೇಳಿತು ಹೇಯ್ ನಾನು ನಿನಗಿಂತ ದೊಡ್ಡವನು ಅದಕ್ಕೆ ಹೊಡೆದೆ ಎಂದು,
ಸರಿ 8 ತನಗಿಂತ ಚಿಕ್ಕವನಾದ 7 ನ್ನು ಹೊಡೆಯಿತು, ಅದಕ್ಕೆ ಪ್ರತ್ಯುತ್ತರವಾಗಿ 7 ನನಗೆ ಯಾಕೆ ಹೊಡೆದೆ ನೀನು ಎಂದು 8 ನ್ನು ಕೇಳಿತು, 8 ಕೂಡ ಅದೇ ತರ ಉತ್ತರ ಕೊಟ್ಟಿತು,
ಇದೆ ರೀತಿಯಾಗಿ 7 , 6 ನ್ನು,, 6 , 5 ನ್ನು, 5 4. ನ್ನು 4, 3. ನ್ನು 3, 2. ನ್ನು 2. 1. ನ್ನು ಹೊಡೆಯಿತು, ಇನ್ನು ಉಳಿದಿರುವುದು, (1)ಒಂದು (0)ಸೊನ್ನೆಗೆ ಹೊಡೆಯಬೇಕು, ಆದರೆ ಅದು ಹಾಗೆ ಮಾಡಲಿಲ್ಲ,
1 ಸ್ವಲ್ಪ ಯೋಚನೆ ಮಾಡಿ (೦) ಸೊನ್ನೆಯನ್ನು ಸ್ನೇಹ ಪ್ರೀತಿಯಿಂದ ಕರೆದು ತನ್ನ ಪಕ್ಕದಲ್ಲಿ ಕೂರಿಸಿಕೊಂಡು ಎಲ್ಲರಿಗಿಂತ (10)ದೊಡ್ಡದಾಯಿತು
ಸ್ನೇಹಿತರೇ, ಒಬ್ಬರನ್ನೋಬ್ಬರು ಹೊಡೆಯುವುದರಿಂದ ಯಾರೂ ದೊಡ್ದವರಾಗುವುದಿಲ್ಲ, *ಸ್ನೇಹ, ಪ್ರೀತಿ, ವಿಶ್ವಾಸದಿಂದ ಜನರನ್ನು ಸಂಪಾದಿಸಬೇಕು ನಿಜವಾಗಿಯೂ ಅವರೇ ದೊಡ್ಡವರು……
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882